/newsfirstlive-kannada/media/media_files/2025/10/23/usa-accident-2025-10-23-17-54-39.jpg)
ಅಮೆರಿಕಾದ ಕ್ಯಾಲಿಪೋರ್ನಿಯಾದಲ್ಲಿ ಭೀಕರ ರಸ್ತೆ ಅಪಘಾತ
ಕ್ಯಾಲಿಪೋರ್ನಿಯಾ: ಭಾರತೀಯ ಮೂಲದವನಿಂದ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆ ಅಮೆರಿಕಾದ ಕ್ಯಾಲಿಪೋರ್ನಿಯಾದ ಒಂಟಾರಿಯೊ ಬಳಿಯ ಪಶ್ಚಿಮ ದಿಕ್ಕಿನ ಐ-10 ಫ್ರೀವೇಯಲ್ಲಿ ನಡೆದಿದೆ.. ಭಾರತೀಯ ಮೂಲದ ವ್ಯಕ್ತಿ ಮಾದಕ ವಸ್ತುಗಳ ಸೇವನೆ ಮಾಡಿ ವಾಹನ ಚಲಾಯಿಸಿದ್ದಕ್ಕೆ ಅಪಘಾತ ಸಂಭವಿಸಿದೆ..ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಯುಬಾ ನಗರದ 21 ವರ್ಷದ ಜಶನ್‌ಪ್ರೀತ್ ಸಿಂಗ್ ಎಂಬಾತ ಒಂಟಾರಿಯೊ ಬಳಿಯ ಪಶ್ಚಿಮ ದಿಕ್ಕಿನ ಐ-10 ಫ್ರೀವೇಯಲ್ಲಿ ಮಾದಕ ಸೇವನೆ ಮಾಡಿ ವಾಹನ ಚಲಾಯಿಸಿದ್ದಾನೆ..ಮಾದಕದ ಮತ್ತಿನಲ್ಲಿದ ವ್ಯಕ್ತಿ ಬ್ರೇಕ್ ಹಾಕಲು ವಿಫಲನಾಗಿದ್ದಾನೆ. ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಜಶನ್‌ಪ್ರೀತ್ ಸಿಂಗ್​ನ ಯಡವಟ್ಟಿಗೆ ಸುಮಾರು ಎಂಟು ವಾಹನಗಳು ಒಂದರ ಮೇಲೊಂದು ಹತ್ತಿದ್ದು, ಭೀಕರ ಅಪಘಾತಕ್ಕೀಡಾಗಿದೆ. ಅದರ ವಿಡಿಯೋ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ. ತಾವು ನೋಡಬಹುದು.
Authorities have identified Jashanpreet Singh as the driver involved in the deadly truck crash in Ontario, California.
— I Meme Therefore I Am 🇺🇸 (@ImMeme0) October 23, 2025
Singh, an undocumented immigrant from India, was reportedly under the influence when the accident occurred, which killed three people and injured at least four… pic.twitter.com/7aS852EgEq
ಅಪಘಾತದ ಬಳಿಕ ಪೊಲೀಸರು ಆರೋಪಿಯ ಹಿನ್ನಲೆ ಬಗ್ಗೆ ತನಿಖೆ ನಡೆಸಿದ್ದು, ಜಶನ್‌ಪ್ರೀತ್ 2022 ರಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿ ವಲಸೆ ಪ್ರಕ್ರಿಯೆಗಳಿಗೆ ಒಳಗಾಗಿದ್ದ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us