/newsfirstlive-kannada/media/media_files/2025/08/01/pandya_wife-2025-08-01-16-46-02.jpg)
ಟೀಮ್​ ಇಂಡಿಯಾ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ವೈಯಕ್ತಿಕ ಜೀವನ ಮತ್ತೆ ಹಳಿ ತಪ್ಪಿದೆ. ಹೊಸ ಲವ್​​ ಆದಷ್ಟೇ ವೇಗವಾಗಿ ಬ್ರೇಕ್​ಅಪ್​ ಆಗಿದೆ. ವಿರಹ ವೇದನೆಯಲ್ಲಿರೋ ಹಾರ್ದಿಕ್​ ಪಾಲೀಗಿಗ ಮಗನೇ ಧೈರ್ಯ. ಮಾನಸಿಕವಾಗಿ ಕುಸಿದ ಹಾರ್ದಿಕ್​ ಜೀವನಕ್ಕೆ ಮಗ ಅಗಸ್ತ್ಯ ಸ್ಪೂರ್ತಿಯ ಚಿಲುಮೆಯಾಗಿದ್ದಾನೆ.
ಟೀಮ್​ ಇಂಡಿಯಾ ಆಲ್​​ರೌಂಡರ್​​ ಹಾರ್ದಿಕ್​ ಪಾಂಡ್ಯ ಹಣೆ ಬರಹವೇ ಸರಿ ಇಲ್ವೋ.? ಅಥವಾ ಟೈಮ್​ ಸರಿ ಇಲ್ವೋ.? ಗೊತ್ತಿಲ್ಲ. ಎಲ್ಲಾ ಸರಿಯಾಯ್ತು ಅನ್ನುವಾಗಲೇ ಮತ್ತೊಂದು ಸಮಸ್ಯೆ ಹಾರ್ದಿಕ್​ ಪಾಂಡ್ಯಗೆ ಎದುರಾಗ್ತಿದೆ. ನತಾಶ ಜೊತೆಗಿನ ಡಿವೋರ್ಸ್​​ ಬಳಿಕ ಜಾಸ್ಮಿನ್​ ವಾಲಿಯಾ ಪ್ರೀತಿಯ ಬಲೆಯಲ್ಲಿ ಹಾರ್ದಿಕ್​ ಬಿದ್ದಿದ್ದು, ನಿಮಗೆ ಗೊತ್ತಿರಬಹುದು. ಆದ್ರೆ, ಈ ಲವ್​​ ಆದಷ್ಟೇ ವೇಗವಾಗಿ, ಬ್ರೇಕ್​​​ಅಪ್​ ಆಗಿದೆ.
/filters:format(webp)/newsfirstlive-kannada/media/media_files/2025/08/01/pandya_wife_son-2025-08-01-16-46-02.jpg)
ಬಾಳಲ್ಲಿ ಬಿರುಗಾಳಿ, ಹಾರ್ದಿಕ್​ ಮತ್ತೆ ಏಕಾಂಗಿ.!
ನತಾಶ ಜೊತೆಗಿನ ಡಿವೋರ್ಸ್​ ಆದ ಕೆಲವೇ ತಿಂಗಳಲ್ಲಿ ಬ್ರಿಟಿಷ್​ ಬ್ಯೂಟಿ ಜಾಸ್ಮಿನ್​ ವಾಲಿಯಾ ಜೊತೆಗೆ ಹಾರ್ದಿಕ್​ ಹೆಸರು ಕೇಳಿ ಬಂದಿತ್ತು. ಅದಾದ ಬಳಿಕ ಇಬ್ಬರ ಪ್ರವಾಸಗಳು ಡೇಟಿಂಗ್​ ಗಾಸಿಪ್​ನ ಕನ್​ಫರ್ಮ್​ ಆಗಿದ್ವು. ಒಂಟಿಯಾಗಿದ್ದ ಹಾರ್ದಿಕ್​ ಮತ್ತೆ ಜಂಟಿಯಾಗೋಕೆ ರೆಡಿಯಾಗಿದ್ದರು. ಆದ್ರೆ, ಅದೇನಾಯ್ತೋ ಗೊತ್ತಿಲ್ಲ. ಪ್ರೀತಿ ಹುಟ್ಟಿದಷ್ಟೇ ವೇಗವಾಗಿ ಬಿರುಕು ಮೂಡಿ ಹಾರ್ದಿಕ್​-ಜಾಸ್ಮಿನ್​ ದೂರಾಗಿದ್ದಾರೆ.
ವಿರಹ ವೇದನೆಯಲ್ಲಿರೋ ಪಾಂಡ್ಯಗೆ ಮಗನೇ ಧೈರ್ಯ.!
ಏಕಾಂಗಿಯಾಗಿರೋ ಹಾರ್ದಿಕ್​ ಪಾಂಡ್ಯ ಸದ್ಯ ವಿರಹ ವೇದನೆಯಲ್ಲಿದ್ದಾರೆ. ಮೊದಲು ಡಿವೋರ್ಸ್​, ಈಗ ಬ್ರೇಕ್​ಅಪ್​ನಿಂದ ಬೇಸರಗೊಂಡಿರೋ ಹಾರ್ದಿಕ್​ಗೆ ಮಾನಸಿಕವಾಗಿ ಕುಗ್ಗಿದ್ದಾರೆ. ಮಾನಸಿಕ ಸ್ಥೈರ್ಯ ಕಳೆದುಕೊಂಡಿರೋ ಹಾರ್ದಿಕ್​ಗೆ ಈಗ ಮಗನೇ ಧೈರ್ಯ.
ಮಗನೇ ಸರ್ವಸ್ವ.. ಜೀವನಕ್ಕೆ ಚೇತನ..!
ಹಾರ್ದಿಕ್ ಜೀವನ ಹಳ್ಳ ಹಿಡಿದಿದೆ. ಆದ್ರೆ, ಇದ್ಯಾವುದಕ್ಕೂ ಕೇರ್ ಮಾಡದೆ ಕಾಲಾಯ ತಸ್ಮೈ ನಮಃ ಎನ್ನುತ್ತಲೇ ಹೆಜ್ಜೆ ಹಾಕ್ತಿದ್ದಾರೆ. ಹಾರ್ದಿಕ್​ ದೃಡದ ಹೆಜ್ಜೆಗೆ ಸ್ಪೂರ್ತಿಯೇ ಮಗ ಅಗಸ್ತ್ಯ. ಕುಸಿದಿರೋ ಹಾರ್ದಿಕ್​, ಮಗನೊಂದಿಗೆ ಹೆಚ್ಚು ಟೈಮ್​ ಸ್ಪೆಂಡ್​ ಮಾಡ್ತಾ ನೋವನ್ನ ಮರೆಯೋ ಯತ್ನದಲ್ಲಿದ್ದಾರೆ.
ಸದ್ಯ ಹಾರ್ದಿಕ್​​​​​ ಪಾಂಡ್ಯ ಗುರಿ ಭವಿಷ್ಯದ ಕಡೆಗಿದೆ. ಇದಕ್ಕೆಲ್ಲ ಕಾರಣ ಪುತ್ರ ಅಗಸ್ತ್ಯ ಮೇಲಿನ ಪ್ರೀತಿ. ಹಳಿತಪ್ಪಿದ ಜೀವನವನ್ನ ರೈಟ್​ ಟ್ರ್ಯಾಕ್​​ಗೆ ತರೋ ಯತ್ನದಲ್ಲಿರೋ ಹಾರ್ದಿಕ್​​ಗೆ ಪುತ್ರನೇ ಸ್ಪೂರ್ತಿಯ ಸೆಲೆಯಾಗಿದ್ದಾರೆ.
ಅಭ್ಯಾಸದಲ್ಲೂ ಮಗನೇ ಹಾರ್ದಿಕ್​ ಜೊತೆಗಾರ.!
ಸದ್ಯ ಹಾರ್ದಿಕ್​ ಪಾಂಡ್ಯ ಅಭ್ಯಾಸದ ಕಣಕ್ಕೆ ಮರಳಿದ್ದಾರೆ. ಐಪಿಎಲ್​ ಬಳಿಕ ಸುದೀರ್ಘ ಬ್ರೇಕ್​​ ತೆಗೆದುಕೊಂಡು ಮೈದಾನಕ್ಕೆ ಮರಳಿರೋ ಹಾರ್ದಿಕ್​​ಗೆ ಇಲ್ಲೂ ಮಗನೇ ಜೊತೆಗಾರನಾಗಿದ್ದಾನೆ.
/filters:format(webp)/newsfirstlive-kannada/media/media_files/2025/08/01/pandya_wife_son_1-2025-08-01-16-46-02.jpg)
ಮಗನಿಗೆ ಹೀರೋ ಆಗಬೇಕು ಅನ್ನೋದೇ ಪಾಂಡ್ಯ ಬಯಕೆ..!
ಮಗನ ಪಾಲಿಗೆ ಹೀರೋ ಆಗಿ ಕಾಣಬೇಕು ಅನ್ನೋದು ಪ್ರತಿಯೊಬ್ಬ ತಂದೆಯ ಕನಸು. ಅದೇ ಕನಸು ಹಾರ್ದಿಕ್ ಪಾಂಡ್ಯಗೂ ಇದೆ. ಮಗನ ಪಾಲಿಗೆ ಹೀರೋ ಆಗಲು ಏನಾದರೂ ಮಾಡಬೇಕೆಂಬ ತುಡಿತ, ಹಸಿವು ಹಾರ್ದಿಕ್​ರಲ್ಲಿದೆ. ಪದೇ ಪದೇ ಜೀವನದಲ್ಲಿ ಎಡವಿಬಿದ್ರೂ, ಮತ್ತೆ ಎದ್ದು ನಿಂತು ಹೋರಾಡ್ತಿರೋದ್ರ ಹಿಂದಿನ ಸೀಕ್ರೆಟ್​ ಇದೆ.
ನನ್ನ ಮಗನೇ ನನ್ನ ಜೀವನದ ಬಿಗ್ಗೆಸ್ಟ್​​ ಮೋಟಿವೇಷನ್​ ಎಂದು ಈ ಹಿಂದೆಯೇ ಹಾರ್ದಿಕ್​ ಹೇಳಿಕೊಂಡಿದ್ರು. ಅದಕ್ಕೆ ತಕ್ಕಂತೆ ಮಗ ಈಗ ಹಾರ್ದಿಕ್​ ಪಾಲಿನ ಸ್ಪೂರ್ತಿಯ ಚಿಲುಮೆಯಾಗಿದ್ದಾನೆ. ಆದಷ್ಟು ಬೇಗ ವಿರಹವೇದನೆಯಿಂದ ಹೊರಬಂದು ಅಂದುಕೊಂಡಂತೆ ಮಗನ ಪಾಲಿಗೆ ಹಾರ್ದಿಕ್​ ಹೀರೋ ಆಗಲಿ ಅನ್ನೋದೇ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us