/newsfirstlive-kannada/media/media_files/2025/08/01/dharmasthala-case16-2025-08-01-16-18-31.jpg)
ಧರ್ಮಸ್ಥಳದ ನೇತ್ರಾವತಿ ನದಿ ದಂಡೆಯಲ್ಲಿ ಎಸ್​ಐಟಿ ತಂಡ ತನಿಖೆ ಚುರುಕುಗೊಳಿಸಿದೆ. ದೂರುದಾರನ ಸಮ್ಮುಖದಲ್ಲಿ ಶವಗಳ ಅವಷೇಶ ಪತ್ತೆಗೆ ಕಾರ್ಯಾಚರಣೆ ತೀವ್ರಗೊಂಡಿದೆ. ಈ ನಡುವೆ ಪಾಯಿಂಟ್​​-7ರಲ್ಲಿ ಕರ್ಚಿಫ್​ ಪತ್ತೆಯಾಗಿದೆ.
/filters:format(webp)/newsfirstlive-kannada/media/media_files/2025/08/01/dharmasthala-case10-2025-08-01-16-03-49.jpg)
ಹೌದು, ಎಸ್​ಐಟಿ ಅಧಿಕಾರಿಗಳ ತಂಡವು ಪಾಯಿಂಟ್​​-7ರಲ್ಲಿ ಮಣ್ಣು ಅಗೆಯುವ ವೇಳೆ ಕರ್ಚಿಫ್​ ಪತ್ತೆಯಾಗಿದೆ. ಎಸ್​ಐಟಿ ಟೀಂ ಗುಂಡಿ ಅಗೆಯುವ ವೇಳೆ ಸಿಕ್ಕಿರುವ ಒಂದು ಕರವಸ್ತ್ರ ಅನ್ನು FSL ತಜ್ಞರಿಗೆ ಹಸ್ತಾಂತರಿಸಲಾಗಿದೆ.
/filters:format(webp)/newsfirstlive-kannada/media/media_files/2025/08/01/dharamasthala-case-2025-08-01-06-52-04.jpg)
ಇನ್ನು, ಪಾಯಿಂಟ್-6ರಲ್ಲಿ ತನಿಖೆಗೆ ಟರ್ನಿಂಗ್​​​ ಪಾಯಿಂಟ್​​​ ಸಿಕ್ಕಿದ್ದು, ದೂರುದಾರ ಮಾರ್ಕ್​ ಮಾಡಿದ್ದ ಸ್ಥಳದಲ್ಲಿ ಮಾನವ ದೇಹದ ಮೂಳೆಗಳು ಸಿಕ್ಕಿವೆ. ಸದ್ಯ ಅವಶೇಷಗಳು ಸಿಕ್ಕ ಸ್ಥಳಕ್ಕೆ SIT ಹೆಚ್ಚಿನ ಭದ್ರತೆ ಕ್ರಮ ಕೈಗೊಂಡಿತ್ತು. 4 ದಿಕ್ಕಿನಲ್ಲಿ ಶೀಟ್ ಹಾಕಿ ಸಾಕ್ಷಿ ನಾಶ ಆಗದಂತೆ ಕಟ್ಟೆಚ್ಚರ ವಹಿಸಲಾಗಿತ್ತು.
ಪಾಯಿಂಟ್​-6 ಟ್ವಿಸ್ಟ್
- ಮಾನವ ದೇಹದ ತಲೆಬುರುಡೆಯ ಎರಡು ತುಂಡುಗಳು
- ಕಾಲಿನ 2 ಮೂಳೆ, ಬೆನ್ನು ಮೂಳೆಗಳ, ಸಣ್ಣ ಮೂಳೆಗಳು
- ತಲೆ ಬುರುಡೆಯ ಎರಡು ಚೂರುಗಳು ಸಹ ಪತ್ತೆ ಆಗಿವೆ
- ತುಂಡಾದ ಎಲೆಸ್ಟಿಕ್ ಒಳ ಉಡುಪಿನ ತುಂಡು ಸಹ ಪತ್ತೆ
- ಪಾಯಿಂಟ್-6ರಲ್ಲಿ 12 ಅಸ್ಥಿಪಂಜರ ಮೂಳೆಗಳು ಲಭ್ಯ
- ಅವಶೇಷ ಸಿಕ್ಕ ಸ್ಥಳದಲ್ಲಿ ಹೆಚ್ಚಿನ ಭದ್ರತೆಗೆ SIT ಕ್ರಮ
- 4 ದಿಕ್ಕಿನಲ್ಲಿ ಶೀಟ್ ಹಾಕಿ ಸಾಕ್ಷಿ ನಾಶ ಆಗದಂತೆ ಕಟ್ಟೆಚ್ಚರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us