/newsfirstlive-kannada/media/media_files/2025/08/02/prajwal-revanna2-2025-08-02-08-06-00.jpg)
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮನೆಕೆಲಸದಾಕೆಯ ಮೇಲಿನ ಅ*ತ್ಯಾಚಾರ ಪ್ರಕರಣದಲ್ಲಿ ದೋಷಿ ಅಂತ ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯ ತೀರ್ಪು ನೀಡಿದೆ. ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಹೀಗಾಗಿ ಕೋರ್ಟ್ನ ತೀರ್ಪಿನತ್ತ ಇಡೀ ರಾಜ್ಯದ ಚಿತ್ತ ನೆಟ್ಟಿದೆ. ಎಷ್ಟು ವರ್ಷ ಶಿಕ್ಷೆ ಆಗಬಹುದು? ಪ್ರಜ್ವಲ್ಗೆ ಕಾನೂನು ಹೋರಾಟಕ್ಕೆ ಅವಕಾಶ ಇದ್ಯಾ? ಎಂಬುವುದರ ಬಗ್ಗೆ ರಿಪೋರ್ಟ್ ಇಲ್ಲಿದೆ.
ಇದನ್ನೂ ಓದಿ: ಅವಳಿ ಮಕ್ಕಳಿಗೆ ಅಮ್ಮ ಆಗ್ತಿದ್ದಾರೆ ಭಾವನಾ.. ಒಂಟಿಯಾಗಿ ತಾಯಿ ಆಗುವ ಬಗ್ಗೆ ನಟಿ ಹೇಳಿದ್ದೇನು..?
ಇಡೀ ಮನೆಗೆ ಮೌನದ ಗ್ರಹಣ ಆವರಿಸಿದೆ. ಸದ್ಯ ಈ ಗ್ರಹಣಕ್ಕೆ ಮುಕ್ತಿಯಿಲ್ಲ. ಏಕಕಾಲಕ್ಕೆ ಒಕ್ಕರಿಸಿದ ಬಿಕ್ಕಿನ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳಿಲ್ಲ. ರಾಜ್ಯ ರಾಜಕೀಯದ ದೊಡ್ಮನೆ ಅಂತ ಖ್ಯಾತಿ ಪಡೆದ ಆ ಮನೆಯ ಲಕ್ಷಣವೇ ಕುಂದಿಸಿದೆ ಈ ಘಟನೆ. ಅಂದ್ಹಾಗೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಇವತ್ತು ಶಿಕ್ಷೆ ಪ್ರಮಾಣ ಪ್ರಕಟ ಆಗಲಿದೆ.
ನಿನ್ನೆ ರಿಲೀಫ್ ನಿರೀಕ್ಷೆಯಲ್ಲಿದ್ದ ಪ್ರಜ್ವಲ್ ರೇವಣ್ಣಗೆ ಶಾಕ್ ಸಿಕ್ಕಿದೆ. ಹೊಳೆನರಸೀಪುರದ ಕೇಸ್ನಲ್ಲಿ ಮಹತ್ವದ ತೀರ್ಪು ನೀಡಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ರೇಪ್ ಕೇಸ್ನಲ್ಲಿ ಪ್ರಜ್ವಲ್ ದೋಷಿ ಅಂತ ತೀರ್ಪು ಬಂದಿದೆ. ಇವತ್ತು ಶಿಕ್ಷೆಯ ಪ್ರಮಾಣವನ್ನ ಕೋರ್ಟ್ ಪ್ರಕಟಿಸಲಿದೆ. ತೀರ್ಪು ಪ್ರಕಟಿಸ್ತಿದ್ದ ಪ್ರಜ್ವಲ್ ಕಣ್ಣಲ್ಲಿ ನೀರು ಉಕ್ಕಿದೆ. ತಂದೆ ರೇವಣ್ಣ ಮೌನಕ್ಕೆ ಜಾರಿದ್ದಾರೆ. ಪ್ರಜ್ವಲ್ ವಿರುದ್ಧದ ದಾಖಲಾಗಿರುವ ಸೆಕ್ಷನ್ಗಳು ಮತ್ತು ಅವುಗಳಲ್ಲಿ ನೀಡಬಹುದಾದ ಶಿಕ್ಷೆಯ ಪ್ರಮಾಣ ಬಗ್ಗೆ ಮಾಹಿತಿ ಇಲ್ಲಿದೆ.
ಎಷ್ಟು ವರ್ಷ ಶಿಕ್ಷೆಗೆ ಅವಕಾಶ?
ಬಿಎನ್ಎಸ್ 376(2) (k), 376 (2) (n), 354 (a) (b) (c), 506 ಮತ್ತು 201, IT ACT 66(E) ಅಡಿಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಗಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 376(2) (k) ಮತ್ತು 376 (2) (n) ಕನಿಷ್ಟ 10 ವರ್ಷ, ಗರಿಷ್ಠ ಜೀವಿತಾವಧಿ ವರೆಗೂ ಶಿಕ್ಷೆ ವಿಧಿಸುವ ವಿವೇಚನಾಧಿಕಾರವನ್ನು ಕೋರ್ಟ್ ಹೊಂದಿದೆ. ಅದೇ ರೀತಿ 354 (a) (b) (c) ಅಡಿಯಲ್ಲಿ 3 ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ಅಲ್ಲದೇ ಸೆಕ್ಷನ್ 506 ಅಡಿಯಲ್ಲಿ 6 ತಿಂಗಳು, 201 ಬಿಎನ್ಎಸ್ ಅಡಿಯಲ್ಲಿ ಕನಿಷ್ಠ 1 ವರ್ಷದಿಂದ 7 ವರ್ಷ ಶಿಕ್ಷೆ ನೀಡಬಹುದು. ಹಾಗೆಯೇ ಸೆಕ್ಷನ್ 66(E) of ಐಟಿ ಆ್ಯಕ್ಟ್ 2008 ಅಡಿಯಲ್ಲಿ 3 ವರ್ಷ ಶಿಕ್ಷೆ ವಿಧಿಸುವ ಅವಕಾಶಗಳಿವೆ.
ಸಂತ್ರಸ್ತೆ ಪರವಾಗಿ ಹೋರಾಟ ನಡೆಸಿದ ಸಾಹಿತಿ ಮತ್ತು ಹೋರಾಟಗಾರ್ತಿ ರೂಪಾ ಹಾಸನ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ತೀರ್ಪು ಸತ್ಯದ ಗೆಲುವು. ಅನೇಕ ಹೆಣ್ಣುಮಕ್ಕಳು ಪ್ರಜ್ವಲ್‌ನಿಂದ ಶೋಷಣೆಗೆ ಒಳಗಾಗಿದ್ದರು. ಅವರು ಸಹಾಯವಿಲ್ಲದ ಸ್ಥಿತಿಯಲ್ಲಿ ಕಣ್ಣೀರಿಡುತ್ತಿದ್ದಾರೆ, ಶಾಪ ಹಾಕಿದ್ದಾರೆ. ಇಂದಿನ ತೀರ್ಪು ಅವರು ಅನುಭವಿಸಿದ ನೋವಿಗೆ ಸಮಾಧಾನ ತಂದಿದೆ ಎಂದು ರೂಪಾ ಹಾಸನ್ ಹೇಳಿದ್ದಾರೆ. ಇದೇ ವಿಚಾರ ಬಗ್ಗೆ ದೆಹಲಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಕಾನೂನು ಪ್ರಶ್ನೆ ಮಾಡಬಾರದು. ನ್ಯಾಯಾಲಯಕ್ಕೆ ನಾವು ತಲೆ ಬಾಗಬೇಕು ಅಂತ ಪ್ರತಿಕ್ರಿಯೆ ನೀಡಿದ್ರು.
ಇದನ್ನೂ ಓದಿ:8 ಮದ್ವೆಯಾಗಿ ಲಕ್ಷ.. ಲಕ್ಷ ಸುಲಿಗೆ; ಇನ್ನೇನು ಮತ್ತೊಂದು ಆಗಬೇಕು ಅನ್ನುವಷ್ಟರಲ್ಲೇ ಸಿಕ್ಕಿಬಿದ್ಳು ಕಿಲಾಡಿ ಲೇಡಿ!
ಒಂದು ಪ್ರಕರಣದಲ್ಲಷ್ಟೇ ಇಂದು ತೀರ್ಪು ಬಂದಿದ್ದು, ಇನ್ನೂ ಮೂರು ಪ್ರಕರಣಗಳು ಬಾಕಿ ಇದೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 1461 ಅತ್ಯಾಚಾರ ಪ್ರಕರಣಗಳು ವಿವಿಧ ಠಾಣೆಗಳಲ್ಲಿವೆ. ಆದ್ರೆ ಈ ಪೈಕಿ ಮೊದಲ ಬಾರಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಜ್ವಲ್ ರೇವಣ್ಣ, ದೋಷಿ ಅಂತ ತೀರ್ಪು ನೀಡಿದೆ. ಇವತ್ತು ಶಿಕ್ಷೆ ಪ್ರಕಟ ಆಗಲಿದ್ದು, ಎಷ್ಟು ವರ್ಷ ಅನ್ನೋದು ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ