ಬೆಂಗಳೂರು ಉಪನಗರ ರೈಲು ಯೋಜನೆ; ಕಾರಿಡಾರ್​ಗಳ ಕಾಮಗಾರಿ ಒಪ್ಪಂದ ಉಲ್ಲಂಘಿಸಿದ L&T

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್ಪ್ರೈಸ್ (ಕೆ-ರೈಡ್​) ಜೊತೆ ಮಾಡಿಕೊಂಡಿದ್ದ 2 ಒಪ್ಪಂದಗಳನ್ನು ನಿಗದಿತ ಸಮಯ ಅಂದರೆ 27 ತಿಂಗಳಲ್ಲಿ ಪೂರ್ಣಗೊಳಿಸದೇ ಎನ್​​ ಆ್ಯಂಡ್ ಟಿ ಉಲ್ಲಂಘನೆ ಮಾಡಿದೆ.

author-image
Bhimappa
L_T_KRAID
Advertisment

ಬೆಂಗಳೂರು: ಲಾರ್ಸನ್ ಆ್ಯಂಡ್ ಟೂರ್ಬ್​ (ಎಲ್ & ಟಿ) ಸಂಸ್ಥೆಯು ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್-2 ಮತ್ತು 4 ಕಾಮಗಾರಿಯ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ. ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್ಪ್ರೈಸ್ (ಕೆ-ರೈಡ್​) ಜೊತೆ ಮಾಡಿಕೊಂಡಿದ್ದ 2 ಒಪ್ಪಂದಗಳನ್ನು ನಿಗದಿತ ಸಮಯ ಅಂದರೆ 27 ತಿಂಗಳಲ್ಲಿ ಪೂರ್ಣಗೊಳಿಸದೇ ಎನ್​​ ಆ್ಯಂಡ್ ಟಿ ಉಲ್ಲಂಘನೆ ಮಾಡಿದೆ. 

ಕಾರಿಡಾರ್-2 (ಚಿಕ್ಕಬಣಾವರದಿಂದ ಬೆನ್ನಿಗಾನಹಳ್ಳಿ) ಯೋಜನೆಯ ಗಡುವು  ವಿಸ್ತರಿಸಿ 2026ರ ಸೆಪ್ಟೆಂಬರ್​ 30ರ ವರೆಗೆ ನಿಗದಿಯಾಗಿದೆ. ಅದರಂತೆ ಕಾರಿಡಾರ್-4 (ಹೀಲಾಳಿಗೆ-ರಾಜನಕುಂಟೆ)ರ ಯೋಜನೆಯ ಗಡುವು 2026ರ ಅಕ್ಟೋಬರ್​ವರೆಗೆ ಇದೆ. ಯಾವುದೇ ಒಪ್ಪಂದ ರದ್ದುಗೊಳಿಸುವ ಅಧಿಕಾರವಿಲ್ಲ ಎಲ್ & ಟಿಗೆ ಇಲ್ಲ. ಆದರೂ, 2025ರ ಜುಲೈ 31 ರಿಂದಲೇ ಈ ಎರಡು ಕಾರಿಡಾರ್ ಕಾಂಟ್ರಾಕ್ಟ್‌ಗಳನ್ನು ತಕ್ಷಣದಿಂದಲೇ ರದ್ದುಗೊಳಿಸಿರುವುದಾಗಿ ಹೇಳಿದೆ. ಹೀಗಾಗಿ ಇಲ್ಲಿ ಒಪ್ಪಂದ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. 

ಎಲ್ & ಟಿಯು ಒಪ್ಪಂದ ಅವಧಿಯಲ್ಲೇ ಒಪ್ಪಂದದ ಬೆಲೆಯ ಪರಿಷ್ಕರಣೆ ಹಾಗೂ ಇಪಿಸಿ ಒಪ್ಪಂದವನ್ನು ಬಿಒಕ್ಯೂ (items-wise) ಒಪ್ಪಂದವಾಗಿ ಪರಿವರ್ತನೆ ಬೇಡಿಕೆ ಮುಂದಿರಿಸಿದೆ. ಇದು ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿದೆ. ಎಲ್ & ಟಿ ಮಾಡಿದ ಎಲ್ಲ ಬೇಡಿಕೆಗಳನ್ನ ಒಪ್ಪಂದದ ನಿಯಮದಂತೆ ಕೆ-ರೈಡ್​ ಗಮನಕ್ಕೆ ತೆಗೆದುಕೊಂಡಿದೆ. ಭೂಮಿ ಲಭ್ಯ ಇಲ್ಲ ಎಂದು ಕಾರಣ ನೀಡಿ ಒಪ್ಪಂದದವನ್ನು ವಿಸ್ತರಣೆಗೆ ಅವಕಾಶ ಇದೆ. ಆದರೆ ಇದನ್ನು ಮಾಡದೇ ಸಂಸ್ಥೆಯು ಏಕಪಕ್ಷೀಯವಾಗಿ ಕೆಲಸಗಳನ್ನು ರದ್ದುಗೊಳಿಸಿದೆ.  

ಇದನ್ನೂ ಓದಿ:ಪ್ರಜ್ವಲ್​ ರೇವಣ್ಣ ವಿರುದ್ಧ ಎಷ್ಟು ಸಾಕ್ಷ್ಯಗಳಿದ್ದವು.. ಸರ್ಕಾರಿ ಅಭಿಯೋಜಕರು, ವಕೀಲರು ಯಾರು ಯಾರು?

L_T_KRAID_1

ಎಲ್ & ಟಿಯ ಮನವಿಯಂತೆ, ಹಣಕಾಸು ಸಂಬಂಧಿತ ಬೇಡಿಕೆಗಳನ್ನು ಸೌಹಾರ್ದ ಸಮಿತಿಗೆ ಒಪ್ಪಿಸಲಾಗಿತ್ತು. ಇದರ ನಡುವೆ ರದ್ದು ಮಾಡಿದೆ. ಇದು ಯೋಜನೆಯ ನಿರ್ಲಕ್ಷ್ಯವಾಗಿದೆ. ಕಾರಿಡಾರ್​ 2ರಲ್ಲಿ ಒಟ್ಟು ಉದ್ದ ಶೇ.84 ರಷ್ಟು ಹಾಗೂ ಕಾರಿಡಾರ್​ 4 ರಲ್ಲಿ 17 ಕಿಲೋ ಮೀಟರ್​ವರೆಗೆ ಸ್ಥಳ ಇನ್ನೂ ಇದೆ. ಇಲ್ಲಿ ಕೆಲಸ ಮಾಡದೇ ಕಾರ್ಯಸ್ಥಳ ಲಭ್ಯವಿಲ್ಲ ಎಂದು ಸಂಸ್ಥೆ ಹೇಳುತ್ತಿರುವುದನ್ನ ಕೆ-ರೈಡ್​ ಖಂಡನೆ ಮಾಡಿದೆ. 

ಎಲ್ & ಟಿಯು ಕಾರಿಡಾರ್ 2 ಮತ್ತು 4ರಲ್ಲಿ ಯೋಜನಾ ನಿರ್ವಾಹಕ (Project Manager)ರನ್ನು ಪದೇ ಪದೇ ಬದಲಾಯಿಸಿರುವುದು, ಅಗತ್ಯ ಸಂಪತ್ತುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು, ವಿನ್ಯಾಸ ಅಂತಿಮೀಕರಣದಲ್ಲಿ ವಿಳಂಬ ಮಾಡಿರುವುದು ಕಾಮಗಾರಿ ಪ್ರಗತಿಗೆ ಕುಂಠಿತವಾಗಿದೆ. ಈ ಬಗ್ಗೆ ಕೆ-ರೈಡ್​ ಅಧಿಕಾರಿಗಳು ಎಲ್​​ & ಟಿಗೆ ಹಲವು ಬಾರಿ ಸೂಚನೆ ನೀಡಿದರೂ ಕಾಮಗಾರಿ ಪೂರ್ಣವಾಗಿ ಮಾಡಿಲ್ಲ. ಹೀಗಾಗಿ ಕೆ-ರೈಡ್​ ಈಗ ಕಾರಿಡಾರ್-2 ಮತ್ತು ಕಾರಿಡಾರ್-4 ರಲ್ಲಿ ಉಳಿದ ಕೆಲಸಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

L&T
Advertisment