ಪ್ರಸಿದ್ಧ್​ ಕೃಷ್ಣ ಬೌಲಿಂಗ್​ ಪರಾಕ್ರಮ.. ಕನ್ನಡಿಗನ ಘರ್ಜನೆಗೆ ಇಂಗ್ಲೆಂಡ್​ ಬ್ಯಾಟರ್ಸ್​ ಕಂಗಾಲು..!

ಕನ್ನಡಿಗ ಪ್ರಸಿದ್ಧ್​​ ಕೃಷ್ಣ ಬಿರುಗಾಳಿಯಂತಹ ದಾಳಿಗೆ ಇಂಗ್ಲೆಂಡ್​ ಬ್ಯಾಟ್ಸ್​​ಮನ್​ಗಳು ಕಂಗಾಲ್​ ಆದರು. ಈವರೆಗೆ ಟೀಕಿಸಿದವರಿಗೆ, ಸಾಮರ್ಥ್ಯ ಪ್ರಶ್ನಿಸಿದವರಿಗೆ ಪ್ರಸಿದ್ಧ್​​, ಪರ್ಫಾಮೆನ್ಸ್​ನಿಂದಲೇ ಪವರ್​ಫುಲ್ ಆನ್ಸರ್​ ಕೊಟ್ಟಿದ್ದಾರೆ.

author-image
Bhimappa
PRASIDDH_KRISHNA_NEW
Advertisment

ಕೆನ್ನಿಂಗ್ಟನ್​ ಓವಲ್​ ಮೈದಾನದಲ್ಲಿ ನಿನ್ನೆ ಕರ್ನಾಟಕದ ವೇಗಿ ಪರಾಕ್ರಮ ಜೋರಾಗಿತ್ತು. ನಮ್ಮ ಹೆಮ್ಮೆಯ ಕನ್ನಡಿಗ ಪ್ರಸಿದ್ಧ್​​ ಕೃಷ್ಣರ ಬಿರುಗಾಳಿಯಂತಾ ದಾಳಿಗೆ ಇಂಗ್ಲೆಂಡ್​ ಬ್ಯಾಟ್ಸ್​​ಮನ್​ಗಳು ಕಂಗಾಲ್​ ಆದ್ರು. ಈವರೆಗೆ ಟೀಕಿಸಿದವರಿಗೆ, ಸಾಮರ್ಥ್ಯ ಪ್ರಶ್ನಿಸಿದವರಿಗೆ ಪ್ರಸಿದ್ಧ್​​, ಪರ್ಫಾಮೆನ್ಸ್​ನಿಂದಲೇ ಪವರ್​ಫುಲ್ ಆನ್ಸರ್​ ಕೊಟ್ರು. ಪ್ರಸಿದ್ಧ್​​ ಪರಾಕ್ರಮ. 

ಇಂಡೋ-ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್​ ಪಂದ್ಯ 2ನೇ ದಿನ ನಡೆದಿದ್ದು ಕನ್ನಡಿಗನ ದರ್ಬಾರ್​. ಕೆನ್ನಿಂಗ್ಟನ್​ ಓವಲ್​ನಲ್ಲಿ ಕನ್ನಡಿಗ ಪ್ರಸಿದ್ಧ್​ ಕೃಷ್ಣ ಘರ್ಜನೆಯ ಮುಂದೆ ಇಂಗ್ಲೆಂಡ್​ ಲಯನ್ಸ್​ ಕಂಗಾಲ್​ ಆದ್ರು. ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದೆ ಟೀಕೆಗಳ ಮೇಲೆ ಟೀಕೆಗಳನ್ನ ಎದುರಿಸಿದ್ದ ಪ್ರಸಿದ್ಧ್​​, ನಿನ್ನೆಯ ದಿನದಾಟ ಫಸ್ಟ್​ ಸ್ಪೆಲ್​​ನಲ್ಲೂ ರನ್​ ನೀಡಿ ದುಬಾರಿಯಾಗಿದ್ರು. 5 ಓವರ್​​ಗಳಲ್ಲೇ 31 ರನ್​ ಬಿಟ್ಟು ಕೊಟ್ಟಿದ್ರು. 

ಸತತ ವೈಫಲ್ಯ, ಮೇಲಿಂದ ಮೇಲೆ ಟೀಕೆ.. ಇದೆಲ್ಲದರಿಂದ ಗಾಯಗೊಂಡಿದ್ದ ಪ್ರಸಿದ್ಧ್​​ ಕೃಷ್ಣ  ಕೆರಳಿದ ಸಿಂಹದಂತೆ ಹೋರಾಡಿದ್ರು. ಗಾಯಗೊಂಡಿರುವ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿತ್ತೆ ಅನ್ನೋ ಮಾತು ನಿನ್ನೆ ನಮ್ಮ ಕರ್ನಾಟಕದ ವೇಗಿಯ ವಿಚಾರದಲ್ಲಿ ನಿಜವಾಯ್ತು.  

PRASIDDH_KRISHNA

ಪ್ರಸಿದ್ಧ್​​ ಪ್ಲಾನ್​ಗೆ ಬಲಿಯಾದ ಕ್ರಾವ್ಲಿ.!

ಇಂಗ್ಲೆಂಡ್​ ಓಪನರ್ ಜಾಕ್​​ ಕ್ರಾವ್ಲಿ ಟೆಸ್ಟ್​ನಲ್ಲಿ ಟಿ20 ಸ್ಟೈಲ್​ ಆಫ್​ ಬ್ಯಾಟಿಂಗ್​ ನಡೆಸ್ತಾ ಇದ್ರು. 14 ಬೌಂಡರಿ ಚಚ್ಚಿದ್ದ ಕ್ರಾವ್ಲಿ 57 ಎಸೆತಕ್ಕೆ 64 ರನ್​ಗಳಿಸಿ ಶತಕದ ಕನವರಿಕೆಯಲ್ಲಿದ್ರು. ಆದ್ರೆ, ಈ ಕನಸನ್ನ ಪ್ರಸಿದ್ಧ್​​ ಕೃಷ್ಣ ನುಚ್ಚು ನೂರು ಮಾಡಿದ್ರು. ಪಕ್ಕಾ ಪ್ಲಾನ್​ ಮಾಡಿ ಆಫ್​ ಸ್ಟಂಪ್​ ಲೈನ್​ನಲ್ಲಿ ಹಾಕಿದ ಎಸೆತಕ್ಕೆ ಕ್ರಾವ್ಲಿ ಬಲಿಯಾದ್ರು. 

ಕನ್ನಡಿಗರ ಟ್ರ್ಯಾಪ್​ಗೆ ಬಿದ್ದ ಜೇಮಿ ಸ್ಮಿತ್​.!

ಸರಣಿಯಲ್ಲಿ ಕನ್ಸಿಸ್ಟೆಂಟ್​ ಆಗಿ ಪರ್ಫಾಮ್​​ ಮಾಡಿದ್ದ ಜೇಮಿ ಸ್ಮಿತ್​ ಆಟ ನಿನ್ನೆ ನಡೀಲಿಲ್ಲ. ಪ್ರಸಿದ್ಧ್​ ಕೃಷ್ಣ, ಕೆ.ಎಲ್​ ರಾಹುಲ್​ ಟ್ರ್ಯಾಪ್​​ಗೆ ಸ್ಮಿತ್​ ಸುಲಭಕ್ಕೆ ಬಿದ್ರು. ಪ್ರಸಿದ್ಧ್​​ ಔಟ್​​ ಸೈಡ್​ ಆಫ್​ ಸ್ಟಂಪ್​ ಲೈನ್​ ಹಾಕಿದ ಬೌನ್ಸರ್​ ಹಾಕಿದ್ರು.​ ಜೇಮಿ ಸ್ಮಿತ್​ ಬ್ಯಾಟ್​ಗೆ ಸವರಿದ ಚೆಂಡು ಸೀದಾ ಸ್ಲಿಪ್​ನಲ್ಲಿದ್ದ ಕೆ.ಎಲ್​ ರಾಹುಲ್​​ ಕೈ ಸೇರ್ತು. 

ಪ್ರಸಿದ್ಧ್ ಎಸೆತಕ್ಕೆ ಓವರ್​ಟನ್​​​ ಕಕ್ಕಾಬಿಕ್ಕಿ.!

ಜೇಮಿ ಸ್ಮಿತ್​​ ಪತನದ ಬಳಿಕ ಬ್ಯಾಟಿಂಗ್​ಗೆ ಬಂದ ಓವರ್​ಟನ್​ಗೆ ಸೆಟಲ್​ ಆಗೋಕೂ ಕನ್ನಡಿಗ ಪ್ರಸಿದ್ಧ್​​ ಕೃಷ್ಣ ಅವಕಾಶ ನೀಡಲಿಲ್ಲ. 4ನೇ ಎಸೆತದಲ್ಲೇ ಎಲ್​ಬಿ ಟ್ರ್ಯಾಪ್​ ಕೆಡವಿದ್ರು. ಇದ್ರೊಂದಿಗೆ ಸೆಕೆಂಡ್​​ ಸೆಷನ್​ನಲ್ಲಿ ಟೀಮ್​ ಇಂಡಿಯಾಗೆ ಮೇಲುಗೈ ತಂದುಕೊಟ್ರು.  

ಇದನ್ನೂ ಓದಿ:BEML Recruitment; ಬೆಂಗಳೂರು, ಕೋಲಾರ, ಮೈಸೂರು ಸೇರಿ ದೇಶದ ಈ

TEAM_INDIA (3)

ಪ್ರಸಿದ್ಧ್​ಗೆ 4ನೇ ಬಲಿಯಾದ ಅಟ್ಕಿನ್ಸನ್​.!

ಟೀ ಬ್ರೇಕ್​ ಬಳಿಕವೂ ಪ್ರಸಿದ್ಧ್​ ಅಬ್ಬರ ಮುಂದುವರೆಯಿತು. ಶಾರ್ಟ್​​ ಬಾಲ್​ ಟ್ರ್ಯಾಪ್​ಗೆ ಬಿದ್ದ ಗಸ್​ ಅಟ್ಕಿನ್ಸನ್​ ಕರ್ನಾಟಕದ ವೇಗಿಗೆ 4ನೇ ಬಲಿಯಾದರು. ಗಸ್​​ ಅಟ್ಕಿನ್ಸನ್​ ಮಿಸ್​​ ಹಿಟ್​​ನ ಮಿಡ್​ ಆನ್​ನಲ್ಲಿದ್ದ ಆಕಾಶ್​​ದೀಪ್​ ಕ್ಯಾಚ್​ ಆಗಿ ಕನ್ವರ್ಟ್​ ಮಾಡಿದರು. 

ಪ್ರಸಿದ್ಧ್​ ಕೃಷ್ಣ ಫಸ್ಟ್​ ಇನ್ನಿಂಗ್ಸ್​ನಲ್ಲಿ 4 ವಿಕೆಟ್​ ಕಬಳಿಸಿ ಮಿಂಚಿದರು. ಈ ಮೂಲಕ ತನ್ನ ಮೇಲಿದ್ದ ಎಲ್ಲಾ ಟೀಕೆಗಳಿಗೆ, ಸಾಮರ್ಥ್ಯವನ್ನ ಪ್ರಶ್ನಿಸಿದವರಿಗೆ ಕರ್ನಾಟಕದ ವೇಗಿ ತನ್ನ ಪರ್ಫಾಮೆನ್ಸ್​ನಿಂದಲೇ ಆನ್ಸರ್​ ಕೊಟ್ಟಿದ್ದಾರೆ. ಇದೇ ಕನ್ಸಿಸ್ಟೆನ್ಸಿಯನ್ನ ಕನ್ನಡಿಗ ಮುಂದೆಯೂ ಕಾಯ್ದುಕೊಂಡ್ರೆ, ತಂಡದಲ್ಲಿ ಖಾಯಂ ಸ್ಥಾನ ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Prasidh Krishna
Advertisment