/newsfirstlive-kannada/media/media_files/2025/09/02/lokah-cinema-apology-2025-09-02-16-21-07.jpg)
ಕನ್ನಡಿಗರ ಕ್ಷಮೆ ಕೇಳಿದ ಲೋಕ ಸಿನಿಮಾ ತಂಡದ ಪೋಸ್ಟ್
ಮಲಯಾಳಂ ಸಿನಿಮಾ ಲೋಕಃ ಚಿತ್ರತಂಡವು ಕೊನೆಗೂ ಕನ್ನಡಿಗರು, ಬೆಂಗಳೂರು ಜನರ ಕ್ಷಮೆ ಕೇಳಿದೆ.
ಕನ್ನಡಿಗರ ಭಾವನೆಗಳಿಗೆ ನೋವಾಗಿದೆ. ಅದಕ್ಕೆ ಕ್ಷಮೆ ಕೇಳ್ತೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರು ಹೆಣ್ಣು ಮಕ್ಕಳನ್ನು ನಿಂದಿಸಿದ ಡೈಲಾಗ್ ಸಿನಿಮಾದಲ್ಲಿತ್ತು ಆ ಡೈಲಾಗ್ ಅನ್ನು ಎಡಿಟ್ ಮಾಡುತ್ತೇವೆ, ಇಲ್ಲವೇ ತೆಗೆಯುತ್ತೇವೆ ಎಂದು ಲೋಕಃ ಸಿನಿಮಾ ತಂಡ ಹೇಳಿದೆ.
ನಮ್ಮ ಸಿನಿಮಾದ ಒಂದು ಡೈಲಾಗ್ ಉದ್ದೇಶಪೂರ್ವಕವಲ್ಲದೇ ಕರ್ನಾಟಕದ ಜನರ ಭಾವನೆಗೆ ಧಕ್ಕೆ ತಂದಿದೆ. ವೇಫೆರಾರ್ ಫಿಲಂಸ್ ಗೆ ಜನರು ಎಲ್ಲಕ್ಕಿಂತ ಮುಖ್ಯ. ಕಣ್ಣು ತಪ್ಪಿನಿಂದ ಆಗಿರುವ ಈ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಈ ತಪ್ಪು ಉದ್ದೇಶಪೂರ್ವಕವಾಗಿ ಆಗಿಲ್ಲ ಎಂದು ಭರವಸೆ ನೀಡುತ್ತೇವೆ. ಪ್ರಶ್ನಾರ್ಹವಾದ ಡೈಲಾಗ್ ಅನ್ನು ತೆಗೆದುಹಾಕುತ್ತೇವೆ ಇಲ್ಲವೇ ಎಡಿಟ್ ಮಾಡುತ್ತೇವೆ
ನಾವು ಪ್ರಾಮಾಣಿಕವಾಗಿ ನೋವಾಗಿರುವುದಕ್ಕೆ ಕ್ಷಮೆ ಕೇಳುತ್ತೇವೆ. ನಮ್ಮ ಕ್ಷಮಾಪಣೆಯನ್ನು ಸ್ವೀಕರಿಸಿ ವಿನಮ್ರವಾಗಿ ಕೋರುತ್ತೇವೆ ಎಂದು ಚಿತ್ರತಂಡ ತನ್ನ ಪೋಸ್ಟ್ ನಲ್ಲಿ ಹೇಳಿದೆ.
ಲೋಕಃ ಸಿನಿಮಾವನ್ನು ಕರ್ನಾಟಕದಲ್ಲಿ ನಟ, ನಿರ್ಮಾಪಕ ರಾಜ್ ಬಿ.ಶೆಟ್ಟಿ ವಿತರಕರಾಗಿ ಬಿಡುಗಡೆ ಮಾಡಿದ್ದರು. ರಾಜ್ ಬಿ ಶೆಟ್ಟಿ ಅವರು ಕೂಡ ಈ ಆಕ್ಷೇಪಾರ್ಹ ಡೈಲಾಗ್ ಬಗ್ಗೆ ಕನ್ನಡಿಗರ ಆಕ್ರೋಶದ ಬಗ್ಗೆ ಚಿತ್ರತಂಡದ ಗಮನಕ್ಕೆ ತಂದಿದ್ದರು. ಆದಾದ ಬಳಿಕ ಚಿತ್ರತಂಡ ಆಕ್ಷೇಪಾರ್ಹ ಡೈಲಾಗ್ ಅನ್ನು ತೆಗೆದು ಹಾಕಲು ಹಾಗೂ ಕ್ಷಮೆ ಕೇಳಲು ಒಪ್ಪಿಕೊಂಡಿತ್ತು.
ಈಗ ಅಧಿಕೃತವಾಗಿ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಆಕ್ಷೇಪಾರ್ಹ ಡೈಲಾಗ್ ಅನ್ನು ತೆಗೆದು ಹಾಕುತ್ತೇವೆ ಎಂದು ಚಿತ್ರತಂಡ ಹೇಳಿದೆ. ಜೊತೆಗೆ ಕ್ಷಮೆಯನ್ನು ಕೇಳಿದೆ. ಈ ಮೂಲಕ ವಿವಾದವನ್ನು ಅಂತ್ಯವಾಗಿಸಿದೆ.
ಇದನ್ನು ಓದಿ: ಬೆಂಗಳೂರು ಹುಡುಗಿಯರು ಡಗಾ* ಗಳು ಎಂದು ಮಲಯಾಳಂ ಸಿನಿಮಾ ಡೈಲಾಗ್‌ಗೆ ವಿರೋಧ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.