/newsfirstlive-kannada/media/media_files/2025/08/01/jobs_new-2025-08-01-23-05-17.jpg)
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಉದ್ಯೋಗಗಳು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ, ದೇಶದ ಇತರೆ ನಗರಗಳಾದ ಪಲಕ್ಕಡ್ (ಕೇರಳ), ಕೋಲಾರ, ಮೈಸೂರು, ದೆಹಲಿ, ಪುಣೆ ಹೈದರಬಾದ್ನಲ್ಲಿ ಖಾಲಿ ಇರುವ ಉದ್ಯೋಗಗಳನ್ನ ತುಂಬಲಾಗುತ್ತಿದೆ. ಅರ್ಹ ಹಾಗೂ ಆಸಕ್ತಿ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು.
ಬಿಇಎಂಎಲ್ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾಗಿದೆ. ಈಗಾಗಲೇ ಅಧಿಸೂಚನೆಯನ್ನು ಸಂಸ್ಥೆಯು ಬಿಡುಗಡೆ ಮಾಡಿದ್ದು ವಿವರವನ್ನ ಸಂಪೂರ್ಣವಾಗಿ ತಿಳಿದು ಹುದ್ದೆ ಪಡೆಯಲು ಅಭ್ಯರ್ಥಿಗಳು ಪ್ರಯತ್ನಿಸಬಹುದು. ಎಷ್ಟು ಉದ್ಯೋಗಗಳು, ವಿದ್ಯಾರ್ಹತೆ, ವೇತನ ಶ್ರೇಣಿ, ಅರ್ಜಿ ಶುಲ್ಕ ಎಷ್ಟು ಇತ್ಯಾದಿ ಮಾಹಿತಿಗಳನ್ನ ಈ ಕೆಳಗೆ ನೀಡಲಾಗಿದೆ.
ಉದ್ಯೋಗದ ಹೆಸರು-
ಜೂನಿಯರ್ ಎಕ್ಸಿಕ್ಯೂಟಿವ್ (Junior Executive)
ಒಟ್ಟು ಹುದ್ದೆಗಳು- 96 ಇವೆ
ಇದನ್ನೂ ಓದಿ: 71st National Film Awards; ಅತ್ಯುತ್ತಮ ನಟ, ನಟಿ ಯಾರು.. ಕನ್ನಡದ ಬೆಸ್ಟ್ ಮೂವಿ
ತಿಂಗಳ ಸಂಬಳ
35,000 ರೂಪಾಯಿ ಇಂದ 43,000 ರೂಪಾಯಿಗಳು
ಶೈಕ್ಷಣಿಕ ಅರ್ಹತೆ
ಬಿಇ ಅಥವಾ ಬಿಟೆಕ್ ಪೂರ್ಣಗೊಳಿಸಿರಬೇಕು
ವಯಸ್ಸಿನ ಮಿತಿ
29 ವರ್ಷದ ಒಳಗಿನವರಿಗೆ ಅವಕಾಶ
ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆ ಪ್ರಕ್ರಿಯೆ- ವಾಕ್ ಇನ್ ಇಂಟರ್ವ್ಯೂವ್ (Walk-In Interview)
ಸಂದರ್ಶನಕ್ಕೆ ಹಾಜರಾಗುವ ವಿಳಾಸ:
ಕೋಲಾರ: ಹೆಚ್&ಪಿ ಯುನಿಟ್, ಬಿಇಎಂಎಲ್ ಕೆಜಿಎಫ್ ಕಾಂಪ್ಲೆಕ್ಸ್, ಬಿಇಎಂಎಲ್ ನಗರ, ಕೋಲಾರ ಗೋಲ್ಡ್ ಫೀಲ್ಡ್- 563115.
ಮೈಸೂರು, ಬೆಂಗಳೂರು, ದೆಹಲಿ, ಹೈದರಾಬಾದ್ ಮತ್ತು ಪುಣೆ: ಬಿಇಎಂಎಲ್ ಮೈಸೂರು ಕಾಂಪ್ಲೆಕ್ಸ್, ಬೆಳವಾಡಿ ಪೋಸ್ಟ್, ಮೈಸೂರು- 570018
ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 09 ಆಗಸ್ಟ್ 2025
Walk-In Interview ದಿನಾಂಕ- 11, 12 ಆಗಸ್ಟ್ 2025
ಅರ್ಜಿ ಸಲ್ಲಿಕೆಗೆ ಲಿಂಕ್- https://recruitment.bemlindia.in/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ