ಇನ್​​ಸ್ಟಾಗ್ರಾಮ್​​ ಲವ್ ಸ್ಟೋರಿಯಿಂದ ಮೋಸ ಹೋದ ಅಸ್ಸಾಂ ಮಹಿಳೆ, ಬಂಗಾರುಪೇಟೆಯ ಪ್ರಿಯಕರನ ಮನೆಯಲ್ಲಿ ಆಗಿದ್ದೇನು?

ಅಸ್ಸಾಂ ರಾಜ್ಯದ ಗುವಾಹಟಿಯ ಸೋನಿಯಾ ಶರ್ಮಾ ಎಂಬ ವಿವಾಹಿತೆ ಇನ್ಸಟಾಗ್ರಾಮ್ ಲವ್ವರ್ ನನ್ನು ನಂಬಿ ಮೋಸ ಹೋಗಿದ್ದಾಳೆ. ಗಂಡನನ್ನು ಬಿಟ್ಟು, ಕೋಲಾರದ ಬಂಗಾರುಪೇಟೆಗೆ ಬಂದು ಲವ್ವರ್ ಜಮೀರ್ ಪಾಷ ಮನೆಯಲ್ಲಿದ್ದಳು. ಆದರೇ, ಲವ್ವರ್ ಮನೆಯಲ್ಲಿ ಹಣ, ಚಿನ್ನಾಭರಣ ಕಿತ್ತುಕೊಂಡು ಚಿತ್ರಹಿಂಸೆ ನೀಡಿದ್ದಾರಂತೆ.

author-image
Chandramohan
Assam lady in kolar
Advertisment
  • ಇನ್ಸಟಾಗ್ರಾಮ್ ಲವ್ವರ್ ನಂಬಿ ಮೋಸ ಹೋದ ಸೋನಿಯಾ ಶರ್ಮಾ!
  • ಗುವಾಹಟಿಯಿಂದ ಬಂದು ಬಂಗಾರುಪೇಟೆಯ ಲವ್ವರ್ ಮನೆಯಲ್ಲಿ ವಾಸ
  • ಲವ್ವರ್ ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ, ಬಳಿಕ ಮನೆಯಿಂದ ಎಸ್ಕೇಪ್‌!

ಈಗಿನ ಕಾಲದಲ್ಲಿ ಫೇಸ್ ಬುಕ್, ಇನ್ಸ್ ಟಗ್ರಾಮ್ ನಲ್ಲಿ ಹುಡುಗ, ಹುಡುಗಿ ಪರಸ್ಪರ ನೋಡಿಕೊಂಡು ಮದುವೆಯಾಗುವ ಕಾಲ. ಫೇಸ್ ಬುಕ್, ಇನ್ಸ್ ಟಗ್ರಾಮ್ ಚಾಟ್ ಗಳಿಂದಲೇ ಲವ್ ಚಾಟ್ ಶುರುವಾಗುತ್ತೆ. ಇದು ಮದುವೆಗೂ ನಾಂದಿ ಹಾಡುತ್ತೆ. ಆದರೇ, ಕೆಲವೊಂದು ಸಕ್ಸಸ್ ಆದರೇ, ಇನ್ನೂ ಕೆಲವು ಫೇಲ್ಯೂರ್ ಆಗೋದು ಪಕ್ಕಾ.

ಇನ್ಸ್ ಟಗ್ರಾಮ್ ನಲ್ಲಿ ಕೆಲವರು ಬಣ್ಣ ಬಣ್ಣದ ಪೋಟೋ ಹಾಕಿಕೊಂಡು ಬೇರೆಯವರನ್ನು ನಂಬಿಸಿ ಯಾಮಾರಿಸೋದು ನಡೆಯುತ್ತಲೇ ಇದೆ. ಹಿಂದೆ, ಮುಂದೆ ವ್ಯಕ್ತಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಫೇಸ್ ಬುಕ್, ಇನ್ಸ್ ಟಾಗ್ರಾಮ್ ಪೋಟೋ, ವಿಡಿಯೋ ನೋಡಿ ಮರಳಾದರೇ, ಅವರ ಜೀವನ ನರಕ ಆಗೋದು ಗ್ಯಾರಂಟಿ. 

ಇನ್ಸಟಾಗ್ರಾಮ್ ಲವ್ ನಿಂದ ಈಗ ವಿವಾಹಿತ ಮಹಿಳೆಯೊಬ್ಬಳು ತನ್ನ ಜೀವನದಲ್ಲಿ ತಾನೇ ಅಪತ್ತು ತಂದುಕೊಂಡಿದ್ದಾಳೆ. ಅಸ್ಸಾಂ ರಾಜ್ಯದ ಗುವಾಹಟಿ ವಿವಾಹಿತ ಮಹಿಳೆಯ ಇನ್ಸಟಾಗ್ರಾಮ್ ನಲ್ಲಿ ಪರಿಚಯವಾದ ಜಮೀರ್ ಪಾಷನನ್ನು ಲವ್  ಮಾಡಿದ್ದಾಳೆ. ಈ ಜಮೀರ್ ಪಾಷಾ, ಕೋಲಾರ ಜಿಲ್ಲೆಯ ಬಂಗಾರುಪೇಟೆಯ ನ್ಯೂ ಟೌನ್ ಬಡಾವಣೆ ನಿವಾಸಿ. ಜಮೀರ್ ಪಾಷನನ್ನು ಮದುವೆಯಾಗಬೇಕೆಂದು ತನ್ನ ಕಟ್ಟಿಕೊಂಡಿದ್ದ ಗಂಡನನ್ನು ಬಿಟ್ಟು ಸೋನಿಯಾ ಶರ್ಮಾ ದೂರದ ಗುವಾಹಟಿಯಿಂದ ಬಂಗಾರುಪೇಟೆಯವರೆಗೂ ಬಂದಿದ್ದಾಳೆ. ಸೋನಿಯಾ ಶರ್ಮಾಳನ್ನು ಮದುವೆಯಾಗುವುದಾಗಿ ಜಮೀರ್ ಪಾಷ ನಂಬಿಸಿದ್ದಾನೆ.  ಬಂಗಾರುಪೇಟೆ ತಾಲ್ಲೂಕಿನ ನ್ಯೂ ಟೌನ್ ಬಡಾವಣೆಯ ಜಮೀರ್ ಪಾಷ ಮನೆಗೆ ಬಂದ ಸೋನಿಯಾ ಶರ್ಮಾ, ಕಳೆದ ಕೆಲ ದಿನಗಳಿಂದ ಜಮೀರ್ ಪಾಷ ಮನೆಯಲ್ಲೇ ಇದ್ದಳು.

ಆದರೇ, ಜಮೀರ್ ಪಾಷ ಈಕೆಯನ್ನು ಮದುವೆಯಾಗಿಲ್ಲ. ಈಕೆ ಅಸ್ಸಾಂನಿಂದ ಚಿನ್ನಾಭರಣ , ದುಡ್ಡು ತಂದಿದ್ದಳು.  ಅದೆಲ್ಲವನ್ನೂ ಜಮೀರ್ ಪಾಷ ಕಿತ್ತುಕೊಂಡು ಚಿತ್ರಹಿಂಸೆ ನೀಡಿದ್ದಾನೆ.  ಮನೆಯೊಳಗೆ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರಂತೆ.  ಹೀಗಾಗಿ ಜಮೀರ್ ಪಾಷ ಜೊತೆ ಮದುವೆಯಾಗಲು ಸಾಧ್ಯವಿಲ್ಲ. ಆತನ ಮನೆಯಲ್ಲಿ ಇರಲು ಕೂಡ ಸಾಧ್ಯವಿಲ್ಲ ಎಂಬುದು ಸೋನಿಯಾ ಶರ್ಮಾಗೆ ಅರಿವಾಗಿದೆ. ಜಮೀರ್ ಪಾಷನ ಮನೆಯಿಂದ ತಪ್ಪಿಸಿಕೊಂಡು ಸೀದಾ  ಬಂಗಾರುಪೇಟೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ.   ಮಹಿಳೆಯನ್ನು ರಕ್ಷಿಸಿದ ಬಂಗಾರುಪೇಟೆ ಪೊಲೀಸರು ಸೋನಿಯಾ ಶರ್ಮಾಳನ್ನು ಮಹಿಳಾ ನಿರಾಶ್ರಿತರ ಕೇಂದ್ರಕ್ಕೆ ಕಳಿಸಿದ್ದಾರೆ. 

Assam lady in kolar (1)



ಸೋನಿಯಾ ಶರ್ಮಾಳ ಇನ್ಸಟಗ್ರಾಮ್ ಲವ್ ಸ್ಟೋರಿ ಈಗ ಫೈಲ್ಯೂರ್ ಸ್ಟೋರಿಯಾಗಿ ಪರಿವರ್ತನೆಯಾಗಿದೆ. ಇನ್ಸಟಗ್ರಾಮ್ ಲವ್ ಚಾಟ್ ಅನ್ನೇ ನಂಬಿದ್ದ ಸೋನಿಯಾ ಶರ್ಮಾಗೆ ತಾನು ಮೋಸ  ಹೋಗಿರುವ ಅರಿವಾಗಿದೆ. ಇನ್ಸಟಗ್ರಾಮ್ ನಲ್ಲಿ ಮರಳು ಮಾಡುವವರ ಬಗ್ಗೆಯೇ ಜನರು ಎಚ್ಚರಿಕೆಯಿಂದ ಇರಬೇಕು. 

ಇದನ್ನೂ ಓದಿ:ಹನಿಮೂನ್​ಗೆ ಹೋದ ಹೆಂಡತಿಗೆ ಕಾದಿತ್ತು ಶಾಕ್.. ಮಧುಚಂದ್ರದಲ್ಲಿ ಗಂಡಂದಿರು ನಾಪತ್ತೆ! ಗಂಡ ಮಾಡಿದ್ದೇನು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

instagram love story
Advertisment