/newsfirstlive-kannada/media/media_files/2025/08/03/lionel_messi-2025-08-03-15-54-39.jpg)
ಇದು ಕ್ರೀಡಾಲೋಕದ ಅತಿದೊಡ್ಡ ಸಮಾಗಮ. ಹಿಂದೆಂದೂ ಆಗಿಲ್ಲ, ಪ್ರಯತ್ನವೂ ನಡೆದಿಲ್ಲ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ಗಳು- ಫುಟ್ಬಾಲ್ ಜಗತ್ತಿನ ಮಾಂತ್ರಿಕ ಲಿಯೋನಲ್ ಮೆಸ್ಸಿ ಸಮಾಗಮವಾಗ್ತಿದೆ. ಇದ್ಯಾವುದೋ ಇವೆಂಟ್ ಅನ್ಕೋಬೇಡಿ, ಐಕಾನಿಕ್ ವಾಂಖೆಡೆ ಅಂಗಳದಲ್ಲಿ ಕ್ರಿಕೆಟ್ ಕದನದಲ್ಲಿ ದಿಗ್ಗಜರ ಮುಖಾಮುಖಿ ಆಗ್ತಿದ್ದಾರೆ. ಏನಿದು ಕಥೆ ಅಂತೀರಾ?.
ಕ್ರಿಕೆಟ್ & ಫುಟ್ಬಾಲ್ ವಿಶ್ವ ಕ್ರೀಡಾಲೋಕವನ್ನ ಆಳ್ತಿರೋ ಎರಡು ಬಿಗ್ಗೆಸ್ಟ್ ಸ್ಟೋರ್ಟ್ಸ್. ಭಾರತದಲ್ಲಂತೂ ಕ್ರಿಕೆಟ್ ಅನ್ನೋದು ಒಂದು ಧರ್ಮ, ಕ್ರಿಕೆಟಿಗರು ಅಂದ್ರೆ ದೇವರಂತೆ ಆರಾಧನೆ ನಡೀತಿದೆ. ವಿಶ್ವದಲ್ಲಿ ಫುಟ್ಬಾಲ್ ಎಷ್ಟು ಫೇಮಸ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಭಾರತದಲ್ಲೂ ಅಷ್ಟೇ ಫುಟ್ಬಾಲ್ಗೆ ಕ್ರೇಜ್ ಹೆಚ್ಚಾಗ್ತಿದೆ. ಈ ಕ್ರಿಕೆಟ್ ಮತ್ತು ಫುಟ್ಬಾಲ್ ಫ್ಯಾನ್ಸ್ಗೆ ಗುಡ್ನ್ಯೂಸ್ ಹೊರಬಿದ್ದಿದೆ.
ಲಿಯೋನಲ್ ಮೆಸ್ಸಿ VS ಸಚಿನ್, ಧೋನಿ, ಕೊಹ್ಲಿ, ರೋಹಿತ್.!
ಐಕಾನಿಕ್ ವಾಂಖೆಡೆ ಮೈದಾನದಲ್ಲಿ ದಿಗ್ಗಜರ ಸಮಾಗಮವಾಗಲಿದೆ. ಫುಟ್ಬಾಲ್ ಮಾಂತ್ರಿಕ, ಅರ್ಜೆಂಟೀನಾದ ಆಟಗಾರ, ದಿಗ್ಗಜ ಲಿಯೋನಲ್ ಮೆಸ್ಸಿ ಹಾಗೂ ಟೀಮ್ ಇಂಡಿಯಾ ಆಟಗಾರರ ಸಮಾಗಮಕ್ಕೆ ವೇದಿಕೆ ಸಜ್ಜಾಗಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಕಿಂಗ್ ವಿರಾಟ್ ಕೊಹ್ಲಿ, ಕೂಲ್ ಕ್ಯಾಪ್ಟನ್ MS ಧೋನಿ, ಹಿಟ್ಮ್ಯಾನ್ ರೋಹಿತ್ ಶರ್ಮಾರನ್ನ ಮೆಸ್ಸಿ ಮೀಟ್ ಮಾಡಲಿದ್ದಾರೆ. ಅಂದ್ಹಾಗೆ ಇದೊಂದು ಮೀಟ್ AND ಗ್ರೀಟ್ ಇವೆಂಟ್ ಮಾತ್ರವಲ್ಲ, ಇವ್ರ ನಡುವೆ ಆನ್ಫೀಲ್ಡ್ ಕಾದಾಟವೂ ನಡೆಯಲಿದೆ.
ವಾಂಖೆಡೆಯಲ್ಲಿ ಫುಟ್ಬಾಲ್ ಸ್ಟಾರ್ VS ಕ್ರಿಕೆಟ್ ಸ್ಟಾರ್ಸ್.!
ವಾಂಖೆಡೆ ಮೈದಾನದಲ್ಲಿ ಫುಟ್ಬಾಲ್ ತಾರೆ ಲಿಯೋನಲ್ ಮೆಸ್ಸಿ ಹಾಗೂ ಟೀಮ್ ಇಂಡಿಯಾ ಸೂಪರ್ ಸ್ಟಾರ್ಗಳ ನಡುವೆ ಕ್ರಿಕೆಟ್ ಬ್ಯಾಟಲ್ ನಡೆಯಲಿದೆ. 7 ಸೈಡ್ ಕ್ರಿಕೆಟ್ ಮ್ಯಾಚ್ಗೆ ಪ್ಲಾನ್ ರೂಪಿಸಲಾಗಿದೆ. ಸಚಿನ್, ಧೋನಿ, ಕೊಹ್ಲಿ, ರೋಹಿತ್ ಸೇರಿದಂತೆ ಟೀಮ್ ಇಂಡಿಯಾ ಹಲವು ಅಟಗಾರರ ಜೊತೆಗೆ ಮೆಸ್ಸಿ ವಾಂಖೆಡೆ ಮೈದಾನದಲ್ಲಿ ಕ್ರಿಕೆಟ್ ಆಡಲಿದ್ದಾರಂತೆ. ಈ ಸಮಾಗಮ ಕಣ್ತುಂಬಿಕೊಳ್ಳಲು ಫ್ಯಾನ್ಸ್ಗೂ ಅವಕಾಶವಿದೆ.
ಮುಂಬೈ ಕ್ರಿಕೆಟ್ ಅಸೋಸಿಯೇಶನ್ಗೆ ಆಯೋಜಕರಿಂದ ಮನವಿ
ಲಿಯೋನಲ್ ಮೆಸ್ಸಿ ಡಿಸೆಂಬರ್ನಲ್ಲಿ ಭಾರತಕ್ಕೆ ಬರಲು ಸಜ್ಜಾಗಿದ್ದಾರೆ. ಮೆಸ್ಸಿಯ ಭಾರತ ಪ್ರವಾಸವನ್ನ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದು ನಿಭಾಯಿಸ್ತಿದೆ. ಈ ಕಂಪನಿಯಿಂದ ಸದ್ಯ ಮುಂಬೈ ಕ್ರಿಕೆಟ್ ಅಸೋಸಿಯೇಷನ್ಗೆ ಮನವಿ ಬಂದಿದೆಯಂತೆ. ಡಿಸೆಂಬರ್ 14ರಂದು ಸ್ಟೇಡಿಯಂ ಬಿಟ್ಟುಕೊಡಿ ಎಂದು ಕಂಪನಿ ಮನವಿ ಮಾಡಿದೆಯಂತೆ.
ಮೆಸ್ಸಿ ವಾಂಖೆಡೆ ಸ್ಟೇಡಿಯಂಗೆ ಮೆಸ್ಸಿ
ಸ್ಪೇಡಿಯಂಗಾಗಿ ಆಯೋಜಕರಿಂದ ಮನವಿ ಬಂದಿದೆ. ಡಿಸೆಂಬರ್ 14ರಂದು ಮೆಸ್ಸಿ ವಾಂಖೆಡೆ ಸ್ಟೇಡಿಯಂಗೆ ಬರಲಿದ್ದಾರೆ. ಭಾರತದ ಮಾಜಿ ಹಾಗೂ ಹಾಲಿ ಆಟಗಾರರೊಂದಿಗೆ ಕ್ರಿಕೆಟ್ ಪಂದ್ಯವನ್ನಾಡಲಿದ್ದಾರೆ. ಆಯೋಜಕರು ಎಲ್ಲವೂ ಅಂತ್ಯವಾದ ಬಳಿಕ ಅಂತಿಮ ವೇಳಾಪಟ್ಟಿಯೊಂದಿಗೆ ಬಂದು ಭೇಟಿ ಮಾಡಲಿದ್ದಾರೆ.
MCA ಅಧಿಕಾರಿ
ಇದನ್ನೂ ಓದಿ:ಪ್ರಜ್ವಲ್ ರೇವಣ್ಣಗೆ ಶಿಕ್ಷೆ; BSY, ಅಶೋಕ್, ಸಿಟಿ ರವಿ ಯಾಕೆ ಮಾತಾಡ್ತಿಲ್ಲ?- ಡಿ.ಕೆ ಶಿವಕುಮಾರ್
14 ವರ್ಷಗಳ ಬಳಿಕ ಭಾರತಕ್ಕೆ ಫುಟ್ಬಾಲ್ ತಾರೆ.!
ಡಿಸೆಂಬರ್ 13ರಿಂದ 15 ಅಂದ್ರೆ, 3 ದಿನಗಳ ಕಾಲ ಮೆಸ್ಸಿ ಭಾರತದಲ್ಲಿ ಇರಲಿದ್ದಾರೆ. ಈ 3 ದಿನಗಳ ಪ್ರವಾಸದಲ್ಲಿ ಮುಂಬೈ, ಡೆಲ್ಲಿ ಹಾಗೂ ಕೊಲ್ಕತ್ತಾಗೆ ಭೇಟಿ ನೀಡಲಿದ್ದಾರೆ. ವಿವಿಧ ಇವೆಂಟ್ಗಳಲ್ಲಿ ಭಾಗಿಯಾಗಲಿದ್ದಾರೆ. ಅಂದ್ಹಾಗೆ, ಭಾರತಕ್ಕೆ ಮೆಸ್ಸಿ ಬರ್ತಾ ಇರೋದು ಇದು 2ನೇ ಬಾರಿ. 14 ವರ್ಷಗಳ ಹಿಂದೆ ಮೆಸ್ಸಿ ಭಾರತಕ್ಕೆ ಬಂದಿದ್ರು. 2011ರಲ್ಲಿ ಕೊಲ್ಕತ್ತಾಗೆ ಭೇಟಿ ನೀಡಿದ್ದ ಮೆಸ್ಸಿ, ಸಾಲ್ಟ್ಲೇಕ್ ಸ್ಟೇಡಿಯಂನಲ್ಲಿ ಫ್ರೆಂಡ್ಲಿ ಪಂದ್ಯವೊಂದನ್ನ ಆಡಿದ್ರು.
ಮೆಸ್ಸಿ ಹಾಗೂ ಟೀಮ್ ಇಂಡಿಯಾ ಕ್ರಿಕೆಟರ್ಸ್ ಮುಖಾಮುಖಿ ಕ್ರಿಕೆಟ್ ಫ್ಯಾನ್ಸ್ ಹಾಗೂ ಫುಟ್ಬಾಲ್ ಫ್ಯಾನ್ಸ್ಗಂತೂ ಸ್ಪೆಷಲ್ ಟ್ರೀಟ್ ಸಿಗಲಿದೆ. ಕ್ರಿಕೆಟ್ ಲೋಕದ ಸ್ಟಾರ್ಸ್ VS ಫುಟ್ಬಾಲ್ ದಿಗ್ಗಜನ ನಡುವಿನ ಬ್ಯಾಟಲ್ ಏಂಜಾಯ್ ಮಾಡೋಕೆ ನೀವೂ ರೆಡಿಯಾಗಿ.!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ