ಸುಪ್ರೀಂಕೋರ್ಟ್ ಜಾಮೀನು ರದ್ದತಿಯಿಂದ ಯಾಱರು ಜೈಲು ಪಾಲಾಗಬೇಕು? ಯಾಱರ ಪಾತ್ರ ಏನು?

ಸುಪ್ರೀಂಕೋರ್ಟ್ ಇಂದು ನಟ ದರ್ಶನ್ ಸೇರಿದಂತೆ ಏಳು ಮಂದಿ ಆರೋಪಿಗಳ ಜಾಮೀನು ರದ್ದುಪಡಿಸಿದೆ. ಏಳು ಮಂದಿಯೂ ಜೈಲು ಪಾಲಾಗಬೇಕಾಗಿದೆ. ಹಾಗಾದರೇ, ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಯಾಱರ ಪಾತ್ರ ಏನು? ಅನ್ನೋದರ ವಿವರ ಇಲ್ಲಿದೆ ನೋಡಿ.

author-image
Chandramohan
DARSHAN_GANG

ರೇಣುಕಾಸ್ವಾಮಿ ಕೊಲೆ ಕೇಸ್ ನ ಆರೋಪಿಗಳು ಇವರೇ

Advertisment
  • ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ 7 ಆರೋಪಿಗಳ ಜಾಮೀನು ರದ್ದು
  • ಕೊಲೆ ಕೇಸ್ ನಲ್ಲಿ 7 ಮಂದಿಯ ಪಾತ್ರ ಏನು? ಯಾಱರು ಜೈಲು ಪಾಲಾಗಬೇಕು?

ಸುಪ್ರೀಂ ಕೋರ್ಟ್ ಇಂದು ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು  ಅನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಏಳು ಮಂದಿಯೂ ಮತ್ತೆ ಜೈಲು ಪಾಲಾಗಬೇಕಾಗಿದೆ. ಹಾಗಾದರೆ ಇಂದು ಸುಪ್ರೀಂ ಕೋರ್ಟ್ ಯಾಱರ ಜಾಮೀನು ರದ್ದಾಗಿದೆ. ಏಳು ಮಂದಿಯ ಪಾತ್ರ ಏನು? ಅನ್ನೋದನ್ನು ಇಲ್ಲಿ ನಾವು ವಿವರಿಸುತ್ತೇವೆ ನೋಡಿ. 

ಇದನ್ನೂ ಓದಿ:ದರ್ಶನ್​​ ಜಾಮೀನು ರದ್ದು ಆಗ್ತಿದ್ದಂತೆ ಕಣ್ಣೀರಿಟ್ಟ ಪತ್ನಿ ವಿಜಯಲಕ್ಷ್ಮೀ..

A1 ಪವಿತ್ರಾಗೌಡ

ನಟ ದರ್ಶನ್​ ಗೆಳತಿ ಪವಿತ್ರಾಗೌಡ.. ಈ ಕೊಲೆ ಕೇಸ್​ನ ಎ1 ಆರೋಪಿ.. ರೇಣುಕಾಸ್ವಾಮಿ ಕೊಲೆಯಾಗಲು ಮೂಲ ಕಾರಣವೇ ಪವಿತ್ರಾಗೌಡ. ಕೃತ್ಯಕ್ಕೆ ಸಂಚು ರೂಪಿಸಿರುವ ಆರೋಪ. ರೇಣುಕಾಸ್ವಾಮಿಗೆ ಚಪ್ಪಲಿಯಿಂದಲೂ ಪವಿತ್ರಾಗೌಡ ಥಳಿಸಿರುವ ಆರೋಪ

A2 ದರ್ಶನ್

ತನ್ನ ಆಪ್ತ ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಮಾಹಿತಿ ತಿಳಿದ ಮೇಲೆ ರೇಣುಕಸ್ವಾಮಿ ಅವರನ್ನು ಅಪಹರಿಸಲು ಸಂಚು ರೂಪಿಸಿದ್ದರು ಎಂಬ ವಿಷಯ ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ. ಪಟ್ಟಣಗೆರೆಯ ಶೆಡ್‌ನಲ್ಲಿ ಕೊಲೆಯಾದ ವ್ಯಕ್ತಿಗೆ ಕಾಲಿನಿಂದ ಒದ್ದಿದ್ದರು. ಅಲ್ಲದೇ ಕೊಲೆ ಪ್ರಕರಣ ಮುಚ್ಚಿ ಹಾಕಲು ನಾಲ್ಕು ಮಂದಿಯನ್ನು ಪೊಲೀಸರಿಗೆ ಶರಣಾಗುವಂತೆ ಹೇಳಿ 30 ಲಕ್ಷಕ್ಕೆ ಡೀಲ್ ನೀಡಿದ್ದರು ಎಂಬುದು ದರ್ಶನ್ ಮೇಲಿರುವ ಆರೋಪ.

A6 ಜಗದೀಶ್‌

ಜಗ್ಗು ಅಲಿಯಾಸ್‌ ಜಗದೀಶ ಚಿತ್ರದುರ್ಗದಲ್ಲಿ ಆಟೊ ಚಾಲಕ. ಅಗಸನಕಲ್ಲು ಬಡಾವಣೆ ನಿವಾಸಿ. ರಾಘವೇಂದ್ರನಿಗೂ ಮೊದಲು ಈತ ದರ್ಶನ್ ತೂಗುದೀಪ ಸೇನಾ ಅಧ್ಯಕ್ಷ. ಸ್ಥಳೀಯವಾಗಿ ದರ್ಶನ್‌ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದ. ದರ್ಶನ್‌ ಭೇಟಿ ಮಾಡಲು ರಾಘವೇಂದ್ರ ಕರೆದಾಗ ಈತ ನೇರವಾಗಿ ತೆರಳಿದ್ದಲ್ಲದೇ, ರೇಣುಕಸ್ವಾಮಿಯನ್ನು ಕರೆದೊಯ್ಯಲು ಸಹಾಯ ಮಾಡಿದ್ದ. ಹಲವು ಸಂದರ್ಭಗಳಲ್ಲಿ ದರ್ಶನ್‌ ಭೇಟಿ ಮಾಡಿ ಫೋಟೊ ತೆಗೆಸಿಕೊಂಡಿದ್ದ. ಮನೆ ತುಂಬೆಲ್ಲಾ ದರ್ಶನ್‌ ಜೊತೆಯಿರುವ ಚಿತ್ರಗಳನ್ನು ಹಾಕಿಕೊಂಡಿರುವ ಈತ ದರ್ಶನ್ ಕಟ್ಟಾ ಅಭಿಮಾನಿ.

A7: ಅನುಕುಮಾರ್‌

ಚಿತ್ರದುರ್ಗದ ಸಿಹಿನೀರು ಹೊಂಡ ಬಡಾವಣೆಯಲ್ಲಿ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದು ವೃತ್ತಿಯಲ್ಲಿ ಆಟೊ ಚಾಲಕ. ರೇಣುಕಸ್ವಾಮಿ ಅಪಹರಣದಲ್ಲಿ ಈತ ರಾಘವೇಂದ್ರನಿಗೆ ಸಹಾಯ ಮಾಡಿದ್ದ. ರೇಣುಕಸ್ವಾಮಿ ಜೊತೆ ಪಟ್ಟಣಗೆರೆ ಶೆಡ್‌ಗೆ ತೆರಳಿದ್ದ ಇವರನ್ನು ಅಲ್ಲಿ ಶೆಡ್‌ನೊಳಗೆ ಬಿಟ್ಟಿರಲಿಲ್ಲ. ರೇಣುಕಸ್ವಾಮಿ ಕೊಲೆಯಾದ ನಂತರ ಕೊಲೆ ತಪ್ಪು ಒ‍ಪ್ಪಿಕೊಳ್ಳುವಂತೆ ದರ್ಶನ್‌ನ ಇತರ ಸಹಚರರು ಒತ್ತಾಯ ಮಾಡಿದ್ದರು. ಅದಕ್ಕೆ ಒಪ್ಪದ ಈತ ಜೂನ್‌ 8ರ ರಾತ್ರಿಯೇ ಚಿತ್ರದುರ್ಗಕ್ಕೆ ವಾಪಸ್‌ ಹೋಗಿದ್ದ. ಈತ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಸುದ್ದಿ ತಿಳಿದ ಈತನ ತಂದೆ ಚಂದ್ರಣ್ಣ ಹೃದಯಾಘಾತದಿಂದ ಮೃತಪಟ್ಟರು.

ಇದನ್ನೂ ಓದಿ: ದರ್ಶನ್​​ ಜಾಮೀನು ರದ್ದು ಆಗ್ತಿದ್ದಂತೆ ಕಣ್ಣೀರಿಟ್ಟ ಪತ್ನಿ ವಿಜಯಲಕ್ಷ್ಮೀ..

A12: ಲಕ್ಷ್ಮಣ್‌

ದರ್ಶನ್‌ ಕಾರು ಚಾಲಕ. ಬೆಂಗಳೂರಿನ ಆರ್‌ಪಿಸಿ ಲೇಔಟ್‌ನಲ್ಲಿ ನೆಲೆಸಿದ್ದ ಈತ ಕೃತ್ಯ ನಡೆದ ಸ್ಥಳದಲ್ಲಿದ್ದ. ಕೊಲೆ ಪ್ರಕರಣದಲ್ಲಿ ದರ್ಶನ್‌ ರಕ್ಷಣೆಗೆ ಮುಂದಾಗಿದ್ದ ಇವನು ದರ್ಶನ್‌ ಬಚಾವ್‌ ಮಾಡಲು ನಾಲ್ವರಿಗೆ ಹಣದ ಆಸೆ ತೋರಿಸಿದ್ದಾನೆ ಎಂಬ ಆರೋಪ ಇದೆ. 

A14: ಪ್ರದೂಷ್‌

ಬೆಂಗಳೂರಿನ ಗಿರಿನಗರ ನಿವಾಸಿ. ದರ್ಶನ್ ಅಭಿಮಾನಿ. ಕೊಲೆ ಪ್ರಕರಣದಲ್ಲಿ ದರ್ಶನ್‌ ರಕ್ಷಣೆ ಮಾಡಲು 30 ಲಕ್ಷ ಪಡೆದಿದ್ದ ಇವನು, ಇತರೆ ನಾಲ್ವರಿಗೆ ನೀಡಿದ್ದ. ಈ ಹಣವನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

A11: ನಾಗರಾಜ್‌

ಮೈಸೂರು ರಾಮಕೃಷ್ಣ ನಗರದ ನಿವಾಸಿ. ಮೈಸೂರು ಸ್ಥಳೀಯ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ. ಕಳೆದ 15 ವರ್ಷಗಳಿಂದ ದರ್ಶನ್‌ ಜತೆಗೆ ಕೆಲಸ ಮಾಡುತ್ತಿದ್ದ. ದರ್ಶನ್‌ ಅವರ ವೈಯಕ್ತಿಕ ಕೆಲಸಗಳನ್ನು ಮಾಡಿಕೊಡುತ್ತಿದ್ದರು. ಮೈಸೂರಿನಲ್ಲಿರುವ ದರ್ಶನ್‌ ಅವರ ಫಾರಂ ಹೌಸ್‌ನಲ್ಲಿ ಇರುತ್ತಿದ್ದ.

ಇದನ್ನೂ ಓದಿ: ಸುಪ್ರೀಂಕೋರ್ಟ್ ಜಾಮೀನು ರದ್ದತಿಯಿಂದ ಯಾಱರು ಜೈಲು ಪಾಲಾಗಬೇಕು? ಯಾಱರ ಪಾತ್ರ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Actor Darshan Murder case Darshan bail cancelled
Advertisment