/newsfirstlive-kannada/media/media_files/2025/08/01/naavu-nammavaru-rajath-kishan-2025-08-01-14-03-13.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ರಜತ್​ ಕಿಶನ್ ದಿನದಿಂದ ದಿನಕ್ಕೆ ಸಖತ್​ ಮಿಂಚುತ್ತಿದ್ದಾರೆ. ಬಿಗ್​ಬಾಸ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ರಜತ್​ ಕಿಶನ್​ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ರಜತ್​ ಕಿಶನ್​ ಮತ್ತೊಂದು ಹೊಚ್ಚ ಹೊಸ ರಿಯಾಲಿಟಿ ಶೋನಲ್ಲಿ ರಜತ್​ ಕಿಶನ್​ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಏನೆಂದರೆ ಈ ಬಾರಿ ರಜತ್​ ಕಿಶನ್​ ಇಡೀ ಕುಟುಂಬ ಈ ಹೊಸ ಶೋಗೆ ಎಂಟ್ರಿ ಕೊಟ್ಟಿದೆ.
ಹೌದು, ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರೋ ನಾವು ನಮ್ಮವರು ಶೋನಲ್ಲಿ ರಜತ್​ ಕಿಶನ್, ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿರುವ ಅಲ್ಲು ರಘು ದಂಪತಿ, ಬಿಗ್​ಬಾಸ್​ ಖ್ಯಾತಿಯ ಸಮೀರ್ ಆಚಾರ್ಯ ದಂಪತಿ ​ಸೇರಿದಂತೆ ಒಟ್ಟು 9 ಕುಟುಂಬ ಎಂಟ್ರಿ ಕೊಟ್ಟಿದೆ.
ಈಗಾಗಲೇ ಸವಿ ಸವಿ ಮನರಂಜನೆಯ ನೆನಪಿನಂಗಳಕ್ಕೆ 'ನಾವು ನಮ್ಮವರು' ಗೃಹಪ್ರವೇಶ ಮಾಡಿದೆ. ಈ ಶೋಗೆ ನಟಿ ಅಮೂಲ್ಯ, ಹಿರಿಯ ನಟಿ ತಾರಾ, ನಟ ಶರಣ್​ ಜಡ್ಜ್ ಸ್ಥಾನವನ್ನು ಅಲಂಕರಿಸಿದ್ದಾರೆ. ನಾವು ನಮ್ಮವರು ನಾಳೆಯಿಂದ ಶನಿ-ಭಾನು ರಾತ್ರಿ 9ಕ್ಕೆ ಪ್ರಸಾರ ಕಾಣಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ