/newsfirstlive-kannada/media/media_files/2025/10/24/divya-suresh-2025-10-24-14-27-17.jpg)
ದಿವ್ಯಾ ಸುರೇಶ್
ಬೆಂಗಳೂರು: ಬಿಗ್​ಬಾಸ್ ಮಾಜಿ ಸ್ಪರ್ಧಿಯಾಗಿದ್ದ ದಿವ್ಯಾ ಸುರೇಶ್ ಅವರು ಹಿಟ್​ ಆ್ಯಂಡ್ ರನ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕ್ಕೆ ಒಳಗಾದ ದೂರುದಾರ ಕಿರಣ್ ಅವರು ಮಾತನಾಡಿದ್ದಾರೆ.
ನಮ್ಮ ಸಂಬಂಧಿ ಅನುಷಾಗೆ ಹುಷಾರಿರಲಿಲ್ಲ ಎಂದು ಬ್ಯಾಟರಾಯನಪುರದ ಎಂ.ಎಂ.ರಸ್ತೆಯಿಂದ ಗಿರಿನಗರ ಆಸ್ಪತ್ರೆಗೆ ಬೈಕಲ್ಲಿ ಹೋಗ್ತಾ ಇದ್ದೆ.​ ಅನಿತಾನೂ ಬೈಕ್​ ಅಲ್ಲಿ ಕುಳಿತಿದ್ದರು. ಇದೇ ಸಮಯದಲ್ಲಿ ದಿವ್ಯಾ ಸುರೇಶ್ ಕಾರು ಏಕಾಏಕಿ ಕ್ರಾಸ್​ನಲ್ಲಿ ಬಂದು ಅನಿತಾ ಅವರ ಕಾಲಿಗೆ ಗುದ್ದಿತು. ಪರಿಣಾಮ ನಾವು ಎಲ್ಲರೂ ಕೆಳಗೆ ಬಿದ್ದು ಕೂಗಿದರೂ ಕಾರು ನಿಲ್ಲಿಸದೇ ದಿವ್ಯಾ ಸುರೇಶ್ ಸ್ಥಳದಿಂದ ಪರಾರಿಯಾಗಿದ್ದರು ಎಂದು ದೂರುದಾರ ಕಿರಣ್​ ಆರೋಪಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/24/divya_suresh_car_1-2025-10-24-11-22-53.jpg)
ಅಪಘಾತಕ್ಕೀಡಾದ ಅನಿತಾ ಅವರು ಟೈಲರಿಂಗ್ ಕೆಲಸ ಮಾಡುತ್ತಿದ್ದಾರೆ. ದಿವ್ಯಾ ಸುರೇಶ್​ ಯಡವಟ್ಟಿನಿಂದ ಅನಿತಾ ಕಾಲಿನ ಮಂಡಿ ಚಿಪ್ಪು ಮುರಿದು ಹೋಗಿದೆ. ಹೀಗಾಗಿ ಒಂದು ವರ್ಷ ಅನಿತಾ ಓಡಾಡೋ ಆಗಿಲ್ಲ ಎಂದು ಬಿಜೆಎಸ್ ಆಸ್ಪತ್ರೆ ಡಾಕ್ಟರ್ ಹೇಳಿದ್ದಾರೆ. ಅನಿತಾ ಕಾಲಿಗೆ ಈಗ ಆಪರೇಷನ್ ಮಾಡಲಾಗಿದ್ದು ಎರಡು ಲಕ್ಷ ರೂಪಾಯಿ ಖರ್ಚು ಆಗಿದೆ. ಇದುವರೆಗೂ ದಿವ್ಯಾ ಸುರೇಶ್ ಅನಿತಾ ಹೇಗಿದ್ದಾರೆ ಎಂದು ಸಹ ಬಂದು ವಿಚಾರಿಸಿಲ್ಲ. ದಯವಿಟ್ಟು ನಮಗೆ ಪರಿಹಾರ ಕೊಡಿಸಿ ಎಂದು ಕಿರಣ್ ಅಳಲು ತೋಡಿಕೊಂಡಿದ್ದಾರೆ.
ಬಿಗ್​ ಬಾಸ್​ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್​​ ವಿರುದ್ಧ ಹಿಟ್​ ಆ್ಯಂಡ್​​ ರನ್​ ಕೇಸ್​ ದಾಖಲಾಗಿದೆ. ದಿವ್ಯಾ ಸುರೇಶ್​ ಓಡಿಸುತ್ತಿದ್ದ ಕಾರು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಿರಣ್, ಅನುಷಾ ಹಾಗೂ ಅನಿತಾ ಮೂವರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಬ್ಯಾಟರಾಯನಪುರದ ಎಂ.ಎಂ.ರಸ್ತೆಯಲ್ಲಿ ಅಕ್ಟೋಬರ್ 4 ಎಂದು ಈ ಅಪಘಾತ ಸಂಭವಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us