/newsfirstlive-kannada/media/media_files/2025/08/01/chandrashekhar_siddi-2025-08-01-21-45-53.jpg)
ಉತ್ತರ ಕನ್ನಡ: ಕಾಮಿಡಿ ಕಿಲಾಡಿ ಶೋ ಖ್ಯಾತಿಯ ನಟರೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ ಚಿಮ್ಮಳ್ಳಿ ಗ್ರಾಮದ ಅರಣ್ಯದಲ್ಲಿ ನಡೆದಿದೆ.
ಕಾಮಿಡಿ ಕಿಲಾಡಿ ಶೋ ನಟ ಚಂದ್ರಶೇಖರ ಸಿದ್ದಿ (31) ಜೀವ ಕಳೆದುಕೊಂಡವರು. ಮಾನಸಿಕ ಕಿನ್ನತೆಯಿಂದ ಜೀವ ಕಳೆದುಕೊಂಡಿದ್ದಾನೆ. ತಾಲೂಕಿನ ಕಟ್ಟಿಗೆ ಗ್ರಾಮಕ್ಕೆ ಪತ್ನಿಯೊಂದಿಗೆ ಕೆಲಸಕ್ಕೆ ಎಂದು ಚಂದ್ರಶೇಖರ ಸಿದ್ದಿ ಹೋಗಿದ್ದರು. ಶನಿವಾರ ಮಧ್ಯಾಹ್ನ 2 ಗಂಟೆಗೆ ತನ್ನ ಮಗನೊಂದಿಗೆ ಶಾಲೆ ಬಿಟ್ಟು ಮನೆಗೆ ಬಂದಿದ್ದರು. ಬಳಿಕ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೋದ ಚಂದ್ರಶೇಖರ ಸಿದ್ದಿ ಮರಳಿ ಬಂದಿರಲಿಲ್ಲ.
ಇದನ್ನೂ ಓದಿ:71st National Film Awards; ಅತ್ಯುತ್ತಮ ನಟ, ನಟಿ ಯಾರು.. ಕನ್ನಡದ ಬೆಸ್ಟ್ ಮೂವಿ ಯಾವುದು?
ಹೀಗಾಗಿ ಗಾಬರಿಯಿಂದಲೇ ಹೆಂಡತಿ ಹುಡುಕಾಡಿದಾಗ ಮರವೊಂದಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಚಂದ್ರಶೇಖರ ಸಿದ್ದಿ ಕಳೆದ ಎರಡ್ಮೂರು ತಿಂಗಳಿನಿಂದ ಮಾನಸಿಕ ಕಿನ್ನತೆಯಿಂದ ಬಳಲುತ್ತಿದ್ದನು. ಕಾರವಾರದ ಕ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನು ಚಂದ್ರಶೇಖರ ಸಿದ್ದಿ ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಅವರ ತಾಯಿ ದೂರು ದಾಖಲು ಮಾಡಿದ್ದಾರೆ.
ಚಂದ್ರಶೇಖರ ಸಿದ್ದಿ ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಶೋನಲ್ಲಿ ಕೆಲ ಕಾಲ ಕಾಣಿಸಿಕೊಂಡಿದ್ದರು. ನಿನಾಸಂನಲ್ಲಿ ನಾಟಕ ತರಬೇತಿ ಪಡೆದಿದ್ದ ಈತ ಕನ್ನಡದ ಕೆಲವು ಧಾರವಾಹಿಗಳಲ್ಲಿಯೂ ಅಭಿನಯ ಮಾಡಿದ್ದರು. ಬಳಿಕ ಅವಕಾಶಗಳು ಸಿಗದಿದ್ದರಿಂದ ಊರಿನ ಕಡೆ ಬಂದು ಹೆಂಡತಿ ಜೊತೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ