/newsfirstlive-kannada/media/media_files/2025/11/11/ongc-new-2-2025-11-11-17-03-12.jpg)
ಕೇಂದ್ರ ಸರ್ಕಾರದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್.. ಇದನ್ನು ONGC ಅಂತಲೂ ಕರೀತಾರೆ. ಈಗ ONGC 2025ನೇ ಸಾಲಿಗೆ 2,623 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ.
ಇನ್ನೂ, ಈ ಹುದ್ದೆಗಳಿಗೆ 10ನೇ ಕ್ಲಾಸಿನಿಂದ ಡಿಗ್ರಿ ಹೋಲ್ಡರ್ಸ್​​ವರೆಗೂ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಲಾಸ್ಟ್​ ಡೇಟ್​ ನವೆಂಬರ್ 17, 2025 ರವರೆಗೆ ವಿಸ್ತರಿಸಲಾಗಿದೆ. ಅರ್ಹತೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿ ಅರ್ಹತೆ ಏನು?
ಅಪ್ಲೈ ಮಾಡಲು ಅಭ್ಯರ್ಥಿಗಳು 10ನೇ ತರಗತಿ, ಐಟಿಐ, ಡಿಪ್ಲೊಮಾ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಪಡೆದಿರಬೇಕು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು nats.education.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅಪ್ಲೈ ಮಾಡಲು ಅಭ್ಯರ್ಥಿಗಳ ಮಾನ್ಯವಾದ ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಶೈಕ್ಷಣಿಕ ದಾಖಲೆಗಳು ಅಪ್‌ಲೋಡ್ ಮಾಡೋದು ಕಡ್ಡಾಯ ಆಗಿದೆ.
/filters:format(webp)/newsfirstlive-kannada/media/media_files/2025/11/11/ongc-new-1-2025-11-11-17-03-42.jpg)
ಆಯ್ಕೆ ಪ್ರಕ್ರಿಯೆ ಹೇಗೆ?
ಸೆಲೆಕ್ಷನ್​ ಪ್ರಾಸೆಸ್​ ಕಂಪ್ಲೀಟ್​ ಆಗಿ ಅರ್ಹತೆ ಆಧಾರದ ಮೇರೆಗೆ ನಡೆಯಲಿದೆ. ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಸೆಲೆಕ್ಷನ್​​ ಲಿಸ್ಟ್​ ಅನೌನ್ಸ್​ ಆದ ಮೇಲೆ ಡ್ಯಾಕ್ಯುಮೆಂಟ್ಸ್​ ವೆರಿಫಿಕೇಷನ್​ ಮತ್ತು ಮೆಡಿಕಲ್​ ಟೆಸ್ಟ್​ ಇರಲಿದೆ.
ದೇಶದ ವಿವಿಧ ಪ್ರದೇಶಗಳಲ್ಲಿ ಹುದ್ದೆಗಳ ನೇಮಕಾತಿ ಆಗಲಿದೆ. ಉತ್ತರ ಪ್ರದೇಶದಲ್ಲಿ 165, ಮುಂಬೈನಲ್ಲಿ 569, ಪಶ್ಚಿಮ ಪ್ರದೇಶದಲ್ಲಿ 856, ಪೂರ್ವ ಪ್ರದೇಶದಲ್ಲಿ 458, ದಕ್ಷಿಣ ಪ್ರದೇಶದಲ್ಲಿ 322 ಮತ್ತು ಮಧ್ಯ ಪ್ರದೇಶದಲ್ಲಿ 253 ಆಗಿದೆ. ಜತೆಗೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರದಲ್ಲೂ ನೇಮಕಾತಿ ಆಗಲಿದೆ.
ಇದನ್ನೂ ಓದಿ: ದೆಹಲಿ ಸ್ಫೋಟ ಕೇಸ್​​.. ಪಿತೂರಿ ಮಾಡಿದವರನ್ನು ಬಿಡೋ ಮಾತೇ ಇಲ್ಲ ಎಂದ ಪ್ರಧಾನಿ ಮೋದಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us