ರಕ್ಷಕ್‌ ಬುಲೆಟ್ ಕಾರು, ಬೈಕ್​ ನಡುವೆ ಅಪಘಾತ.. ಮುರಿದ ಯುವಕನ ಎಡಗಾಲು

ಬಿಗ್​​ಬಾಸ್​ ಖ್ಯಾತಿಯ ರಕ್ಷಕ್‌ ಬುಲೆಟ್ ಅವರ ಅಜಾಗರೂಕತೆಯ ಕಾರು ಚಾಲನೆಯಿಂದ ಯುವಕ ಕಾಲು ಕಳೆದುಕೊಂಡಿದ್ದಾರೆ. ಈ ಅಪಘಾತವು ಸಿಲಿಕಾನ್ ಸಿಟಿಯ ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್ ಕುಮಾರ್ ಮನೆಯ ತಿರುವಿನಲ್ಲಿ ನಡೆದಿದೆ.

author-image
Bhimappa
rakshak_bullet
Advertisment

ಬೆಂಗಳೂರು: ಬಿಗ್​​ಬಾಸ್​ ಖ್ಯಾತಿಯ ರಕ್ಷಕ್‌ ಬುಲೆಟ್ ಅವರ ಅಜಾಗರೂಕತೆಯ ಕಾರು ಚಾಲನೆಯಿಂದ ಯುವಕ ಕಾಲು ಕಳೆದುಕೊಂಡಿದ್ದಾರೆ. ಈ ಅಪಘಾತವು ಸಿಲಿಕಾನ್ ಸಿಟಿಯ ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್ ಕುಮಾರ್ ಮನೆಯ ತಿರುವಿನಲ್ಲಿ ನಡೆದಿದೆ.  

ಶಿಡ್ಲಘಟ್ಟ ಮೂಲದ ಯುವಕ ವೇಣುಗೋಪಾಲ ಅವರು ಎಡಗಾಲಿನ ಮೂಳೆ ಮುರಿದುಕೊಂಡಿದ್ದಾರೆ. ವೇಣುಗೋಪಾಲ ಮತ್ತು ಸ್ನೇಹಿತೆ ಬೈಕ್​ನಲ್ಲಿ ಬರುತ್ತಿದ್ದರು. ರಕ್ಷಕ್‌ ಬುಲೆಟ್ ಅವರ ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದರಿಂದ ಬೈಕ್​ಗೆ ಡಿಕ್ಕಿ ಹೊಡೆದಿದೆ. ಇದರಿಂದ ವೇಣುಗೋಪಾಲ ಎನ್ನುವ ಯುವಕನ ಎಡಗಾಲಿನ ಮೂಳೆ ಮುರಿತವಾಗಿದೆ.  

ಇದನ್ನೂ ಓದಿ:ಕಾಮಿಡಿ ಕಿಲಾಡಿ ಶೋ ಖ್ಯಾತಿಯ ಚಂದ್ರಶೇಖರ ಸಿದ್ದಿ ನಿಧನ.. ದೂರು ನೀಡಿದ ತಾಯಿ​

rakshak_bullet_car

ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್ ಕುಮಾರ್ ಮನೆ ತಿರುವಿನಲ್ಲಿ ಈ ಆಕ್ಸಿಡೆಂಟ್ ಆಗಿದೆ. ರಕ್ಷಕ್ ಬುಲೆಟ್​ ಅವರ ಕಾರು ಯುವಕನ ಬೈಕ್​ಗೆ ಡಿಕ್ಕಿ ಹೊಡೆದಿದೆ. ತಕ್ಷಣ ಗಾಯಾಳುವನ್ನು ಹೆಬ್ಬಾಳದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಲಾಗಿದೆ. ಶಿಡ್ಲಘಟ್ಟ ಮೂಲದ ಯುವಕ ವೇಣುಗೋಪಾಲ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದನು. ಸದ್ಯ ಈ ಸಂಬಂಧ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rakshak Bullet
Advertisment