/newsfirstlive-kannada/media/media_files/2025/10/28/amitabh-gift-2025-10-28-11-36-28.jpg)
ಬೆಳಕಿನ ಹಬ್ಬ ದೀಪಾವಳಿಗೆ ಬಾಲಿವುಡ್ ಸ್ಪಾರ್​ಗಳು ತಮ್ಮ ಸಿಬ್ಬಂದಿಗೆ ಉಡುಗೊರೆ ನೀಡುವುದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಅದರಲ್ಲೂ ಈ ಬಾರಿ ವಿಶೇಷವಾಗಿ ಬಿಗ್​ ಬಿ ಅಮಿತಾಭ್ ಬಚ್ಚನ್ ನೀಡಿರುವ ಗಿಫ್ಟ್​ನ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅವರ ಸಿಬ್ಬಂದಿಯೊಬ್ಬರು ಏನೇನು ಗಿಫ್ಟ್ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕಂಟೆಂಟ್ ಕ್ರಿಯೇಟರ್ ಸಾಗರ್ ಠಾಕೂರ್ ಈ ವೀಡಿಯೊವನ್ನು ತಮ್ಮ ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಅಮಿತಾಭ್ ಬಚ್ಚನ್ ಅವರ ಮನೆ ಮುಂಭಾಗದಲ್ಲಿ ಚಿತ್ರೀಕರಿಸಲಾಗಿದೆ. ಇದರಲ್ಲಿ ಸಿಬ್ಬಂದಿಯೊಬ್ಬರು ಬಿಗ್ ಬಿ ನೀಡಿರುವ ಸಿಹಿತಿಂಡಿ ಬಾಕ್ಸ್ ಹಾಗೂ 10 ಸಾವಿರ ನಗದನ್ನು ನೀಡಿರುವುದನ್ನು ಬಹಿರಂಗ ಪಡಿಸಿದ್ದಾರೆ. ಈ ವೀಡಿಯೊವನ್ನು ಹಂಚಿಕೊಂಡಾಗಿನಿಂದಲೂ 891 ವೀಕ್ಷಣೆಗಳು, 8 ಸಾವಿರಕ್ಕೂ ಹೆಚ್ಚು ಲೈಕ್ಸ್​ ಹಾಗೂ ನೂರಾರು ಕಾಮೆಂಟ್​ಗಳನ್ನು ಸಹ ಗಳಿಸಿದೆ.
ಬಾಲಿವುಡ್ ಬಿಗ್ ಬಿ ಗೆ ಈಗ 83 ವರ್ಷಗಳಾಗಿದ್ದು, ಕೊನೆಯ ಬಾರಿಗೆ ತಲೈವರ್ ರಜನಿಕಾಂತ್ ಹಾಗೂ ಫಹದ್ ಫಾಸಿಲ್ ಜೊತೆ ಆ್ಯಕ್ಷನ್ ಚಿತ್ರವಾದ ವೆಟ್ಟೈಯನ್​​ಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಸೋನಿ ಟಿವಿಯ ಹಿಟ್ ರಸಪ್ರಶ್ನೆ ಕಾರ್ಯಕ್ರಮವಾದ ಕೌನ್ ಬನೇಗಾ ಕರೋಡ್​ಪತಿಯನ್ನು ನಡೆಸಿಕೊಡುತ್ತಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us