/newsfirstlive-kannada/media/media_files/2025/08/03/ind_vs_us-2025-08-03-19-20-28.jpg)
ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಹಿರಿಯ ನಾಗರಿಕರು 5 ದಿನಗಳ ಹಿಂದೆ ಅಮೆರಿಕದಲ್ಲಿ ನಾಪತ್ತೆಯಾಗಿದ್ದರು. ಸದ್ಯ ಇದಕ್ಕೆ ಸಂಬಂಧಿಸಿದಂತೆ ಕಾರು ಅಪಘಾತದಲ್ಲಿ ನಾಲ್ವರು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.
ಒಂದೇ ಕುಟುಂಬದ ಡಾ. ಕಿಶೋರ್ ದಿವಾನ್ (89), ಆಶಾ ದಿವಾನ್ (85), ಶೈಲೇಶ್ ದಿವಾನ್ (86) ಹಾಗೂ ಗೀತಾ ದಿವಾನ್ (84) ಮೃತರು ಎಂದು ಗುರುತಿಸಲಾಗಿದೆ. ಇವರು ಚಲಿಸುತ್ತಿದ್ದ ತಿಳಿ ಹಸಿರು ಬಣ್ಣದ ಟೊಯೋಟಾ ಕ್ಯಾಮ್ರಿ ಕಾರು ವೀಲಿಂಗ್​ ಕ್ರೀಕ್​ ರೋಡ್​ನಲ್ಲಿ ಪತ್ತೆ ಆಗಿದೆ. ಈ ಪ್ರದೇಶದಲ್ಲಿ ಯಾರು ಹೋಗುವಂತೆ ಇರಲಿಲ್ಲ. ರಿಮೋಟ್​ ಕಂಟ್ರೋಲ್ ಪ್ರದೇಶವಾಗಿತ್ತು. ರಕ್ಷಣಾ ಸಿಬ್ಬಂದಿ ಸತತ ಐದು ಗಂಟೆಗಳ ಕಾಲ ರಕ್ಷಣಾ ಕಾರ್ಯ ನಡೆಸಿ ಘಟನಾ ಸ್ಥಳವನ್ನು ತಲುಪಿದ್ದಾರೆ ಎನ್ನಲಾಗಿದೆ.
ಮಾರ್ಷಲ್​​ ಕೌಂಟಿಯಲ್ಲಿರುವ ಇಸ್ಕಾನ್​ಗೆ ಸಂಬಂಧಿಸಿದ ಗೋಲ್ಡ್​ ಪ್ಯಾಲೇಸ್​ನಲ್ಲಿ ಉಳಿದುಕೊಳ್ಳಲು ದಿವಾನ್ ಕುಟುಂಬ ಪ್ಲಾನ್ ಮಾಡಿತ್ತು. ಇದಕ್ಕೂ ಮೊದಲು ಜುಲೈ 29 ರಂದು ಪೆನ್ಸಿಲ್ವೇನಿಯಾದ ಎರಿಯ ಪೀಚ್ ಸ್ಟ್ರೀಟ್‌ನಲ್ಲಿರುವ ಬರ್ಗರ್ ಕಿಂಗ್ ಔಟ್‌ಲೆಟ್‌ನಲ್ಲಿ ಕೊನೆ ಬಾರಿ ಇವರೆಲ್ಲ ಕಾಣಿಸಿಕೊಂಡಿದ್ದರು. ಇದು ಅಲ್ಲದೇ ಇವರ ಕೊನೆ ಕ್ರೆಡಿಟ್ ಕಾರ್ಡ್ ವಹಿವಾಟು ಕೂಡ ಇದೇ ಸ್ಥಳದಲ್ಲಿ ನಡೆದಿತ್ತು. ಆದರೆ ಗೋಲ್ಡ್​ ಪ್ಯಾಲೇಸ್ ಅನ್ನು ತಲುಪುವುದಕ್ಕೂ ಮೊದಲೇ ದುರಂತ ನಡೆದಿದೆ ಎಂದು ತಿಳಿದು ಬಂದಿದೆ.
ತಿಳಿ ಹಸಿರು ಬಣ್ಣದ ಕಾರಿನ ನಂಬರ್​ ಪ್ಲೇಟ್ (EKW2611) ನ್ಯೂಯಾರ್ಕ್​ ನಗರದ್ದು ಆಗಿದೆ. ಇವರ ಕೊನೆ ಫೋನ್ ಸಂಭಾಷಣೆ ಕೂಡ ಜುಲೈ 29 ರಂದು ನಡೆದಿದೆ. ಮೌಂಡ್ಸ್​ವಿಲ್ಲೇಯಲ್ಲಿ ರಾತ್ರಿ 3 ಗಂಟೆಗೆ ಇವರ ಫೋನ್ ಟವರ್​ ಸಿಗ್ನಲ್ ಕೊನೆಯ ಡಾಟಾವಾಗಿದೆ. ಇವರ ನಾಪತ್ತೆ ಆದ ಐದು ದಿನಗಳಿಂದ ಅಲ್ಲಿನ ರಕ್ಷಣಾ ತಂಡ ಹೆಲಿಕಾಪ್ಟರ್​ ಮೂಲಕ ಹುಡುಕಾಟ ನಡೆಸಿದ್ದರು. ಸದ್ಯ ಇಂದು ನಾಲ್ವರು ನಿಧನ ಹೊಂದಿರುವುದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ