/newsfirstlive-kannada/media/media_files/2025/08/01/mysore_zoo-2025-08-01-17-40-21.jpg)
ಮೈಸೂರು: ರಾಜ್ಯದಲ್ಲಿ ಈಗಾಗಲೇ ಎಲ್ಲ ದರಗಳನ್ನು ಹೆಚ್ಚಳ ಮಾಡಲಾಗಿದೆ. ಇದರಿಂದ ಜನರು ಕೂಡ ಸಾಕಷ್ಟು ಹೊರೆಯಾಗಿದೆ. ಇದರ ಬೆನ್ನಲ್ಲೇ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದ ಪ್ರವೇಶ ದರ ಕೂಡ ಏರಿಕೆ ಮಾಡಲಾಗಿದೆ. ಇಂದಿನಿಂದಲೇ ಹೊಸ ದರ ಅನ್ವಯವಾಗಿದೆ.
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರವೇಶ ದರವನ್ನು ಮೃಗಾಲಯದ ಆಡಳಿತ ಮಂಡಳಿ ಇಂದಿನಿಂದ ಹೆಚ್ಚಳ ಮಾಡಿದೆ. ಟಿಕೆಟ್ ದರವನ್ನು ಶೇ.20ರಷ್ಟು ಏರಿಕೆ ಮಾಡಿದ್ದು 4 ವರ್ಷಗಳ ನಂತರ ದರ ಪರಿಷ್ಕರಣೆ ಮಾಡಲಾಗಿದೆ. ವಯಸ್ಕರಿಗೆ 100 ರೂಪಾಯಿ ಇದ್ದ ಟಿಕೆಟ್ ದರ 120 ರೂಪಾಯಿಗೆ ಏರಿಕೆ ಆಗಿದೆ. 5 ರಿಂದ 12 ವಯಸ್ಸಿನ ಮಕ್ಕಳಿಗೆ 50 ರೂಪಾಯಿ ಇದ್ದ ಟಿಕೆಟ್ ದರವನ್ನ 60 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಮೃಗಾಲಯ, ಕಾರಂಜಿ ಕಾಂಬೋ ವಯಸ್ಕರಿಗೆ 150 ರೂಪಾಯಿಗೆ ಹೆಚ್ಚಳ ಮಾಡಲಾಗಿದ್ದು ಮಕ್ಕಳಿಗೆ 80 ರೂಪಾಯಿ ದರ ನಿಗದಿ ಮಾಡಿದೆ. ಒಂದು ದಿನಕ್ಕೆ ಮೃಗಾಲಯದ ನಿರ್ವಹಣೆಗೆ 9 ಲಕ್ಷ ರೂಪಾಯಿ ಖರ್ಚು ಆಗುತ್ತಿದೆ. ಮೃಗಾಲಯದ ಪ್ರಾಣಿ-ಪಕ್ಷಿಗಳ ಖರ್ಚು ವೆಚ್ಚ ತುಟ್ಟಿಯಾದ ಹಿನ್ನೆಲೆಯಲ್ಲಿ 4 ವರ್ಷಗಳ ಬಳಿಕ ಪ್ರವೇಶ ದರದಲ್ಲಿ ಏರಿಸಲಾಗಿದೆ.
/filters:format(webp)/newsfirstlive-kannada/media/media_files/2025/08/01/mysore_zoo_1-2025-08-01-17-40-21.jpg)
ಇತ್ತೀಚೆಗೆ ವಿದೇಶಗಳಿಂದ ಗೊರಿಲ್ಲಾ, ಹಂಟರ್ ಚೀತಾ, ಜಾಗ್ವಾರ್, ಕಪುಚ್ಚಿನ್ ಕೋತಿಗಳು ಮೃಗಾಲಯಕ್ಕೆ ಆಗಮಿಸಿವೆ. ಪ್ರಾಣಿವಿನಿಮಯ ಯೋಜನೆಯಡಿ ಚಾಮರಾಜೇಂದ್ರ ಮೃಗಾಲಯಕ್ಕೆ ಈ ಪ್ರಾಣಿಗಳು ಎಂಟ್ರಿಕೊಟ್ಟಿವೆ. ಪ್ರಾಣಿಗಳನ್ನು ಸಾಕುವ ವೆಚ್ಚ ದುಬಾರಿಯಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ದರ ಏರಿಕೆ ಮಾಡಲಾಗುತ್ತಿದೆ. ಪ್ರವಾಸಿಗರು ದರ ಏರಿಕೆಗೆ ಸಹಕರಿಸಬೇಕು ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಎನ್ ರಂಗಸ್ವಾಮಿ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us