/newsfirstlive-kannada/media/media_files/2025/08/02/saina-nehwal_kashyap-2025-08-02-22-55-17.jpg)
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪತಿ ಪರುಪಳ್ಳಿ ಕಶ್ಯಪ್ ಅವರು 7 ವರ್ಷದ ದಾಂಪತ್ಯ ಜೀವನದಿಂದ ದೂರವಾಗುವುದಾಗಿ ಇತ್ತೀಚೆಗೆ ಪ್ರಕಟಿಸಿದ್ದರು. ಆದರೆ ಇದೀಗ ಇಬ್ಬರೂ ಒಂದಾಗುತ್ತಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.
ಬ್ಯಾಡ್ಮಿಂಡನ್ ತಾರೆ ಸೈನಾ ನೆಹ್ವಾಲ್ ಹಾಗೂ ಪತಿ ಪರುಪಳ್ಳಿ ಕಶ್ಯಪ್ ಅವರು ಈ ಬಗ್ಗೆ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿದ್ದಾರೆ. ಇಬ್ಬರು ನದಿ ದಡದಲ್ಲಿ ಇರುವಂತಹ ಫೋಟೋವನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ದೂರವಾಗಿರುವುದು ಸಮೀಪವಾಗಬೇಕು ಎನ್ನುವ ಮೌಲ್ಯಗಳನ್ನ ಕಲಿಸುತ್ತದೆ. ಹೀಗಾಗಿ ನಾವಿಬ್ಬರು ಮತ್ತೆ ಒಂದಾಗಲು ನಿರ್ಧಾರ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಈ ಇಬ್ಬರು ಇನ್ಸ್ಟಾದಲ್ಲಿ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಸಾಕಷ್ಟು ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು ಒಂದಾಗಿ ಸುಖವಾಗಿ ಬಾಳಿ ಎಂದು ಹಾರೈಸುತ್ತಿದ್ದಾರೆ. ಇನ್ನು ಕೆಂಪು ಬಣ್ಣದ ದಿಲ್ ಎಮೋಜಿಗಳನ್ನು ಕಮೆಂಟ್ನಲ್ಲಿ ಹಾಕುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಉಪನಗರ ರೈಲು ಯೋಜನೆ; ಕಾರಿಡಾರ್ಗಳ ಕಾಮಗಾರಿ ಒಪ್ಪಂದ ಉಲ್ಲಂಘಿಸಿದ L&T
ಸೈನಾ ನೆಹ್ವಾಲ್ ಹಾಗೂ ಪತಿ ಪರುಪಳ್ಳಿ ಕಶ್ಯಪ್ ಅವರು ಹೈದಾರಾಬಾದ್ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಬ್ಯಾಡ್ಮಿಂಟನ್ ತರಬೇತಿಯನ್ನು ಪಡೆಯುತ್ತಿದ್ದರು. ಇದೇ ವೇಳೆ ಇಬ್ಬರ ನಡುವೆ ಪರಿಚಯ ಬೆಳೆದು ಪ್ರೀತಿಯಾಗಿ ಬದಲಾಗಿತ್ತು. ಹೀಗಾಗಿ ಇಬ್ಬರು 2018ರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ನಂತರದಲ್ಲಿ 7 ವರ್ಷ ಒಂದಾಗಿ ಬಾಳಿ, ಬಳಿಕ ದಾಂಪತ್ಯ ಜೀವನದಿಂದ ದೂರವಾಗಲು ನಿರ್ಧಾರ ಮಾಡಿರುವುದಾಗಿ ಇಬ್ಬರು ಪ್ರಕಟಿಸಿದ್ದರು.
ಇದರಿಂದ ಜನರು ಅಚ್ಚರಿ ವ್ಯಕ್ತಪಡಿಸಿದ್ದರು. ಈ ಎಲ್ಲದರ ಬೆಳವಣಿಗೆಯ ಬೆನ್ನಲ್ಲೇ ಸೈನಾ ನೆಹ್ವಾಲ್ ಹಾಗೂ ಪತಿ ಕಶ್ಯಪ್ ಒಂದಾಗುತ್ತಿರುವುದಾಗಿ ಹೇಳಿರುವುದು ಆ ಎರಡು ಕುಟುಂಬಗಳಿಗೂ ಹಾಗೂ ಅವರ ಅಭಿಮಾನಿಗಳು ಸಂತಸದ ಸುದ್ದಿ ಎಂದೇ ಹೇಳಬಹುದು. ಯಾಕೆಂದರೆ ಎಷ್ಟೋ ಸೆಲೆಬ್ರೆಟಿ ಕಪಲ್ಸ್ ಡಿವೋರ್ಸ್ ನಂತರ ಒಬ್ಬರ ಮುಖ ಒಬ್ಬರು ನೋಡದಂತೆ ಇದ್ದಾರೆ. ಇಂತಹ ಸಮಯದಲ್ಲಿ ಈ ಜೋಡಿ ಒಂದಾಗುತ್ತಿರುವುದು ಖುಷಿ ಸಂಗತಿಯೇ ಹೌದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ