Advertisment

ಭಾರೀ ಕೋಪ, ದ್ವೇಷ; 29 ಚಮಚ, 19 ಟೂತ್ ಬ್ರಶ್, 2 ಪೆನ್ನು ನುಂಗಿದ ಭೂಪ..!

ಹೌದು.. ಇಲ್ಲೊಬ್ಬ ಆಸಾಮಿ ಕುಟುಂಬದವರ ಮೇಲಿನ ಕೋಪಕ್ಕೆ ಹತಾಶೆಯಿಂದ ಸಿಕ್ಕ ಸಿಕ್ಕ ವಸ್ತುಗಳನ್ನು ನುಂಗಿದ್ದಾನೆ. ನಂತರ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಪರಿಣಾಮ ಆಸ್ಪತೆಗೆ ದಾಖಲಿಸಿ, ಆಪರೇಷನ್ ಮೂಲಕ ಆ ವಸ್ತುಗಳನ್ನೆಲ್ಲ ವೈದ್ಯರು ಹೊರತೆಗೆದಿದ್ದಾರೆ.

author-image
Bhimappa
up photo
Advertisment

ಮೀರತ್: ಉತ್ತರ ಪ್ರದೇಶದ ಹಾಪುರದ ಆಸ್ಪತ್ರೆಯಲ್ಲಿ 40 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 29 ಚಮಚ, 19 ಟೂತ್ ಬ್ರಶ್ ಹಾಗು 2 ಪೆನ್ನುಗಳನ್ನು ತೆಗೆದು ವ್ಯೆದ್ಯರು ದಿಗ್ಬ್ರಮೆಗೊಂಡಿದ್ದಾರೆ. 

Advertisment

ಬುಲಂದ್​ಶಹರ್ ನಿವಾಸಿಯಾದ ಈ ವ್ಯಕ್ತಿಯನ್ನು ಗಾಜಿಯಾಬಾದ್​ನ ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸಲಾಗಿತ್ತು. ತೀವ್ರ ಹೊಟ್ಟೆ ನೋವು ಕಂಡುಬಂದ ಹಿನ್ನಲೆಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಲಾಯಿತು. ಈ ಸ್ಕ್ಯಾನ್ನಿಂಗ್​​ನಲ್ಲಿ ವ್ಯಕ್ತಿಯ ಹೊಟ್ಟೆಯಲ್ಲಿ ಮೆಟಲ್ ವಸ್ತುಗಳು ಇರುವುದು ಗೊತ್ತಾಗಿದೆ. 
 
ನಂತರ ಶಸ್ತ್ರ ಚಿಕಿತ್ಸೆಯ ಮೂಲಕ ಸುಮಾರು 29 ಚಮಚ, 19 ಟೂತ್ ಬ್ರಶ್ ಹಾಗು 2 ಪೆನ್ನುಗಳನ್ನು ವ್ಯೆದ್ಯರು ಹೊರತೆಗೆದಿದ್ದಾರೆ. ಗುರುವಾರ ಆಸ್ಪತ್ರೆಯಿಂದ ವ್ಯಕ್ತಿಯನ್ನು ಡಿಸ್ಚಾರ್ಜ್ ಕೂಡ ಮಾಡಲಾಗಿದೆ. ‘ಕುಟುಂಬದವರು ನನ್ನನ್ನು ವ್ಯಸನ ಮುಕ್ತ ಕೇಂದ್ರಕ್ಕೆ ತಂದು ನನ್ನ ಬಿಟ್ಟು ಹೋದರು, ಅಲ್ಲಿ ನನಗೆ ಸರಿಯಾಗಿ ಊಟ ಕೊಡುತ್ತಿರಲಿಲ್ಲ, ಹಾಗಾಗಿ ಕೋಪಗೊಂಡು ಈ ವಸ್ತುಗಳನ್ನು ನುಂಗಿದ್ದೇನೆ’ ಎಂದು ಶಸ್ತ್ರ ಚಿಕಿತ್ಸೆಗೆ ಒಳಗಾದ ವ್ಯಕ್ತಿ ಹೇಳಿದ್ದಾರೆ.

ಇದನ್ನೂ ಓದಿ: ತನ್ನ ಕ್ಲಾಸ್​ಮೇಟ್​ ತಾಯಿಯನ್ನ ಮದುವೆಯಾದ ವಿದ್ಯಾರ್ಥಿ.. ಈ ಇಬ್ಬರ ನಡುವೆ ಲವ್ ಹೇಗಾಯಿತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ....

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
metal items found in stomach Uttar Pradesh
Advertisment
Advertisment
Advertisment