ಗಂಡನನ್ನ ಕೃಷ್ಣಾ ನದಿಗೆ ತಳ್ಳಿದ ಕೇಸ್​; ಪೋಕ್ಸೋ ಕಾಯ್ದೆಯಡಿ ಆರೋಪಿ ತಾತಪ್ಪ ಅರೆಸ್ಟ್​​

10 ಮಂದಿ ವಿರುದ್ಧವೂ ಇದೇ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲು ಆಗುತ್ತಿದ್ದಂತೆ ತಾತಪ್ಪ ನಾಪತ್ತೆ ಆಗಿದ್ದನು. ಆದರೆ ಈ ಬಗ್ಗೆ ಹುಡುಕಾಟ ನಡೆಸಿದ್ದ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರಿನಲ್ಲಿ ತಾತಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

author-image
Bhimappa
RCR_TATAPPA
Advertisment

ರಾಯಚೂರು: ಗಂಡನನ್ನ ಕೃಷ್ಣಾ ನದಿಗೆ ತಳ್ಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಆರೋಪಿ ತಾತಪ್ಪನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಅಪ್ರಾಪ್ತೆಯನ್ನು ವಿವಾಹವಾಗಿದ್ದ ಹಿನ್ನೆಲೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯಿದೆ ಅಡಿ ಪ್ರಕರಣದಲ್ಲಿ ತಾತಪ್ಪ ಸಿಲುಕಿದ್ದನು. ಇದರ ಜೊತೆಗೆ 10 ಮಂದಿ ವಿರುದ್ಧವೂ ಇದೇ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲು ಆಗುತ್ತಿದ್ದಂತೆ ತಾತಪ್ಪ ನಾಪತ್ತೆ ಆಗಿದ್ದನು. ಆದರೆ ಈ ಬಗ್ಗೆ ಹುಡುಕಾಟ ನಡೆಸಿದ್ದ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರಿನಲ್ಲಿ ತಾತಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.  

ಬಾಲ್ಯ ವಿವಾಹ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಭೇಟಿ ನೀಡಿದ್ದರು. ಈ ವೇಳೆ ಶಶಿಧರ್ ಅವರು ಅಸಮಾಧಾನ ಹೊರಹಾಕಿದ್ದರು. ಸದ್ಯ ಆರೋಪಿ ತಾತಪ್ಪನನ್ನು ರಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ನಂತರ ರಾಯಚೂರಿನ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.  

ಇದನ್ನೂ ಓದಿ:Miss You ಬೆಂಗಳೂರು; ಸಿಲಿಕಾನ್ ಸಿಟಿ ಬಿಟ್ಟು ಹೋಗುವಾಗ ಗಳ ಗಳನೇ ಅತ್ತ ಫಾರಿನ್ ಯುವತಿ

RCR_TATAPPA_NEW

ರಾಯಚೂರು ಜಿಲ್ಲೆಯ ಗುರ್ಜಾಪುರ ಬ್ಯಾರೇಜ್ ಬಳಿ ಫೋಟೋ ತೆಗೆಯುವ ನೆಪದಲ್ಲಿ ತನ್ನ ಪತಿಯನ್ನು, ಪತ್ನಿ ಕೃಷ್ಣಾನದಿಗೆ ತಳ್ಳಿದ ಆರೋಪವಿದು. ಇದು ಆದ ಮೇಲೆ ಅಪ್ರಾಪ್ತೆಯನ್ನು ವಿವಾಹವಾಗಿದ್ದರು ಎನ್ನುವ ಮಾಹಿತಿ ಆಧಾರದ ಮೇಲೆ ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿ ಜುಲೈ 21 ರಂದು ಪ್ರಕರಣ ದಾಖಲು ಮಾಡಲಾಗಿತ್ತು.  ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿತ್ತು. ಇದರಲ್ಲಿ ತಾತಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ 10 ಮಂದಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pocso case
Advertisment