ಕಾಮನ್ ಮ್ಯಾನ್ ಸೂರಜ್​ ಸಿಂಗ್​ ಬಿಗ್​ ಬಾಸ್​ಗೆ ಸೆಲೆಕ್ಟ್ ಆಗಿದ್ದೇಗೆ?

ವೈಲ್ಡ್​ ಕಾರ್ಡ್​ ಮೂಲಕ ಬಿಗ್​ಬಾಸ್​​ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದ ಸೂರಜ್​ ಸಿಂಗ್​ ಬಿಗ್​ಬಾಸ್​ ಕ್ರಷ್​ ಎಂದೇ ಖ್ಯಾತಿ ಪಡೆದಿದ್ರು. ಆದ್ರೆ ಇದೀಗ ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿದ್ದು, ಅಭಿಮಾನಿಗಳಿಗೆ ಬೇಸರ ತಂದಿದೆ.

author-image
Ganesh Kerekuli
suraj 1

ಬಿಗ್ ಬಾಸ್ ನಿಂದ ಎಲಿಮಿನೇಟ್ ಆದ ಸೂರಜ್ ಸಿಂಗ್

Advertisment

 ಬಿಗ್​ ಬಾಸ್​ಗೆ ಸೂರಜ್​ ಸೆಲೆಕ್ಟ್​ ಆಗಿದ್ದೇ ಸಖತ್​ ಇಂಟರೆಸ್ಟಿಂಗ್. ವೈಲ್ಡ್​ ಕಾರ್ಡ್​ ಮೂಲಕ ಬಿಗ್​ಬಾಸ್​​ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದ ಸೂರಜ್​ ಸಿಂಗ್ ಪಕ್ಕಾ ಕಾಮನ್​ ಮ್ಯಾನ್​.  
ಇನ್ಸ್ಟಾಗ್ರಾಮ್​ನಲ್ಲಿ ರೀಲ್ಸ್ ಮಾಡ್ತಿದ್ದ ಸೂರಜ್​ಗೆ ಅಷ್ಟೇನು ಫಾಲೋವರ್ಸ್​ ಇರಲಿಲ್ಲ... ಇನ್ಸ್ಟಾಗ್ರಾಮ್​ನಲ್ಲಿ ​ಹೆಚ್ಚಾಗಿ ಹೆಸರು ಬಂದಿರಲಿಲ್ಲ.. ಕೆಲವೇ ಕೆಲವು ಜನರಿಗೆ ಮಾತ್ರ ಸೂರಜ್​ ಬಗ್ಗೆ ತಿಳಿದಿತ್ತು.. ಆದ್ರೂ ಬಿಗ್​ ಬಾಸ್​ಗೆ ಸೂರಜ್​ ಹೇಗೆ ಸೆಲೆಕ್ಟ್​ ಆದ್ರೂ ಎಂಬ ಪ್ರಶ್ನೆಗಳೂ ಎಲ್ಲರಲ್ಲೂ ಮೂಡಿತ್ತು... ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಸೂರಜ್​ರವರೇ ಉತ್ತರ ಕೊಟ್ಟಿದ್ದಾರೆ.. 

ಗಾಡ್ಸ್​ ಪ್ಲಾನ್​ ಎಂದ ಸೂರಜ್​ ಸಿಂಗ್​!

ಗಾಡ್ಸ್​ ಪ್ಲಾನ್​.. ನಾನು ನೈಟ್​ ಶಿಫ್ಟ್​ ಮಾಡ್ತಿದೆ. ಅವಾಗ್ಲೇ ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ಮಾಡೋದಕ್ಕೆ ಶುರು ಮಾಡಿದ್ದು. ನಾನು ಸೋಷಿಯಲ್​ ಮಿಡಿಯಾದಲ್ಲಿ ಆಕ್ವೀವ್​ ಆಗಿ ಕೇವಲ 2 ತಿಂಗಳಷ್ಟೆ ಆಗಿತ್ತು. ಅಷ್ಟರಲ್ಲಿಯೇ ಒಳ್ಳೆಯ  ರೆಸ್ಪಾನ್ಸ್ ಸಿಕ್ಕಿತ್ತು..ಆದ್ರೆ ನನಗೆ ನೈಟ್​ ಶಿಫ್ಟ್​ ಆಗ್ತಿರಲಿಲ್ಲ. ರಿಸ್ಕ್​ ತಗೋಂಡ್ರೆ ಈ ಟೈಮ್​ನಲ್ಲಿ ತಗೋಬೇಕು.3-4 ವರ್ಷ ಆದಮೇಲೆ ಕಮಿಟ್​ಮೆಂಟ್​, ಜವಾಬ್ದಾರಿಗಳು ಜಾಸ್ತಿ ಆಗುತ್ತೆ.. ಅವಾಗ ರಿಸ್ಕ್​ ತೆಗೆದುಕೊಳ್ಳೊದಕ್ಕೆ ಆಗಲ್ಲ. ಆಗ ಅನಿಸಿತು  ರಿಸ್ಕ್​ ತಗೋಳನ ಅಂತಾ. ಆದ್ರೆ ಮನೆಲೀ ಹೇಳಲು ಧೈರ್ಯ ಇರಲಿಲ್ಲ.ನಾನು ಸೋಷಿಯಲ್​ ಮೀಡಿಯಾದಲ್ಲಿ ಆನ್​ಲೈನ್​ ಫಿಟ್​ನೆಸ್​ ಕ್ಲಾಸ್​ ಮಾಡ್ತಿದ್ದೇ.. ಅದರಿಂದ ಸ್ವಲ್ಪ ಇನ್​ಕಮ್​ ಬರುತ್ತಿತ್ತು.ಹೀಗಾಗಿ ಜಾಬ್​ ಕ್ವೀಟ್​ ಮಾಡಿದೆ. 

ಅದಾದ ಮೇಲೆ ಮನೆಯಲ್ಲಿ  ಒಬ್ಬನೇ ಯೋಚನೆ ಮಾಡಿಕೊಂಡು ಮಲಗಿದ್ದೇ.. ಆಗ ಇನ್ಸ್ಟಾಗ್ರಾಮ್​ನಲ್ಲಿ ನನಗೊಂದು ಮೇಸೇಜ್​ ಬರುತ್ತೆ..ಆದ್ರೆ ಅವರು ಬಿಗ್​ ಬಾಸ್​ ಬಗ್ಗೆ ಹೇಳಿರಲಿಲ್ಲ.ಮಾತನಾಡಬೇಕು ಅಂದಿದ್ರು ಅಷ್ಟೇ.ನಾನು ನನ್ನ ಕಾನ್​ಟ್ಯಾಕ್ಟ್​ ಶೇರ್​ ಮಾಡಿದೆ.  ಅವರ ಜೊತೆ ಮಾತನಾಡಿ, ಮತ್ತೊಬ್ಬರಿಗೆ ನಂಬರ್​ ಪಾಸ್​ ಮಾಡ್ತಾರೆ. ಅವರ ಜೊತೆ ಮಾತನಾಡ್ತೀನಿ.ಆದ್ರೆ ಬಿಗ್​ ಬಾಸ್​ ಅಂತಾ ಎಲ್ಲೂ ರಿವಿಲ್​ ಮಾಡಿರಲಿಲ್ಲ. ಕಲರ್ಸ್​ ಜೊತೆ ಕೊಲಾಬ್​ ಅಂದಿದ್ರು. ಕೊನೆಗೆ ಬಿಗ್​ ಬಾಸ್​​ಗೆ ಕೇಳಿದ್ದು ಅಂದಿದ್ರು.. ಆದ್ರೆ ಕನ್​ಫರ್ಮ್​ ಮಾಡಿರಲಿಲ್ಲ.. ನಾನು ನನ್ನ ಫ್ರೆಂಡ್​ ಸ್ಟುಡಿಯೋಗೆ ಬಂದು ಮಾತನಾಡುತ್ತೀವಿ. 2 ದಿನ ಬಿಟ್ಟು ಕಾಲ್​ ಮಾಡ್ತೀವಿ ಅಂದಿದ್ರು. ಆದ್ರೆ ಕಾಲ್​ ಬಂದಿರಲಿಲ್ಲ. ಇನ್ನೇನ್ನೂ ವೈಲ್ಡ್​ ಕಾರ್ಡ್ ಎಂಟ್ರಿಗೆ 2 ದಿನ ಇದ್ದಾಗ,  ನಾನು ಮೆಸೆಜ್​ ಮಾಡಿ ಕೇಳಿದೆ. ಆಗ ಅವರು ಕಾಲ್​ ಮಾಡಿ ಬಿಗ್​ ಬಾಸ್​ ನೋಡಿದ್ದೀರಾ ಅಂತ  ಕೇಳಿದ್ರು.. ನಾನು ನೋಡಿರಲಿಲ್ಲ. ನನಗೆ 2 ದಿನ ಟೈಮ್​ ಇತ್ತು. ರಾತ್ರಿ 10 ಗಂಟೆಯಿಂದ ಬೆಳಗ್ಗೆ ತನಕ  ನೋಡಿದೆ..ಮತ್ತೆ ಬೆಳಗ್ಗೆ ಕಾಲ್​ ಮಾಡಿ ತುಂಬಾ ಪ್ರಶ್ನೆ ಕೇಳಿದ್ರು.ನಾನು ಉತ್ತರ ಕೊಟ್ಟೆ.ಆಗಲೂ ಕನ್​ಫರ್ಮ್​ ಮಾಡಿರಲಿಲ್ಲ.. ಮತ್ತೆ 2 ಗಂಟೆ ಬಿಟ್ಟು ಮೆಡಿಕಲ್ ಚೆಕ್​ ಲಿಸ್ಟ್​ ಬಂತು. ಆಗ ಸೆಲೆಕ್ಟ್​ ಆದೆ ಅಂತ ಸಂತೋಷ ಆಯಿತು ಎಂದು ಹೇಳಿದ್ದಾರೆ.  

ಇದನ್ನೂ ಓದಿ :ಮಾಳು ನೇರನುಡಿ..! ಬಿಗ್​ ಬಾಸ್​ ಮನೆಯಲ್ಲಿ ಯಾರು ಹೇಗೆಲ್ಲ ಇದ್ದಾರಂತೆ ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Colors kannada BIG BOSS 12 SEASON Suraj Singh
Advertisment