/newsfirstlive-kannada/media/media_files/2025/08/02/dharmasthala-case21-2025-08-02-08-27-04.jpg)
ಧರ್ಮಸ್ಥಳ ಕೇಸ್ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. 8 ಪಾಯಿಂಟ್ ಅಗೆಯಲಾಗಿದೆ. ಐದು ಬಾಕಿ ಇದೆ. ಇವತ್ತು ಕಾರ್ಯಾಚರಣೆ ಶುರುವಾಗುತ್ತೆ. ಎಂಟರಲ್ಲಿ 6ನೇ ಪಾಯಿಂಟ್ನಲ್ಲಿ ಮಾತ್ರ ಮೂಳೆ ಸಿಕ್ಕಿವೆ. ಅದೇ ನಿಟ್ಟಿನಲ್ಲಿ ತನಿಖೆ ಬಿರುಸು ಪಡೆದಿದೆ.
ಇದನ್ನೂ ಓದಿ:8 ಮದ್ವೆಯಾಗಿ ಲಕ್ಷ.. ಲಕ್ಷ ಸುಲಿಗೆ; ಇನ್ನೇನು ಮತ್ತೊಂದು ಆಗಬೇಕು ಅನ್ನುವಷ್ಟರಲ್ಲೇ ಸಿಕ್ಕಿಬಿದ್ಳು ಕಿಲಾಡಿ ಲೇಡಿ!
ಈ ಅಗೆತ-ಬಗೆತ ಮೂರು ದಿನ ಪೂರೈಸಿವೆ. ಇವತ್ತು ನಾಲ್ಕನೇ ದಿನ ಗುದ್ದಲಿಗೆ ಕೆಲಸ ಸಿಗಲಿದೆ. ಎಂಟನೇ ಪಾಯಿಂಟ್ನಲ್ಲಿ ಕಾರ್ಯಾಚರಣೆ ಅಂತ್ಯ ಆಗಿದ್ದು, ಇವತ್ತು ಒಂಬತ್ತನೇ ಪಾಯಿಂಟ್ನಲ್ಲಿ ಹುಡುಕಾಟ ಶುರುವಾಗಲಿದೆ. ಒಟ್ಟು 5 ಅಡಿ ಆಳದವರೆಗೂ ಗುಂಡಿ ಅಗೆದರೂ ಏಳು ಮತ್ತು ಎಂಟನೇ ಪಾಯಿಂಟ್ನಲ್ಲಿ ಯಾವುದೇ ಅಸ್ತಿಪಂಜರ ಸಿಕ್ಕಿಲ್ಲ. ಆದ್ರೆ, ಪಾಯಿಂಟ್ 7ರಲ್ಲಿ ಒಂದು ಖರ್ಚೀಫ್ ಸಿಕ್ಕಿದ್ದು SIT ಅಧಿಕಾರಿಗಳು, FSL ತಜ್ಞರಿಗೆ ಹಸ್ತಾಂತರಿಸಿದ್ದಾರೆ. ಇತ್ತ, ಇನ್ನೊಂದು ದಿಕ್ಕಿನಲ್ಲೂ ತನಿಖೆ ನಡೆಸ್ತಿರುವ ಎಸ್ಐಟಿ, ಧರ್ಮಸ್ಥಳ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ. 1995 ರಿಂದ 2014ರ ವರೆಗಿನ ಯುಡಿಆರ್ ದಾಖಲೆಗಳನ್ನು ಪಡೆದಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ಅಪರಾಧ ಮತ್ತು ವಿಧಿವಿಜ್ಞಾನ ಶಾಸ್ತ್ರ ಮುಖ್ಯಸ್ಥ ಜಿ.ಎಸ್.ವೇಣು ಮಾಧವ್, ಸಿಕ್ಕ ಅಸ್ತಿಪಂಜರವು ಹೆಣ್ಣು-ಗಂಡು ಅಂತ ಗುರುತಿಸೋದು ಸವಾಲು, ಜೊತೆಗೆ ಅತ್ಯಾಚಾರ ನಡೆದ ಬಗ್ಗೆ ಪತ್ತೆ ಇನ್ನೂ ಕಷ್ಟ ಅಂತ ಹೇಳಿದ್ದಾರೆ. ಇನ್ನು, ಶಿವಮೊಗ್ಗ ಸಂಸದ ರಾಘವೇಂದ್ರ, ಧರ್ಮಸ್ಥಳ ಹಿಂದೂಗಳ ಆಧ್ಯಾತ್ಮಿಕ ಶಕ್ತಿಯ ತಾಣ. ಅದಕ್ಕೆ ಕಳಂಕ ತರುವ ಕೆಲಸ ಆಗ್ತಿದೆ ಅಂತ ಕಿಡಿಕಾರಿದ್ದಾರೆ. ಈವರೆಗೆ ಒಟ್ಟು 8 ಪಾಯಿಂಟ್ಗಳನ್ನ ಅಗೆಯಲಾಗಿದ್ದು, ಐದು ಪಾಯಿಂಟ್ ಬಾಕಿ ಇದೆ. ಇವತ್ತು ಕೂಡ ಕಾರ್ಯಾಚರಣೆ ನಡೆಯಲಿದ್ದು, ಆರನೇ ಪಾಯಿಂಟ್ನ್ನ ಸಂರಕ್ಷಿಸಿ ಇಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ