/newsfirstlive-kannada/media/media_files/2025/10/23/sudeep-2025-10-23-18-22-31.jpg)
sudeep
ಸ್ಯಾಂಡಲ್‌ವುಡ್‌ನ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು 50 ವರ್ಷ ಸಂಭ್ರಮದಲ್ಲಿ ಕಿಚ್ಚ ಸುದೀಪ್​ ಭಾಗಿಯಾಗಿದ್ದರು. ರಾಜೇಂದ್ರ ಸಿಂಗ್ ಬಾಬು ಸಿನಿಮಾ ನಿರ್ದೇಶಕರಾಗಿ 50 ವರ್ಷ ಪೂರ್ಣಗೊಳಿಸಿದ ಸಂಭ್ರಮದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..
ಕಾರ್ಯಕ್ರಮದಲ್ಲಿ ಎಲ್ಲವನ್ನೂ ಬಹಳ ಸುಲಭವಾಗಿ ಮರೆಯುವಂತಹ ಕಾಲ ಇದು ಎಂದು ಅಭಿನಯ ಚಕ್ರವರ್ತಿ ಸುದೀಪ್ ಹೇಳಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ..
ಸ್ಯಾಂಡಲ್‌ವುಡ್‌ನ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಒಳ್ಳೆ ಸಿನಿಮಾಗಳನ್ನೆ ಕೊಟ್ಟಿದ್ದಾರೆ. ಅಂಬರೀಶ್ ಅಭಿನಯದ ಅಂತ ಇವರ ಚಿತ್ರ ಜೀವನದ ಅದ್ಭುತ ಚಿತ್ರವೇ ಆಗಿದೆ. ಅತ್ಯುತ್ತಮ ಅನಿಸೋ ಚಿತ್ರಗಳನ್ನ ಕೊಟ್ಟಿರೋ ರಾಜೇಂದ್ರ ಸಿಂಗ್ ಬಾಬು ಅವರು ಡೈರೆಕ್ಟರ್ ಆಗಿ ಈಗ ಐವತ್ತು ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ಚಲನ ಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಕಲಾವಿದರ ಸಂಘದಲ್ಲಿಯೇ ನಡೆದ ಕಾರ್ಯಕ್ರಮದ ಮೂಲಕ ಬಾಬು 50 ವರ್ಷ ಸಂಭ್ರಮಿಸಿಲಾಯಿತ್ತು.
ಎಲ್ಲದನ್ನೂ ಸುಲಭಕ್ಕೆ ಮರೆಯೋ ಕಾಲವಿದು..!
ಆ ವೇಳೆ ಕಿಚ್ಚ ಸುದೀಪ್ ಮಾತನಾಡಿದ್ದು,ಈಗಿನ ಕಾಲ ಎಲ್ಲವನ್ನೂ ಬಹಳ ಸುಲಭವಾಗಿ ಮರೆಯುವಂತಹ ಕಾಲ ಇದು. 2 ಸಿನಿಮಾ ಮಾಡ್ತಿದ್ದಂತೆ 200 ಚಿತ್ರ ಮಾಡಿದವ್ರನ್ನ ಮರೆಯುವ ಕಾಲದಲ್ಲಿ ಇದ್ದೇವೆ. ಅಷ್ಟೇ ಯಾಕೇ ಒಂದು ಕಾರ್ ತಗೊಳ್ತಿದ್ದಂತೆ ಕಾರ್ ಬರೋ ಹಾಗೆ ಮಾಡಿದ ಚಿತ್ರರಂಗವನ್ನೇ ಮರೆತುಬಿಡ್ತಾರೆ.ಅಂತಹದ್ದರಲ್ಲಿ ಈ ವೇದಿಕೆ ಮೇಲೆ ಕೂತುಕೊಳ್ಳುವುದಕ್ಕೆ ಬಹಳ ಹೆಮ್ಮೆಯಾಗುತ್ತೆ. ಯಾಕಂದ್ರೆ, ವೇದಿಕೆಯಲ್ಲಿ ಕೂತಿರುವವರು , ಎದುರುಗಡೆ ಕೂತಿರುವವರು ಯಾರೂ ಕಮ್ಮಿ ಸಾಧಕರಲ್ಲ. ಇಂತಹ ಕಾರ್ಯಕ್ರಮಗಳು ನಡೆದಾಗ ಎಷ್ಟೋ ಸಾವಿರ ಪ್ರಶಸ್ತಿ ಸಮಾರಂಭಗಳಿಗಿಂತ ಇದೇ ಉತ್ತಮ ಅಂತ ಅನಿಸುತ್ತೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಕಿಚ್ಚ ಸುದೀಪ್​ ನೇರ ನುಡಿ ಖಡಕ್​ ಮಾತಿನಿಂದ ಎಲ್ಲರ ಗಮನ ಸೆಳೆಯುವವರು. ಸುದೀಪ್​ ಅವರ ನೇರ ನುಡಿಗೆ ಸಿಕ್ಕಾಪಟ್ಟೆ ಫ್ಯಾನ್ಸ್​​ಗಳನ್ನ ಸಂಪಾದಿಸಿದ್ದಾರೆ..ಆದ್ರೀಗ ರಾಜೇಂದ್ರ ಸಿಂಗ್ ಬಾಬು 50 ವರ್ಷ ಸಂಭ್ರಮದಲ್ಲಿ ಕಿಚ್ಚ 2 ಸಿನಿಮಾ ಮಾಡ್ತಿದ್ದಂತೆ 200 ಚಿತ್ರ ಮಾಡಿದವ್ರನ್ನ ಮರಿಯೋ ಕಾಲ ಅಂತಾ ಯಾರ ಬಗ್ಗೆ? ಯಾಕಾಗಿ ಹೇಳಿದ್ರು ಚರ್ಚೆ ಶುರುವಾಗಿದೆ.
ಇದನ್ನೂ ಓದಿ:ಡ್ರಗ್ಸ್ ಸೇವಿಸಿ ಕಾರ್ ಚಲಾಯಿಸಿ ಅಪಘಾತ: ಎದುರಿಗೆ ಸಿಕ್ಕ ವಾಹನಗಳಿಗೆಲ್ಲಾ ಡಿಕ್ಕಿ, ಮೂವರ ಸಾವು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us