/newsfirstlive-kannada/media/media_files/2025/08/02/prajwal-revanna6-2025-08-02-15-53-47.jpg)
ಮನೆಗೆಲಸದ ಮಹಿಳೆ ಮೇಲಿನ ಅ*ತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯವು ತೀರ್ಪು ನೀಡಿತ್ತು. ಅಪರಾಧಿ ಪ್ರಜ್ವಲ್ ರೇವಣ್ಣಗೆ 10 ವರ್ಷ ಜೈಲು ಶಿಕ್ಷೆಯೋ ಅಥವಾ ಜೀವಾವಧಿ ಶಿಕ್ಷೆ ನೀಡಲಾಗುತ್ತಾ ಅಂತ ಎಲ್ಲರಲ್ಲೂ ಕುತೂಹಲ ಮನೆ ಮಾಡಿತ್ತು. ಇದೀಗ ಕೊನೆಗೂ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಜೀವಾವಧಿ ಶಿಕ್ಷೆ ಅಂದರೇ, ಜೀವನ ಪರ್ಯಂತ ಜೈಲುವಾಸದ ಶಿಕ್ಷೆಯನ್ನು ವಿಧಿಸಿದೆ. ಐಪಿಸಿ ಸೆಕ್ಷನ್ 376(2)(N) ನಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಇನ್ನೂ ಪ್ರಜ್ವಲ್ ರೇವಣ್ಣಗೆ ಈ ರೇಪ್ ಕೇಸ್ ನಲ್ಲಿ ದಂಡವನ್ನು ಕೋರ್ಟ್ ವಿಧಿಸಿದೆ. ಐಪಿಸಿ ಸೆಕ್ಷನ್ 376(2)(ಕೆ) ನಡಿ 5 ಲಕ್ಷ ರೂಪಾಯಿ ದಂಡ, ಐಪಿಸಿ ಸೆಕ್ಷನ್ 376(2)(ಎನ್) ನಡಿ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ದಂಡದ ಹಣದಲ್ಲಿ ಸಂತ್ರಸ್ತೆಗೆ 7 ಲಕ್ಷ ರೂಪಾಯಿ ಪರಿಹಾರ ನೀಡಲು ಕೋರ್ಟ್ ಆದೇಶ ನೀಡಿದೆ. ಜೀವನ ಪರ್ಯಂತ ಜೈಲಿನಲ್ಲಿರುವ ಶಿಕ್ಷೆಯು ಪ್ರಜ್ವಲ್ ರೇವಣ್ಣ ಪಾಲಿಗಂತೂ ದೊಡ್ಡ ಶಾಕ್.
ಆದರೇ, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಂತ್ರಸ್ತರಿಗೆ ನ್ಯಾಯ ನೀಡಿದೆ ಎಂದು ಅನೇಕರು ಕೋರ್ಟ್ ತೀರ್ಪು ಅನ್ನು ಶ್ಲಾಘಿಸುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಮುಂದಿರುವ ಆಯ್ಕೆಗಳೇನು?
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ, ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬಹುದು.
ಹೈಕೋರ್ಟ್ ನಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ರದ್ದುಪಡಿಸಲು ಮನವಿ ಮಾಡಿಕೊಳ್ಳಬಹುದು
ಹೈಕೋರ್ಟ್ , ಪ್ರಜ್ವಲ್ ಮೇಲ್ಮನವಿ ವಿಚಾರಣೆ ಹೈಕೋರ್ಟ್ ನಲ್ಲಿ ಮುಗಿಯುವವರೆಗೂ ವಿಶೇಷ ಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿ, ಶಿಕ್ಷೆಯನ್ನು ಅಮಾನತ್ತಿನಲ್ಲಿಡಬಹುದು.
ಹೈಕೋರ್ಟ್, ವಿಶೇಷ ಕೋರ್ಟ್ ತೀರ್ಪುಗೆ ತಡೆಯಾಜ್ಞೆ ನೀಡಿದರೇ, ಪ್ರಜ್ವಲ್ ಗೆ ರೀಲೀಫ್ .
ಆದರೇ, ಇನ್ನೂ ಬಾಕಿ ಇರುವ 3 ಕೇಸ್ ಗಳಲ್ಲಿ ಪ್ರಜ್ವಲ್ ಗೆ ಜೈಲು ವಾಸ ಮುಂದುವರಿಯುತ್ತೆ.
ಆ 3 ಕೇಸ್ ಗಳ ತೀರ್ಪು ಬಂದು, ನಿರಪರಾಧಿಯಾದರೇ ಮಾತ್ರವೇ ಪ್ರಜ್ವಲ್ ಗೆ ರೀಲೀಫ್
ಒಂದು ಕೇಸ್ ನಲ್ಲಿ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್, ಸುಪ್ರೀಂಕೋರ್ಟ್ ಎತ್ತಿ ಹಿಡಿದರೇ, ಪ್ರಜ್ವಲ್ ಜೈಲುವಾಸ ಕಟ್ಟಿಟ್ಟ ಬುತ್ತಿ.
ರೇಪ್ ಕೇಸ್ ಗಳಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್ ವರೆಗೂ ಹೋಗಿ ಕಾನೂನು ಹೋರಾಟ ನಡೆಸುವ ಅವಕಾಶ ಪ್ರಜ್ವಲ್ ಗೆ ಇದೆ.
ಹೈಕೋರ್ಟ್, ಸುಪ್ರೀಂಕೋರ್ಟ್ ಗಳಲ್ಲಿ ರೀಲೀಫ್ ಸಿಕ್ಕರಷ್ಟೇ ಪ್ರಜ್ವಲ್ ಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಗುತ್ತೆ
ಹೈಕೋರ್ಟ್, ಸುಪ್ರೀಂಕೋರ್ಟ್ ನಲ್ಲಿ ರೀಲೀಫ್ ಸಿಗದಿದ್ದರೇ, ಪ್ರಜ್ವಲ್ ಗೆ ಜೀವನಪರ್ಯಂತ ಜೈಲುವಾಸ ಕಟ್ಟಿಟ್ಟ ಬುತ್ತಿ.
ಇದನ್ನೂ ಓದಿ: ದೆಹಲಿಯಿಂದ ಮಂಡ್ಯಕ್ಕೆ ಬಂದ ಪಾರಿವಾಳ.. ‘ಅಭಿಮನ್ಯು’ ಸಾಧನೆ ಬಗ್ಗೆ ಹೇಳಿದ ಮಾಲೀಕ ಶ್ರೀNಧರ್
ನಿನ್ನೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ಪ್ರಕಟಿಸಿದ್ದರು. ತೀರ್ಪು ಹೊರ ಬಿಳುತ್ತಿದ್ದಂತೆಯೇ ಮಾಜಿ ಸಂಸದ ಕೋರ್ಟ್ ಹಾಲ್ನಲ್ಲಿಯೇ ಕಣ್ಣೀರು ಇಟ್ಟಿದ್ದರು. ಇದಾದ ಬಳಿಕ ಇಂದು ಕೋರ್ಟ್ಗೆ ಹಾಜರಾಗಿದ್ದ ಅಪರಾಧಿ ಪ್ರಜ್ವಲ್ ರೇವಣ್ಣಗೆ ಕನಿಷ್ಠ10 ವರ್ಷ ಜೈಲು ಶಿಕ್ಷೆ ನೀಡಬೇಕು, ಗರಿಷ್ಠ ಜೀವಾವಧಿ ಶಿಕ್ಷೆ ನೀಡಬೇಕು ಅಂತ ಪ್ರಾಸಿಕ್ಯೂಷನ್ ಮನವಿ ಮಾಡಿಕೊಂಡಿತ್ತು.
ಇನ್ನೂ, ಪ್ರಜ್ವಲ್ ರೇವಣ್ಣ ಅಳುತ್ತಾ, ನಾನು ರೇ*ಪ್ ಮಾಡಿಲ್ಲ ಅಂತ ಹೇಳಿದ್ದರು. ಪ್ರಜ್ವಲ್ ರೇವಣ್ಣ ವಕೀಲೆ ನಳಿನಿ ಮಾಯಾ ಗೌಡ ಕೂಡ ವಾದ ಮಾಡಿದ್ದಾರೆ. ಅಪರಾಧಿಗೆ ಕಡಿಮೆ ಶಿಕ್ಷೆ ಕೊಡುವಂತೆ ಮನವಿ ಮಾಡಿಕೊಂಡಿದ್ದರು.
ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ತೀರ್ಪು ನೀಡಿದ್ದು ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಮನೆ ಕೆಲಸದಾಕೆ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿದೆ. ಇನ್ನೂ ಮೂರು ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಇವತ್ತು ಒಟ್ಟು 424 ಪುಟಗಳ ತೀರ್ಪುನ್ನು ಪ್ರಕಟಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ