ಕಲಬುರಗಿಯಲ್ಲಿ ಮರ್ಯಾದಾ ಹ*ತ್ಯೆ.. ಕತ್ತು ಹಿಸುಕಿ ಮಗಳ ಜೀವ ತೆಗೆದ ತಂದೆ

ಅನ್ಯಜಾತಿಯ ಯುವಕನನ್ನ ಪ್ರೀತಿಸುತ್ತಿದ್ದ ಕಾರಣಕ್ಕೆ ತಂದೆ ಮಗಳ ಕತ್ತು ಹಿಸುಕಿ ಜೀವ ತೆಗೆದ ಘಟನೆ ಮೇಳಕುಂದಾ (ಬಿ) ಗ್ರಾಮದಲ್ಲಿ ನಡೆದಿದೆ. ಕವಿತಾ ಅದೇ ಗ್ರಾಮದ ಅನ್ಯಜಾತಿಯ ಯುವಕನನ್ನ ಪ್ರೀತಿಸುತ್ತಿದ್ದಳಂತೆ.

author-image
Veenashree Gangani
kalaburagi maryada hatye
Advertisment

ಕಲಬುರಗಿ: ಅನ್ಯಜಾತಿಯ ಯುವಕನನ್ನ ಪ್ರೀತಿಸುತ್ತಿದ್ದ ಕಾರಣಕ್ಕೆ ತಂದೆಯೇ ಮಗಳ ಕತ್ತು ಹಿಸುಕಿ ಜೀವ ತೆಗೆದ ಘಟನೆ ಮೇಳಕುಂದಾ (ಬಿ) ಗ್ರಾಮದಲ್ಲಿ ನಡೆದಿದೆ. ಕವಿತಾ ಕೊಳ್ಳೂರ್ ಮೃತ ಯುವತಿ. ಕವಿತಾ ಅದೇ ಗ್ರಾಮದ ಅನ್ಯಜಾತಿಯ ಯುವಕನನ್ನ ಪ್ರೀತಿಸುತ್ತಿದ್ದಳಂತೆ. ಹೀಗಾಗಿ ಮರ್ಯಾದೆಗೆ ಅಂಜಿ ತಂದೆಯೇ ಮಗಳ ಪ್ರಾಣ ತೆಗೆದಿದ್ದಾನೆ. ಅಷ್ಟೇ ಅಲ್ಲದೇ ಸಾಕ್ಷಿ ನಾಶಪಡಿಸಲು ಮಗಳ ಶವಕ್ಕೆ ಬೆಂಕಿ ಹಚ್ಚಿದ್ದಾನೆ.

kalaburagi maryada hatye(2)

ಇದನ್ನೂ ಓದಿ: ಹಗಲಿನಲ್ಲಿ ‘Change Your Life’ ಎನ್ನುತ್ತಿದ್ದ ಯೂಟ್ಯೂಬರ್.. ರಾತ್ರಿ ಮಾಡ್ತೀರೋದು..!

ಕವಿತಾ ಕೊಳ್ಳೂರ್ ಪಿಯುಸಿ ಮುಗಿಸಿ, ನರ್ಸಿಂಗ್ ಓದುತ್ತಿದ್ದಳು. ಕವಿತಾ ಮೇಳಕುಂದಾ (ಬಿ) ಗ್ರಾಮದ ಆಟೋ ಡ್ರೈವರ್​ನನ್ನು ಪ್ರೀತಿಸುತ್ತಿದ್ದಳಂತೆ. ಮಗಳು ಕವಿತಾ ಪ್ರೀತಿ ವಿಚಾರ ತಿಳಿದು ಹೆತ್ತವರ ಆಕ್ರೋಶ ಹೊರ ಹಾಕಿದ್ದಾರೆ. ಮೊದಲು ಮಗಳಿಗೆ ಬುದ್ಧಿ ಹೇಳಿ ಸರಿದಾರಿಗೆ ತರಲು ನೋಡಿದ್ದಾರೆ. ಆದ್ರೆ ಯುವತಿ ಪ್ರೀತಿಸಿದ ಹುಡುಗನನ್ನು ಬಿಟ್ಟು ಕೊಡಲು ಒಪ್ಪದಿದ್ದಾಗ ಚಿತ್ರಹಿಂಸೆ ಕೊಟ್ಟಿದ್ದಾರಂತೆ. ಮೊನ್ನೆ ರಾತ್ರಿ ತಂದೆ ಶಂಕರ ಕೊಳ್ಳೂರ್​ ಕವಿತಾ ಮೇಲೆ ಹಲ್ಲೆ ಮಾಡಿದ್ದನಂತೆ. 

kalaburagi maryada hatye(1)

ಇನ್ನು, ಕವಿತಾ ತಂದೆಗೆ ಸಹೋದರ ಸಂಬಂಧಿ ಶರಣಪ್ಪ, ದತ್ತಪ್ಪ ಎಂಬುವವರು ಸಾಥ್​ ನೀಡಿದ್ದಾರೆ. ತಂದೆಯ ಜೊತೆಗೆ ಕವಿತಾಳನ್ನ ಕತ್ತು ಹಿಸುಕಿ ಮೂವರು ಆರೋಪಿಗಳು ಕೊಂ*ದಿದ್ದಾರೆ. ಬಳಿಕ ಯಾರಿಗೂ ಅನುಮಾನ ಬರಬಾರದು ಅಂತ ಕ್ರಿಮಿನಾಶಕ ಸುರಿದು ಆ*ತ್ಮಹತ್ಯೆ ಅಂತ ಬಿಂಬಿಸಲು ಯತ್ನಿಸಿದ್ದಾರೆ. ಆತುರಾತುರವಾಗಿ ತಮ್ಮದೇ ಹೊಲದಲ್ಲಿ ಮಗಳ ಶ*ವ ಸುಟ್ಟು ಹಾಕಿದ್ದಾರೆ. ಕವಿತಾಳ ಕೊ*ಲೆ ಬಗ್ಗೆ ಫರಹತಾಬಾದ್ ಠಾಣೆಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ತಿಳಿಸಿದ್ದಾರೆ. ಆ ಕೂಲಡೇ ಅಲರ್ಟ್​ ಆದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದವರನ್ನು ವಿಚಾರಿಸಿದಾಗ ತಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಮಗಳ ಕೊ*ಲೆ ಆರೋಪದಡಿ ತಂದೆ ಶಂಕರ್ ಕೊಳ್ಳೂರ್ ಅರೆಸ್ಟ್ ಮಾಡಿದ್ದಾರೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

honour killing
Advertisment