ನಮ್ಮ ಮೆಟ್ರೋದಲ್ಲಿ ಮೊಟ್ಟ ಮೊದಲ ಬಾರಿಗೆ ಅಂಗಾಂಗ ಸಾಗಣೆ.. ಶಸ್ತ್ರ ಚಿಕಿತ್ಸೆ ಯಶಸ್ವಿ

ಮೊಟ್ಟ ಮೊದಲ ಬಾರಿಗೆ ಸಿಲಿಕಾನ್​ ಸಿಟಿಯ ನಮ್ಮ ಮೆಟ್ರೋದಲ್ಲಿ ಮಾನವನ ಅಂಗಾಂಗ ಸಾಗಣೆ ಮಾಡಲಾಗಿದೆ. ಈ ಕುರಿತು ಬಿಎಂಆರ್​ಸಿಎಲ್​ (Bangalore Metro Rail Corporation Ltd) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

author-image
Bhimappa
BNG_NAMMA_METRO
Advertisment

ಬೆಂಗಳೂರು: ಇದೇ ಮೊಟ್ಟ ಮೊದಲ ಬಾರಿಗೆ ಸಿಲಿಕಾನ್​ ಸಿಟಿಯ ನಮ್ಮ ಮೆಟ್ರೋದಲ್ಲಿ ಮಾನವನ ಅಂಗಾಂಗ ಸಾಗಣೆ ಮಾಡಲಾಗಿದೆ. ಈ ಕುರಿತು ಬಿಎಂಆರ್​ಸಿಎಲ್​ (Bangalore Metro Rail Corporation Ltd) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

ಆಗಸ್ಟ್​ 1 ರಂದು ವೈದೇಹಿ ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಯಕೃತ್ತು ಅನ್ನು ವೈಟ್​ ಫೀಲ್ಡ್​ನ ಮೆಟ್ರೋ ಸ್ಟೇಷನ್​ಗೆ ರಾತ್ರಿ 8.42ಕ್ಕೆ ತರಲಾಗಿತ್ತು. ಈ ವೇಳೆ ಓರ್ವ ವೈದ್ಯ ಜೊತೆಗೆ 7 ಸಿಬ್ಬಂದಿ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ. ಇದಕ್ಕೂ ಮೊದಲು ಮೆಟ್ರೋ ಸಹಾಯಕ ಭದ್ರತಾ ಅಧಿಕಾರಿ ಸೇರಿ ಸಿಬ್ಬಂದಿ ಪರಿಶೀಲನೆ ಮಾಡಿ ಮೆಟ್ರೋ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. 

ಇದನ್ನೂ ಓದಿ: ಪ್ರಸಿದ್ಧ್​ ಕೃಷ್ಣ ಬೌಲಿಂಗ್​ ಪರಾಕ್ರಮ.. ಕನ್ನಡಿಗನ ಘರ್ಜನೆಗೆ ಇಂಗ್ಲೆಂಡ್​ ಬ್ಯಾಟರ್ಸ್​ ಕಂಗಾಲು..!

NAMMA_METRO (1)

ವೈಟ್​ ಫೀಲ್ಡ್​ನ ಮೆಟ್ರೋ ಸ್ಟೇಷನ್​ನಿಂದ ರಾತ್ರಿ 9.48ಕ್ಕೆ ಆರ್​ಆರ್ ನಗರದ ಮೆಟ್ರೋ ನಿಲ್ದಾಣಕ್ಕೆ ಯಕೃತ್ತು ಅನ್ನು ವೈದ್ಯರ ತಂಡ ತಂದಿದೆ. ಬಳಿಕ ಇಲ್ಲಿಂದ ಆಂಬುಲೆನ್ಸ್ ಮೂಲಕ ಸ್ಪರ್ಶ ಆಸ್ಪತ್ರೆಗೆ ಯಕೃತ್ತು ಅನ್ನು ರವಾನೆ ಮಾಡಲಾಗಿತ್ತು. ಆ ಮೇಲೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ಯಶಸ್ವಿಯಾಗಿ ಮಾಡಿದ್ದಾರೆ. ಮಾನವ ಅಂಗಾಂಗ ಮೆಟ್ರೋದಲ್ಲಿ ರವಾನೆ ಮಾಡಿರುವುದು ದೇಶದಲ್ಲೇ ಎರಡನೇ ಘಟನೆ ಆಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Organ Transport Metro
Advertisment