Advertisment

ICC ODI Ranking: ರೋಹಿತ್​​ ನಂಬರ್​​ 1; ಕೊಹ್ಲಿಗೆ ಎಷ್ಟನೇ ಸ್ಥಾನ ಗೊತ್ತಾ?

ಜತೆಗೆ ಒಂದೇ ಒಂದು ಪಂದ್ಯವನ್ನು ಆಡದ ಟೀಮ್​ ಇಂಡಿಯಾ ಲೆಜೆಂಡ್​ ಬ್ಯಾಟರ್​​ ವಿರಾಟ್ ಕೊಹ್ಲಿ ಮುಂಬಡ್ತಿ ಪಡೆದಿದ್ದಾರೆ. ಪಾಕ್​ ತಂಡದ ಮಾಜಿ ನಾಯಕ ಬಾಬರ್ ಅಜಂ ತಮ್ಮ ಕಳಪೆ ಫಾರ್ಮ್‌ನಿಂದಾಗಿ ಹಿಂಬಡ್ತಿ ಪಡೆದಿದ್ದಾರೆ.

author-image
Ganesh Nachikethu
Rohit Kohli
Advertisment

ನಾಳೆಯಲ್ಲ ನಾಡಿದ್ದು ಅಂದ್ರೆ ಇದೇ ತಿಂಗಳು ನವೆಂಬರ್​​ 14ನೇ ತಾರೀಕಿನಿಂದ ಟೀಮ್​ ಇಂಡಿಯಾ ಮತ್ತು ಸೌತ್​ ಆಫ್ರಿಕಾ ನಡುವಿನ 2 ಟೆಸ್ಟ್​ ಪಂದ್ಯಗಳ ಮಹತ್ವದ ಸರಣಿ ಶುರುವಾಗಲಿದೆ. ಟೆಸ್ಟ್​ ಸರಣಿ ಬಳಿಕ ಒನ್​ ಡೇ ಮತ್ತು ಟಿ20 ಸೀರೀಸ್​ ಇರಲಿದೆ. ಇದರ ಮಧ್ಯೆಯೇ ಐಸಿಸಿ ಹೊಸ ಏಕದಿನ ಬ್ಯಾಟಿಂಗ್ ಶ್ರೇಯಾಂಕ ರಿಲೀಸ್​ ಮಾಡಿದೆ.

Advertisment

ಇನ್ನೂ, ಐಸಿಸಿ ಹೊಸ ಏಕದಿನ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಅಚ್ಚರಿಯ ಬದಲಾವಣೆಗಳು ಕಂಡುಬಂದಿವೆ. ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​​ ರೋಹಿತ್ ಶರ್ಮಾ 781 ಅಂಕಗಳೊಂದಿಗೆ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

ಜತೆಗೆ ಒಂದೇ ಒಂದು ಪಂದ್ಯವನ್ನು ಆಡದ ಟೀಮ್​ ಇಂಡಿಯಾ ಲೆಜೆಂಡ್​ ಬ್ಯಾಟರ್​​ ವಿರಾಟ್ ಕೊಹ್ಲಿ ಮುಂಬಡ್ತಿ ಪಡೆದಿದ್ದಾರೆ. ಪಾಕ್​ ತಂಡದ ಮಾಜಿ ನಾಯಕ ಬಾಬರ್ ಅಜಂ ತಮ್ಮ ಕಳಪೆ ಫಾರ್ಮ್‌ನಿಂದಾಗಿ ಹಿಂಬಡ್ತಿ ಪಡೆದಿದ್ದಾರೆ.

ಯಾರಿಗೆ ಎಷ್ಟನೇ ಸ್ಥಾನ..?

ಱಂಕಿಂಗ್​​ ಲಿಸ್ಟ್​ನಲ್ಲಿ ರೋಹಿತ್ ನಂತರ ಅಫ್ಘಾನಿಸ್ತಾನದ ಬ್ಯಾಟರ್​ ಇಬ್ರಾಹಿಂ ಜದ್ರಾನ್ 764 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ ತಂಡದ ಡ್ಯಾರಿಲ್ ಮಿಚೆಲ್ 746 ಅಂಕಗಳೊಂದಿಗೆ 3ನೇ ಮತ್ತು ಟೀಮ್​ ಇಂಡಿಯಾ ಕ್ಯಾಪ್ಟನ್​ ಶುಭ್ಮನ್​ ಗಿಲ್​ 745 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 725 ಅಂಕಗಳೊಂದಿಗೆ ಐದನೇ ಸ್ಥಾನವನ್ನು ತಲುಪಿದ್ದಾರೆ. 

Advertisment

ಇದನ್ನೂ ಓದಿ: ಡೆಲ್ಲಿ ಬ್ಲ್ಯಾಸ್ಟ್​ ಕೇಸ್​ಗೆ ಸ್ಫೋಟಕ ಟ್ವಿಸ್ಟ್: ಮಹತ್ವದ ಸಾಕ್ಷಿಗಾಗಿ ಪೊಲೀಸ್ರ ಶೋಧಕಾರ್ಯ.. ಏನದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rohit Sharma Rohit Sharma-Virat Kohli Virat Kohli
Advertisment
Advertisment
Advertisment