/newsfirstlive-kannada/media/media_files/2025/11/12/delhi-blast-2025-11-12-20-37-58.jpg)
ದೆಹಲಿ ಕಾರ್ ಬ್ಲಾಸ್ಟ್.. ಇದು ಕೇವಲ ಒಂದು ಸ್ಫೋಟವಲ್ಲ. ನಮ್ಮ ಮಧ್ಯೆಯೇ ಇರೋ ಕೆಲ ಕ್ರಿಮಿಗಳು ಸಮಾಜಘಾತುಕ ಕೃತ್ಯ ಎಸಗ್ತಾರೆ ಅನ್ನೋದಕ್ಕೆ ಸ್ಪಷ್ಟ ನಿದರ್ಶನ. ಈ ಬ್ಲಾಸ್ಟ್‌ನಲ್ಲಿ 9 ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೀಗ ಸ್ಫೋಟದ ತೀವ್ರತೆಗೆ ಮತ್ತೊಂದು ವಿಡಿಯೋ ಸಾಕ್ಷಿ ಸಿಕ್ಕಿದೆ. ಬ್ಲಾಸ್ಟ್‌ಗೆ ಬಳಸಿದ ಕಾರಿನ ಟ್ರಾವೆಲ್ ಹಿಸ್ಟರಿ ಮತ್ತಷ್ಟು ಬಯಲಾಗಿದೆ. ಶಂಕಿತರ ಪ್ಲಾನ್ ಏನು? ಅವರ ಟಾರ್ಗೆಟ್ ಏನಾಗಿತ್ತು? ಸ್ಫೋಟಕ ಬ್ಲಾಸ್ಟ್ ಆಗಿದ್ಹೇಗೆ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಸೋಮವಾರ ಸಂಜೆ 6.50ರ ಸುಮಾರಿಗೆ ಡಾ. ಉಮರ್ ಐ-20 ಕಾರನ್ನ ಚಲಾಯಿಸಿಕೊಂಡು ಕೆಂಪು ಕೋಟೆ ಸಿಗ್ನಲ್ ಬಳಿ ಬಂದಿದ್ದ. ಈ ವೇಳೆ ಟ್ರಾಫಿಕ್‌ನಲ್ಲಿ ವಾಹನಗಳು ಸ್ಲೋ ಮೂವಿಂಗ್‌ನಲ್ಲಿತ್ತು. ಹೀಗೆ ಕಾರು ಮೆಲ್ಲಗೆ ಚಲಿಸುವಾಗಲೇ ಅತಿದೊಡ್ಡ ಬ್ಲಾಸ್ಟ್ ಸಂಭವಿಸಿಬಿಟ್ಟಿದೆ. ಕಾರ್ ಬ್ಲಾಸ್ಟ್‌ನ ತೀವ್ರತೆ ಏನು ಅನ್ನೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸ್ಫೋಟದಲ್ಲಿ ಹಲವರ ದೇಹಗಳು ಛಿದ್ರಛಿದ್ರವಾಗಿ ಹೋಗಿದೆ.
ಕೆಂಪುಕೋಟೆ ಬಳಿ ಸ್ಫೋಟ ಪ್ರೀ ಪ್ಲಾನಾ? ಆಕಸ್ಮಿಕನಾ?
ರೆಡ್‌ಪೋರ್ಟ್ ಬಳಿ ಸ್ಫೋಟವಾದ ಕಾರ್ ವಿಚಾರದಲ್ಲಿ ತನಿಖೆ ಮುಂದುವರಿದಿದೆ. ಕಾರನ್ನ ಚಲಾಯಿಸಿಕೊಂಡು ಬಂದಿದ್ದ ಡಾ. ಉಮರ್ ನಬಿ ಬಗ್ಗೆ ಹಲವು ಸಂಶಯಗಳು ಮೂಡಿವೆ. ಸ್ಫೋಟಕಗಳನ್ನ ಕಾರಲ್ಲಿ ತಂದಿದ್ದೇಕೆ? ಕೆಂಪುಕೋಟೆ ಬಳಿಯೇ ಸ್ಫೋಟವಾಗಿದ್ದೇಕೆ? ಇದು ಆಕಸ್ಮಿಕನಾ? ಪ್ರೀ ಪ್ಲಾನಾ ಎಂಬ ಸಂಶಯ ಮೂಡಿದೆ.
ಸ್ಫೋಟದ ರಹಸ್ಯ!
ನವೆಂಬರ್ 8 ಮತ್ತು 9 ರಂದು ಡಾ.ಮುಜಮಿಲ್, ಡಾ.ಆದಿಲ್ ರಾಥರ್‌ನ ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ರು. ಈ ಇಬ್ಬರ ಜೊತೆಗೆ ಸಂಪರ್ಕದಲ್ಲಿದ್ದ ಡಾ.ಉಮರ್ ನಬಿಗೆ ಭಯ ಶುರುವಾಗಿತ್ತು. ತಾನು ಸಿಕ್ಕಿಬೀಳುವ ಭಯದಿಂದ ಸ್ಪೋಟಕವನ್ನು ಕಾರಿನಲ್ಲಿ ತುಂಬಿಕೊಂಡು ಉಮರ್ ನಬಿ ದೆಹಲಿಯಲ್ಲಿ ಹೊರಟಿದ್ದ. ಭಯಗೊಂಡು ಹೊರಟಾಗ ಆಕಸ್ಮಿಕವಾಗಿ ರೆಡ್ ಪೋರ್ಟ್ ಬಳಿ ಸ್ಫೋಟಗೊಂಡಿರುವ ಸಾಧ್ಯತೆ ಇದೆ. ಇನ್ನು, ಅಮೋನಿಯಂ ನೈಟ್ರೇಟ್ ಮತ್ತು ಇಂಧನ ತೈಲ ಒಳಗೊಂಡ ಎಎನ್‌ಎಫ್‌ಓ ಅನ್ನ ಕಾರಿನಲ್ಲಿ ಸಾಗಿಸಲಾಗ್ತಿತ್ತು. ಕಾರ್‌ನಲ್ಲಿದ್ದ ಅಮೋನಿಯಂ ನೈಟ್ರೇಟ್, ಡಿಟೋನೇಟರ್ ಆಕಸ್ಮಿಕವಾಗಿ ಸ್ಪೋಟಗೊಂಡಿರುವ ಸಾಧ್ಯತೆಯೂ ಇದೆ. ಇನ್ನು, ಸ್ಫೋಟದ ಸ್ಥಳದಲ್ಲಿ ಬೇರೊಂದು ಸ್ಫೋಟಕ ಸ್ಯಾಂಪಲ್ ಪತ್ತೆಯಾಗಿದ್ದು, ಇದು ಅಮೋನಿಯಂ ನೈಟ್ರೇಟ್‌ಗಿಂತಲೂ ಪ್ರಬಲವಾದದ್ದು ಎಂಬ ಮಾಹಿತಿ ಇದೆ. ಸ್ಫೋಟದ ಸ್ಥಳದಿಂದ ಸುಮಾರು 40 ಸ್ಯಾಂಪಲ್‌ಗಳನ್ನ ಫಾರೆನ್ಸಿಕ್ ತಜ್ಞರು ಸಂಗ್ರಹಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
ಆಕಸ್ಮಿಕ ಸ್ಫೋಟ ಅನ್ನೋದಕ್ಕೆ ಇರುವಂತಹ ಪೂರಕ ಅಂಶಗಳನ್ನ ನೋಡಿದ್ದಾಯ್ತು.. ಆದ್ರೆ, ಮತ್ತೊಂದು ಆಯಾಮದಲ್ಲಿ ನೋಡಿದ್ರೆ ಇದು ಉದ್ದೇಶ ಪೂರ್ವಕ ಸ್ಫೋಟ ಯಾಕಾಗಿರ್ಬಾರ್ದು ಅನ್ನೋ ಪ್ರಶ್ನೆ ಮೂಡದೇ ಇರಲ್ಲ. ಯಾಕಂದ್ರೆ ಕಿಲ್ಲರ್ ಕಾರಿನ ಟ್ರಾವೆಲ್ ಹಿಸ್ಟರಿ.. ಸ್ಫೋಟದ ದಿನ ಡಾ. ಉಮರ್ ಅದನ್ನ ಎಲ್ಲೆಲ್ಲಿ ಸುತ್ತಾಡಿಸಿದ್ದ ಅನ್ನೋದನ್ನ ಗಮನಿಸಿದ್ರೆ ಈ ಪ್ರಶ್ನೆ ಮೂಡದೇ ಇರಲ್ಲ.
ಡೆಲ್ಲಿಯಲ್ಲಿ ಸ್ಫೋಟಕ್ಕೆ ಬಳಸಿರೋ ಐ20 ಕಾರು ಫರಿದಾಬಾದ್​ನಿಂದ ಬಾದರಪುರ ಗಡಿ ಮೂಲಕ ಎಂಟ್ರಿ ಕೊಟ್ಟಿತ್ತು. ಈ ಕಾರು ದೆಹಲಿಯ ಸಾಕಷ್ಟು ಪ್ರದೇಶದಲ್ಲಿ ಸುತ್ತಾಟ ನಡೆಸಿತ್ತು. ಕನ್ಹಾಟ್ ಪ್ಲೇಸ್, ಮುಯೂರ್ ವಿಹಾರ್​​ನಲ್ಲಿ ಕಾರು ಓಡಾಡಿತ್ತು. ಕಾರನ್ನು ಮಸೀದಿಯ ಪಾರ್ಕಿಂಗ್ ಲಾಟ್‌ಗೆ ತಂದಿದ್ದ ಉಮರ್ ಮಧ್ಯಾಹ್ನ 3.19ರಿಂದ ಸಂಜೆ 6.28ರವರೆಗೂ ಅಲ್ಲೇ ನಿಲ್ಲಿಸಿದ್ದ. ಆದ್ರೆ ಮೂರು ತಾಸಿನ ಕಾಲ ಕಾರನ್ನ ಅಲ್ಲೇ ನಿಲ್ಲಿಸಿದ್ದೇಕೆ ಅನ್ನೋ ಪ್ರಶ್ನೆ ಮೂಡಿದೆ. ಅಲ್ಲದೇ ಕಾರ್ ಪಾರ್ಕ್ ಮಾಡಿದ ಉಮರ್ ಕಾರಿನಿಂದ ಕೆಳಗೆ ಇಳಿಯದೇ ಒಳಗೆ ಕುಳಿತಿದ್ದ.
ಹಾಗಾದ್ರೆ ಆತ ಏನಕ್ಕೆ ಕಾದಿದ್ದ ಅನ್ನೋ ಪ್ರಶ್ನೆಯೂ ಮೂಡಿದೆ. ಬಹುಶಃ ಕಾರಿನಲ್ಲಿ ಸ್ಫೋಟಕ ತುಂಬಿಕೊಂಡು ಬಂದ ಉಮರ್, ಅದನ್ನ ಕೆಂಪು ಕೋಟೆಯ ಬಳಿ ಬಿಟ್ಟು ಹೋಗಲು ಪ್ಲಾನ್ ಮಾಡಿರುವ ಸಾಧ್ಯತೆ ಇದೆ. ಕೊನೆಗೆ ರೆಡ್ ಪೋರ್ಟ್ ಎದುರು ಬಂದಾಗ ಕಾರ್ ಸ್ಫೋಟಗೊಂಡಿದೆ. ಬ್ಲಾಸ್ಟ್​ನಲ್ಲಿ ಮಿಲಿಟರಿ ಗ್ರೇಡ್ ಸ್ಫೋಟಕ ಸಾಮಗ್ರಿಗಳ ಬಳಕೆ ಮಾಡಿರುವ ಮಾಹಿತಿ ಇದೆ.
ಒಂದ್ಕಡೆ ಆಕಸ್ಮಿಕ ಅಂತಲೇ ಭಾವಿಸಿದ್ರೂ ಪ್ರತಿಯೊಂದು ಮಾಹಿತಿಯನ್ನ ಕೂಲಂಕುಷವಾಗಿ ಗಮನಿಸಿದ್ರೆ ಇದೊಂದು ಪಕ್ಕಾ ಪ್ಲಾನ್ ರೀತಿ ಕಾಣುತ್ತಿದೆ. ಈ ರೀತಿಯ ವಿಧ್ವಂಸಕ ಕೃತ್ಯದ ಹಿಂದಿರೋ ಕಾಣದ ಕೈಗಳು ಯಾವು ಅನ್ನೋದು ಎನ್ಐಎ ತನಿಖೆಯಿಂದ ಹೊರಬೀಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us