/newsfirstlive-kannada/media/media_files/2025/08/03/dileep-r-shetty-2025-08-03-17-44-14.jpg)
ನೀನಾದೆ ನಾ ಜೋಡಿ ವಿಕ್ರಮ್​ ವೇದಾ ವೀಕ್ಷಕರ ನೆಚ್ಚಿನ ಜೋಡಿಗಳೊಂದು. ಇವರ ಜನಪ್ರಿಯತೆ ಬಗ್ಗೆ ಬಿಡಿಸಿ ಹೇಳ್ಬೇಕಿಲ್ಲ. ವಿಕ್ರಮ್ ಪಾತ್ರದಲ್ಲಿ ದಿಲೀಪ್​ ಶೆಟ್ಟಿ, ವೇದಾ ಪಾತ್ರದಲ್ಲಿ ಖುಷಿ ಶಿವು ನಟಿಸಿದ್ರು. ಈ ಜೋಡಿ ಸೀರಿಯಲ್​ನಲ್ಲಿ ಅಷ್ಟೇ ಅಲ್ಲ ರಿಯಲ್​ನಲ್ಲೂ ಸಖತ್​ ಕ್ಲೂಸ್​.
ಇದನ್ನೂ ಓದಿ: ಅವಳಿ ಮಕ್ಕಳಿಗೆ ಅಮ್ಮ ಆಗ್ತಿದ್ದಾರೆ ಭಾವನಾ.. ಒಂಟಿಯಾಗಿ ತಾಯಿ ಆಗುವ ಬಗ್ಗೆ ನಟಿ ಹೇಳಿದ್ದೇನು..?
/newsfirstlive-kannada/media/post_attachments/wp-content/uploads/2025/07/ninadena.jpg)
ನೀನಾದೆ ನಾ ಸೀರಿಯಲ್​ನಲ್ಲಿ ಎರಡು ವಿಭಿನ್ನ ಅಧ್ಯಾಯದಲ್ಲಿ ಗಮನ ಸೇಳಿದಿದ್ರು. ಇತ್ತಿಚೀಗಷ್ಟೇ ಧಾರಾವಾಹಿ ಮುಕ್ತಾಯ ಆಯ್ತು. ಸಡನ್​ ಆಗಿ ಸ್ಟೋರಿನ ಮುಗಿಸಿದಕ್ಕೆ ಫ್ಯಾನ್ಸ್ ಬೇಸರ ವ್ಯಕ್ತಪಡೆಸಿದ್ರು. ನಿವಿಬ್ರೂ ಮತ್ತೆ ಒಟ್ಟಿಗೆ ಆ್ಯಕ್ಟ್​ ಮಾಡಿ. ಮಿಸ್​ ಯೂ ಅಂತಲ್ಲೆ ಅಭಿಮಾನ ವ್ಯಕ್ತಪಡೆಸಿದ್ರು. ಮತ್ತೊಂದಿಷ್ಟು ಜನ ರಿಯಲ್​ ಲೈಫ್​ನಲ್ಲೂ ಪಾರ್ಟನರ್​ ಆದ್ರೇ ಸೂಪರ್​ ಆಗಿ ಇರುತ್ತೆ ಅಂತ ಈಡು ಜೋಡು ಬಗ್ಗೆ ಮಾತ್ನಾಡಿದ್ದರು.
ಇದಲ್ಲ ಸಹಜ ಕೂಡ. ಯಾಕಂದ್ರೇ ಸತತ 2 ವರ್ಷ ಒಟ್ಟಿಗೆ ಕೆಲಸ ಮಾಡಿದ್ದಾರೆ ದಿಲೀಪ್​-ಖುಷಿ. ಸಹಜವಾಗಿಯೇ ಇಬ್ಬರ ಬಾಂಡಿಂಗ್​ ವೀಕ್ಷಕರಿಗೆ ವಿಪರಿತ ಇಷ್ಟ ಆಗಿದೆ. ಇವರ ಸ್ನೇಹ ಕೂಡ ಗಾಢವಾಗಿದೆ. ಖುಷಿ ಮನೆಯಲ್ಲಿ ಯಾವ್ದೇ ಕಾರ್ಯಕ್ರಮ ನಡೆದರೂ ದಿಲೀಪ್​ ಹಾಜರ್​ ಇರ್ತಾರೆ. ಖುಷಿನೂ ಅಷ್ಟೇ ದಿಲೀಪ್​ ಲೈಫ್​ನ ಪ್ರತಿ ಕ್ಷಣದಲ್ಲೂ ಸಾಥ್​ ಕೊಡ್ತಾರೆ.
ಇದನ್ನೂ ಓದಿ: ದೆಹಲಿಯಿಂದ ಮಂಡ್ಯಕ್ಕೆ ಬಂದ ಪಾರಿವಾಳ.. ‘ಅಭಿಮನ್ಯು’ ಸಾಧನೆ ಬಗ್ಗೆ ಹೇಳಿದ ಮಾಲೀಕ ಶ್ರೀಧರ್​
/newsfirstlive-kannada/media/post_attachments/wp-content/uploads/2024/09/new-serial2.jpg)
ದಿಲೀಪ್​ ಗೃಹಪ್ರವೇಶದಲ್ಲಿ ಖುಷಿ ಮ್ಯಾಚಿಂಗ್​ ಮ್ಯಾಚಿಂಗ್ ಬಟ್ಟೆ ಧರಿಸಿದ್ದು ಈ ಜೋಡಿ ಬಗ್ಗೆ ಟಾಕ್​ ಹೆಚ್ಚಾಗೋಕೆ ಕಾರಣ ಆಯ್ತು. ಈ ಜೋಡಿ ಒಟ್ಟಿಗೆ ಸಿನಿಮಾ ಕೂಡ ಮಾಡಲಿದೆ. ಈ ಬಗ್ಗೆ ನಮ್ಮ ಜೊತೆ ದಿಲೀಪ್​ ಶೆಟ್ಟಿ ಅವರೇ ಶೇರ್​ ಮಾಡಿಕೊಂಡಿದ್ರು. ಸದ್ಯ ಅಭಿಮಾನಿಗಳಿಗೆ ಖುಷಿ ನೀಡುವಂತೆ ದಿಲ್​ ಖುಷ್​ ಹೊಸ ರೀಲ್ಸ್ ಹರಿಬಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/04/Dileep-Khushi2.jpg)
ಮದುಮಗನಂತೆ ಪಂಚೆ ಶರ್ಟ್​ ಧರಿಸಿರೋ ದಿಲೀಪ್​, ನೀಲಿ ಬಣ್ಣದ ಸೀರೆಯಲ್ಲಿ ಮಿಂಚುತ್ತಿರೋ ಖುಷಿ. ಇಬ್ಬರ ನಡುವೆ ಸುರಿದ ಪ್ರೀತಿಯ ಮುಂಗಾರು ಮಳೆ. ಪ್ರಕೃತಿಯ ನಡುವೆ ಮಳೆಯಲ್ಲಿ ಮಿಂದೆದ್ದಿದೆ ಜೋಡಿ. ಓಹೋ ದಿಲ್​ಖುಷ್​ ಬ್ಯೂಟಿಫುಲ್​, ಮುದ್ದು ಜೋಡಿ, ಆದಷ್ಟೂ ಬೇಗ ಮದುವೆ ಮಾಡಿಕೊಳ್ಳಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us