/newsfirstlive-kannada/media/media_files/2025/11/11/modi-2025-11-11-15-33-35.jpg)
ಭೂತಾನ್: ಕಳೆದ ರಾತ್ರಿ ದೆಹಲಿಯಲ್ಲಿ ನಡೆದ ನಿಗೂಢ ಸ್ಫೋಟಕ್ಕೆ ಸಂಬಂಧಿಸಿದಂತೆ ಕೊನೆಗೂ ಪ್ರಧಾನಿ ನರೇಂದ್ರ ಮೋದಿಯವ್ರು ರಿಯಾಕ್ಟ್​ ಮಾಡಿದ್ದಾರೆ. ಇಂದು ಭೂತಾನ್​ನಲ್ಲಿ ಮಾತಾಡಿದ ಮೋದಿ ಅವ್ರು, ಯಾವುದೇ ಕಾರಣಕ್ಕೂ ಸಂಚುಕೋರರನ್ನು ಸುಮ್ಮನೆ ಬಿಡೋದಿಲ್ಲ ಎಂದು ಶಪಥಗೈದಿದ್ದಾರೆ.
ಇಂದು ನನ್ನ ಎದೆ ತುಂಬಾ ಭಾರವಾಗಿದೆ. ಆದ್ರೂ ಅದೇ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇದು ಖಂಡನೀಯ. ತನ್ನವರನ್ನು ಕಳೆದುಕೊಂಡ ಕುಟುಂಬಸ್ಥರ ನೋವು ನನಗೆ ಅರ್ಥವಾಗುತ್ತದೆ ಎಂದರು.
ಯಾರನ್ನೂ ಬಿಡೋ ಮಾತೇ ಇಲ್ಲ ಎಂದ ಮೋದಿ
ಇನ್ನೂ, ಇಡೀ ಭಾರತವೇ ಸಂತ್ರಸ್ತ ಕುಟುಂಬಗಳ ಜೊತೆ ನಿಂತಿದೆ. ಈ ಘಟನೆ ಹಿಂದೆ ಯಾರಿದ್ರೂ ಬಿಡೋ ಮಾತೇ ಇಲ್ಲ. ದೆಹಲಿ ಸ್ಫೋಟದಲ್ಲಿ ಪ್ರಾಣ ಬಿಟ್ಟವರಿಗೆ ನ್ಯಾಯ ಕೊಡಿಸೋದು ನಮ್ಮ ಗುರಿ ಎಂದರು ಪ್ರಧಾನಿ ಮೋದಿ.
ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಮೃತರ ಸಂಖ್ಯೆ 13ಕ್ಕೇರಿದೆ. 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ದೆಹಲಿ ಕೃತ್ಯದ ಶಂಕಿತ ವ್ಯಕ್ತಿಯ ಫೋಟೋ ರಿಲೀಸ್..! ಸಿಸಿಟಿ ಫೋಟೋಗಳೂ ಲಭ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us