/newsfirstlive-kannada/media/media_files/2025/08/02/bk_singh_sit-2025-08-02-18-15-05.jpg)
ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಕೆಳಗೆ ಇರುವ ಮಹಿಳೆ ಮೇಲೆ ಎಲ್ಲ ರೀತಿಯಿಂದಲೂ ಪ್ರಬಲರಾಗಿದ್ದ ಪ್ರಜ್ವಲ್ ರೇವಣ್ಣ ಅವರು ಅನ್ಯಾಯ ಎಸಗಿದ್ದರು. ಆದ್ರೆ ಇದಕ್ಕೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಎಸ್ಐಟಿ ಮುಖ್ಯಸ್ಥ ಬಿಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸಿಐಡಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಎಸ್ಐಟಿ ಮುಖ್ಯಸ್ಥ ಬಿಜಯ್ ಕುಮಾರ್ ಸಿಂಗ್ ಅವರು ಮಾತನಾಡಿ, ಹಾಸನದಲ್ಲಿ ಪೆನ್ಡ್ರೈವ್ಗಳನ್ನು ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಬಹಳ ಮಹಿಳೆಯರ ಅಶ್ಲೀಲ ವಿಡಿಯೋಗಳು ಇದ್ದವು. ಒಟ್ಟು ಆರು ಕೇಸ್ಗಳು ರಿಜಿಸ್ಟರ್ ಆಗಿದ್ದವು. ಹೀಗಾಗಿ ರಾಜ್ಯ ಸರ್ಕಾರ ಎಸ್ಐಟಿ ಅನ್ನು ರಚನೆ ಮಾಡಿತ್ತು. ಇದರಲ್ಲಿ ನಾನು, ಸೀಮಾ ಹಾಗೂ ಸುಮಾನ್ ಅವರು ಇದ್ದರು ಎಂದು ಹೇಳಿದ್ದಾರೆ.
4 ಜನ ಸಂತ್ರಸ್ತರು ಮುಂದೆ ಬಂದು ದೂರು ದಾಖಲು ಮಾಡಿದ್ದರು. ಇದರಲ್ಲಿ ಒಂದು ಹೊಳೆನರಸೀಪುರ, ಕೆ.ಆರ್ ನಗರ, ಹಾಸನದಲ್ಲಿ ಸೇರಿ ಒಟ್ಟು 6 ಕೇಸ್ಗಳು ನಾವು ತೆಗೆದುಕೊಂಡಿದ್ದೇವು. ಕಳೆದ ವರ್ಷ ಡಿಸೆಂಬರ್ 31 ರಂದು ನಮಗೆ ಪ್ರಕರಣಗಳನ್ನು ಒಪ್ಪಿಸಲಾಗಿತ್ತು. ಈಗ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕಠಿಣ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. ಆಗಸ್ಟ್ 2 ಅಂದರೆ ಇಲ್ಲಿವರೆಗೆ 1 ವರ್ಷ 4 ತಿಂಗಳ ನಂತರ ಕೋರ್ಟ್ ತೀರ್ಪು ಬಂದಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ.. ಸ್ಪೆಷಲ್ ಪ್ರಾಸಿಕ್ಯೂಟರ್ ಬಿ.ಎನ್ ಜಗದೀಶ್ ಹೇಳಿದ್ದು ಏನು?
ಪ್ರಜ್ವಲ್ ರೇವಣ್ಣ ಪರ ವಾದ ಮಾಡಿದವರು ತೀರ್ಪು ಬರದಂತೆ ತಡೆದರು. ಆದರೆ ನ್ಯಾಯಾಲಯದ ತೀರ್ಪು ಈಗ ಬಂದಿದೆ. ಮಹಿಳೆ ಸಮಾಜದಿಂದ, ಆರ್ಥಿಕವಾಗಿ ತುಂಬಾ ಕೆಳಗೆ ಇದ್ದಾರೆ. ಆದರೆ ಪ್ರಜ್ವಲ್ ಅವರು ಎಲ್ಲ ರೀತಿಯಿಂದಲೂ ಪ್ರಬಲವಾಗಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲರಾಗಿದ್ದು ಮಹಿಳೆ ಮೇಲೆ ಕೃತ್ಯ ಎಸಗಿದ್ದರು. ಇನ್ನು ಈ ಪ್ರಕರಣದಲ್ಲಿ ಕೊನೆವರೆಗೂ ನಮ್ಮ ಜೊತೆ ನಿಂತು ಶಿಕ್ಷೆ ನೀಡುವವರೆಗೆ ಮಹಿಳೆ ಇದ್ದರು. ನ್ಯಾಯಾಲಯದಲ್ಲಿ ನಮಗೆ ವಾದ ಮಾಡಲು ಮಹಿಳೆ ಸಹಕಾರ ನೀಡಿದರು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ