/newsfirstlive-kannada/media/media_files/2025/09/26/film-scam-2025-09-26-13-06-33.jpg)
ಬೆಂಗಳೂರು: 1980-90ರ ದಶಕದ ಸ್ಟಾರ್ ನಿರ್ಮಾಪಕಿ ಹಾಗು ಮಮತಾ ಮೂವೀಸ್ ಬ್ಯಾನರ್​ನ ಓನರ್ ಲಕ್ಷ್ಮಿ ವೆಂಕಟೇಶ್​ಗೆ ವಂಚಕರು ವಂಚಿಸಿದ್ದಾರೆ. ಲಕ್ಷ್ಮಿ ವೆಂಕಟೇಶ್ ಹೆಸರಿನಲ್ಲಿ ನಕಲಿ ವಿಳಾಸ, ನಕಲಿ ಚೆಕ್ ಸೃಷ್ಟಿಸಿ ವಂಚಕರು ಚಿತ್ರ ಮಾರಾಟ ಮಾಡಿದ್ದಾರೆ. ಈ ಕುರಿತು ತಮ್ಮದೇ ಚಿತ್ರವನ್ನು ಇಂಟರ್​ನೆಟ್​ನಲ್ಲಿ ನೋಡಿದ ನಿರ್ಮಾಪಕಿ ಶಾಕ್ ಆಗಿದ್ದಾರೆ.
ಏನಿದು ಪ್ರಕರಣ..?
ನಿರ್ಮಾಪಕಿ ತಮ್ಮ ಬ್ಯಾನರ್ ಅಡಿಯಲ್ಲಿ ಚಿತ್ರಗಳನ್ನ ಏಜೆಂಟರ ಮೂಲಕ ಮಾರಾಟ ಮಾಡಲು ಮುಂದಾದಾಗ ಈ ವಂಚನೆ ಬೆಳಕಿಗೆ ಬಂದಿದೆ. ಈ ಕುರಿತು ನೀವು ಈಗಾಗಲೆ ಚಿತ್ರಗಳನ್ನ ಮಾರಾಟ ಮಾಡಿದ್ದೀರಾ ಎಂದು ಏಜೆಂಟ್ ಹೇಳಿಕೆ ನಿರ್ಮಾಪಕಿ ಶಾಕ್ ಆಗಿದ್ದಾರೆ. ಕೂಡಲೇ ಸೋಷಿಯಲ್ ಪ್ಲಾಟ್ ಫಾರ್ಮ್ ನಲ್ಲಿ ಚೆಕ್ ಮಾಡಿದಾಗ ನಿರ್ಮಾಪಕಿಗೆ ಮೋಸ ಹೋಗಿರುವುದಾಗಿ ಅರಿವಿಗೆ ಬಂದಿದೆ.
ವಂಚನೆ ಕುರಿತು ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ 1 ಕೋಟಿ ನಷ್ಟ ಆಗಿರುವುದಾಗಿ ಪ್ರಕರಣ ದಾಖಲಿಸಿದ್ದಾರೆ. ಎ.ಎನ್ ಜಗದೀಶ್, ಪುರುಷೋತ್ತಮ್, ರಸೂಲ್ ಎಂಬ ವಂಚಕರಿಂದ ನಿರ್ಮಾಪಕಿ ಮೋಸ ಹೋಗಿದ್ದಾರೆ.
ನಿರ್ಮಾಪಕಿ ಲಕ್ಷ್ಮಿ ವೆಂಕಟೇಶ್ ನಿರ್ಮಾಣದ ಸಿನಿಮಾಗಳು
ಡಾ.ವಿಷ್ಣುವರ್ಧನ್ ನಟನೆಯ 1983 ರ ಚಿತ್ರ ‘ಗಂಡುಗಲಿ ರಾಮ’. ಅಶೋಕ್ ಮತ್ತು ಆರತಿ ನಟನೆಯ ’ಗಣೇಶ ಮಹಿಮೆ’ ಹಾಗು ಜಯಂತಿ ನಟನೆಯ ಮಲ್ಲಿಗೆ-ಸಂಪಿಗೆ ಇನ್ನೂ ಮುಂತಾದ ಸಿನಿಮಾಗಳನ್ನು ನಿರ್ಮಿಸಿದ್ದಾರೆ.