ಭಾರತದ ಗೆಲುವಿಗೆ ಬೂಮ್ರಾರನ್ನೇ ನಂಬಿದ್ರಾ..? ಮುಂಬೈಕರ್​​ ಆಡಿದ ಪಂದ್ಯಗಳಲ್ಲಿ ಸೋಲು!

ಇಂಗ್ಲೆಂಡ್ ಪ್ರವಾಸದ ಆರಂಭದಿಂದಲೂ ಬೂಮ್ರಾ, ವರ್ಕ್​ಲೋಡ್​ನದ್ದೇ ಚರ್ಚೆಯಾಗ್ತಿದೆ. ಪ್ರತಿ ಪಂದ್ಯದ ಆರಂಭಕ್ಕೂ ಮುನ್ನ, ಪಂದ್ಯ ಮುಕ್ತಾಯದ ನಂತರ ಬೂಮ್ರಾ ಆಡ್ತಾರಾ ಇಲ್ವಾ ಅನ್ನೋದೇ ಗೊಂದಲದ ಗೂಡಾಗ್ತಿದೆ.

author-image
Bhimappa
jasprit_Bumrah
Advertisment

ಇಂಡೋ, ಇಂಗ್ಲೆಂಡ್ ನಡುವಿನ  ಅಂತಿನ ಟೆಸ್ಟ್​ ಭರದಿಂದ ಸಾಗ್ತಿದೆ. ಈ ಕೊನೆ ಮ್ಯಾಚ್ ಗೆದ್ದು ಸರಣಿ ಸಮಬಲ ಸಾಧಿಸೋ ಯತ್ನದಲ್ಲಿದೆ. ಆದ್ರೆ, ಈ ನಡುವೆ ಜಸ್​ಪ್ರಿತ್​ ಬೂಮ್ರಾ ವಿಚಾರವಾಗಿಯೇ ಬಿಸಿಸಿಐ ಅಸಮಾಧಾನಗೊಂಡಿದೆ. ಬೂಮ್ರಾರ ವರ್ಕ್​ಲೋಡ್​​ ಹೊಸ ವಿವಾದಕ್ಕೆ ನಾಂದಿಯಾಡಿದೆ. ಇದು ಬಿಸಿಸಿಐ ವರ್ಸಸ್ ಟೀಮ್ ಮ್ಯಾನೇಜ್​​​​ಮೆಂಟ್ ಕಿತ್ತಾಟಕ್ಕೆ ಕಾರಣವಾಗಿದೆ.

ಒಂದೂವರೆ ತಿಂಗಳ ಇಂಗ್ಲೆಂಡ್ ಪ್ರವಾಸದ ಅಂತ್ಯಕ್ಕೆ ಬಂದಾಗಿದೆ. ಟೆಸ್ಟ್ ಸರಣಿ ಇಂಗ್ಲೆಂಡ್ ಪಾಲಾಗುತ್ತಾ..? ಸಮಬಲವಾಗುತ್ತಾ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಹೊರಬರಬೇಕಿದೆ. ಆದ್ರೆ, ಈ ಪ್ರಶ್ನೆಯ ಹುಡುಕಾಟದ ನಡುವೆ ವೇಗಿ ಜಸ್​ಪ್ರೀತ್ ಬೂಮ್ರಾ ವಿಚಾರವಾಗಿ ಬಿಗ್​​ಬಾಸ್​ಗಳು ಫುಲ್​​​ ಗರಂ ಆಗಿದ್ದಾರೆ. 

Bumrah_GILL_JADEJA

ಇಂಗ್ಲೆಂಡ್ ಪ್ರವಾಸದ ಆರಂಭದಿಂದಲೂ ಬೂಮ್ರಾ, ವರ್ಕ್​ಲೋಡ್​ನದ್ದೇ ಚರ್ಚೆಯಾಗ್ತಿದೆ. ಪ್ರತಿ ಪಂದ್ಯದ ಆರಂಭಕ್ಕೂ ಮುನ್ನ, ಪಂದ್ಯ ಮುಕ್ತಾಯದ ನಂತರ ಬೂಮ್ರಾ ಆಡ್ತಾರಾ ಇಲ್ವಾ ಅನ್ನೋದೇ ಗೊಂದಲದ ಗೂಡಾಗ್ತಿದೆ. ಇದೀಗ ಇದೇ ಜಸ್​​ಪ್ರೀತ್​​ ಬೂಮ್ರಾ ವಿಚಾರವಾಗಿ ಬಿಸಿಸಿಐ ಬಾಸ್​​ಗಳು ಗರಂ ಆಗಿದ್ದಾರೆ. 

ವರ್ಕ್​ಲೋಡ್ ಅನುಗುಣವಾಗಿ ಬೌಲಿಂಗ್ ಮಾಡಿದ್ರು ಬೇಸರ.!

ಆಸ್ಟ್ರೇಲಿಯಾ ಪ್ರವಾಸದ ಅಂತಿಮ ಟೆಸ್ಟ್​ನಲ್ಲಿ ಇಂಜುರಿಯಾಗಿದ್ದ ಬೂಮ್ರಾ, ಸಿಡ್ನಿ ಟೆಸ್ಟ್​ನ 2ನೇ ಇನ್ನಿಂಗ್ಸ್​ ಪೂರ್ತಿ ರೆಸ್ಟ್​ ಪಡೆದಿದ್ದರು. ಅಷ್ಟೇ ಅಲ್ಲ, ನಂತರದ ಚಾಂಪಿಯನ್ಸ್ ಟ್ರೋಫಿಯಿಂದಲೂ ದೂರ ಉಳಿದಿದ್ರು. ನಂತರ ಕಮ್​ಬ್ಯಾಕ್ ಮಾಡಿದ್ದ ಬೂಮ್ರಾಗೆ ಟೆಸ್ಟ್​ ಪಂದ್ಯವೊಂದರಲ್ಲಿ ಕೇವಲ 45ರಿಂದ 50 ಓವರ್​ ಬೌಲಿಂಗ್ ಮಾಡಲಷ್ಟೇ ಬಿಸಿಸಿಐ ಮೆಡಿಕಲ್ ಟೀಮ್ ಸೂಚಿಸಿತ್ತು. ಅದರಂತೆಯೇ ಇಂಗ್ಲೆಂಡ್ ಸರಣಿಯಲ್ಲಿ ಜಸ್​​ಪ್ರೀತ್​​ ಬೂಮ್ರಾ ಬೌಲಿಂಗ್ ಮಾಡಿದ್ದಾರೆ. 

ಬೂಮ್ರಾ ಬೌಲಿಂಗ್ ಮಾಡಿದ್ದೆಷ್ಟು ಓವರ್​?

ಮ್ಯಾಂಚೆಸ್ಟರ್ ಟೆಸ್ಟ್​        33 ಓವರ್​
ಲಾರ್ಡ್ಸ್​ ಟೆಸ್ಟ್​               43 ಓವರ್​
ಲೀಡ್ಸ್​ ಟೆಸ್ಟ್​    43.4 ಓವರ್​        

ಟೀಮ್ ಮ್ಯಾನೇಜ್​ಮೆಂಟ್ ಜೊತೆ ಬಿಸಿಸಿಐ ಮನಸ್ತಾಪ..!..!

ಬಿಸಿಸಿಐ ಬೇಸರಕ್ಕೆ ಕಾರಣ ವೇಗಿ ಜಸ್​ಪ್ರೀತ್ ಬೂಮ್ರಾ ಸೆಲೆಕ್ಷನ್, ಯಾಕಂದ್ರೆ, ಜಸ್​​ಪ್ರೀತ್​ ಬೂಮ್ರಾ ಕುರಿತು ಸೆಲೆಕ್ಷನ್​ ಕಮಿಟಿ ಹಾಗೂ ಟೀಮ್ ಮ್ಯಾನೇಜ್​ಮೆಂಟ್ ಸಂಪೂರ್ಣ ಅರಿಯದೇ ಸರಣಿಗೆ ಆಯ್ಕೆ ಮಾಡ್ತಾ ಪ್ರಶ್ನೆ ಎದ್ದಿದೆ. ಇದೇ ವಿಚಾರವಾಗಿ ಗರಂ ಆಗಿರುವ ಬಿಸಿಸಿಐ ಬಾಸ್​​​ಗಳು, ಟೀಮ್ ಮ್ಯಾನೇಜ್​ಮೆಂಟ್ ಹಾಗೂ ಸೆಲೆಕ್ಷನ್ ಕಮಿಟಿ ಜೊತೆ ಚರ್ಚೆ ನಡೆಸಿದ್ದಾರೆ.  ಟೀಮ್ ಮ್ಯಾನೇಜ್​​ಮೆಂಟ್​ ಹಾಗೂ ಸೆಲೆಕ್ಷನ್ ಕಮಿಟಿ ಮುಂದೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. 

ಸೆಲೆಕ್ಷನ್ ಕಮಿಟಿಗೆ ಬಿಸಿಸಿಐ ಪ್ರಶ್ನೆ

ಸೆಲೆಕ್ಟರ್ಸ್ ಹಾಗೂ ಟೀಮ್ ಮ್ಯಾನೇಜ್​​ಮೆಂಟ್ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದೆ.  ಜಸ್​​ಪ್ರೀತ್ ಬೂಮ್ರಾ ಸರಣಿಯುದ್ದಕ್ಕೂ ಲಭ್ಯರಿರುವ ಬಗ್ಗೆ ತಿಳಿದು ಟೆಸ್ಟ್ ಸರಣಿಗೆ ಆಯ್ಕೆ ಮಾಡಿದ್ರಾ..? ಇಲ್ವಾ..?

ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯಗೆ ಇಬ್ಬರು ಕೈಕೊಟ್ಟು ಹೋದ್ರೂ.. ಈಗ ಆಲ್​​ರೌಂಡರ್​ಗೆ ಇವರೇ ಪ್ರಪಂಚ..!

Bumrah_GILL

ಬಿಸಿಸಿಐ ಮೂಲಗಳು

ಬೂಮ್ರಾ ಇಡೀ ಸರಣಿಗೆ ಲಭ್ಯರಿರಬೇಕು. ಕೆಲ ಪಂದ್ಯಗಳಲ್ಲಿ ಮಾತ್ರ ಆಡಿ, ಕೆಲ ಪಂದ್ಯಗಳು ರೆಸ್ಟ್​ ಪಡೆಯುವಂತಾಗಬಾರದು ಎಂದಿರುವ ಬಿಸಿಸಿಐ, ಕಂಪ್ಲೀಟ್ ಸರಣಿಯಿಂದಲೇ ರೆಸ್ಟ್​ ಪಡೆಯುವಂತಾಗಲಿ ಎಂದಿದೆ. ಟೀಮ್ ಮ್ಯಾನೇಜ್​ಮೆಂಟ್ ಹಾಗೂ ಸೆಲೆಕ್ಷನ್ ಕಮಿಟಿ ಅರ್ಥಮಾಡಿಕೊಳ್ಳುವಂತೆ ಬಿಗ್​ಬಾಸ್​ಗಳು ಸೂಚಿಸಿದ್ದಾರೆ. ಆದ್ರೆ, ಇದು ಈಗ ಮತ್ತೊಂದು ಪ್ರಶ್ನೆಗೆ ನಾಂದಿಯಾಡಿದೆ. 

ಗೆಲುವಿಗಾಗಿ ಬೂಮ್ರಾರನ್ನೇ ನಂಬಿಕೊಂಡಿತ್ತಾ ಮ್ಯಾನೇಜ್​ಮೆಂಟ್..?

ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟವಾದಲೇ ಚೀಫ್ ಸೆಲೆಕ್ಟರ್ ಬೂಮ್ರಾ, ಕೇವಲ ಮೂರು ಮ್ಯಾಚ್ ಆಡ್ತಾರೆ ಅನ್ನೋದನ್ನ ತಿಳಿಸಿತ್ತು. ​ಆದ್ರೆ, ಈ ಮೂರು ಮ್ಯಾಚ್ ಆಡಿದ್ರೆ. ಟೀಮ್ ಇಂಡಿಯಾ ಗೆಲುವು ಸುಲಭ ಅನ್ನೋದು ಟೀಮ್ ಮ್ಯಾನೇಜ್​​ಮೆಂಟ್ & ಸೆಲೆಕ್ಟರ್​ಗಳ ನಂಬಿಕೆಯಾಗಿತ್ತಾ ಎಂಬ ಪ್ರಶ್ನೆ ಉದ್ಬವಿಸಿದೆ. ಆದ್ರೆ, ಬೂಮ್ರಾ ಆಡಿರುವ ಮ್ಯಾಚ್​​ಗಳಲ್ಲೇ ಟೀಮ್ ಇಂಡಿಯಾ ಸೋತಿದೆ. ಮತೊಂದ್ಕಡೆ ಪಂದ್ಯದಿಂದ ಪಂದ್ಯಕ್ಕೆ ಬೌಲಿಂಗ್ ಸ್ಪೀಡ್​ ಕುಸಿತವಾಗ್ತಿದೆ. ಇದು ಸಹಜವಾಗೇ ಮಾಜಿ ಕ್ರಿಕೆಟಿಗರನ್ನು ಮಾತ್ರವಲ್ಲ. ಬಿಸಿಸಿಐಗೂ ಮುಜುಗರಕ್ಕೀಡು ಮಾಡುವಂತೆ ಮಾಡಿದೆ..

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Jasprit Bumrah
Advertisment