newsfirstkannada.com

ಧಾರಾಕಾರ ಮಳೆ.. ಸಿಡಿಲು ಬಡಿದು ಆರು ಜನ ಸಾವು

Share :

Published May 7, 2024 at 7:50am

    ನಿನ್ನೆ ದೇಶದಾದ್ಯಂತ ತಂಪನದನೆರೆದದ ವರುಣ ದೇವ

    ಗುಡುಗು-ಮಿಂಚು ಸಹಿತ ಧಾರಾಕಾರವಾಗಿ ಸುರಿದ ಮಳೆ

    ಮಳೆ, ಗುಡುಗಿನಿಂದ ರೈಲು, ವಿಮಾನಯಾನಕ್ಕೆ ಅಡ್ಡಿ

ನಿನ್ನೆ ದೇಶದ ಹಲವೆಡೆ ವರುಣನ ಸಿಂಚನವಾಗಿದೆ. ಗುಡುಗು ಸಹಿತ ಮಳೆ ಸುರಿದಿದೆ. ಆದರೆ ಬಂಗಾಳದಲ್ಲಿ ನಿನ್ನೆ ಗುಡುಗು-ಸಿಡಿಲಿಗೆ ಆರು ಜನರು ಸಾವನ್ನಪ್ಪಿದ್ದಾರೆ.

ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ನಾಡಿಯಾ, ಪುರುಲಿಯಾ, ಪುರ್ಬಾ ಬರ್ಧಮಾನ್​ ಜಿಲ್ಲೆ ಸೇರಿದಂತೆ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಆರು ಜನರು ಗುಡುಗು ಸಿಡಿಲಿಗೆ ಸಾವನ್ನಪ್ಪಿದ್ದಾರೆ. ಮೃತರಾದವರಲ್ಲಿ ದಂಪತಿಗಳು ಸೇರಿದ್ದಾರೆ.

ಇದನ್ನೂ ಓದಿ: ಅಯ್ಯಯ್ಯೋ ಎಂಥಾ ಕಾಲ.. ಧಾರಾಕಾರವಾಗಿ ಸುರಿದ ಮೀನಿನ ಮಳೆ.. ಫಿಶ್​ಗಳನ್ನ ಕ್ಯಾಚ್ ಹಿಡಿದ ಜನ!

ಮಳೆ, ಗುಡುಗು-ಸಿಡಿಲಿನಿಂದಾಗಿ ಈಸ್ಟರ್ನ್​ ರೈಲ್ವೆಯ ಸೀಲ್ದಾಹ್​ನಲ್ಲಿ ರೈಲು ಸೇವೆಯಲ್ಲಿ ಕೊಂಚ ವ್ಯತ್ಯಯ ಕಂಡುಬಂತು. ರಾತ್ರಿ-8ರಿಂದ 9.15ರವರೆಗೆ ರೈಲು ಸಂಚಾರಕ್ಕೆ ಸಮಸ್ಯೆಯಾಯಿತು. ಹವಾಮಾನ ವೈಪರೀತ್ಯದಿಂದ ಕೋಲ್ಕತ್ತಾ ತೆರಳುವ ವಿಮಾನಗಳು ಕೂಡ ರದ್ದಾದವು.

ಇನ್ನು ಕೋಲ್ಕತ್ತಾದಲ್ಲಿ ಬಿಸಿಲಿನಿಂದ ಗರಿಷ್ಠ ತಾಪಮಾನ 43ಕ್ಕೆ ಏರಿತ್ತು. 50 ವರ್ಷದಲ್ಲಿ ಇದೇ ಮೊದಲು ಇಷ್ಟೊಂದು ಗರಿಷ್ಠ ತಾಪಮಾನವಾಗಿದೆ ಎಂದು ಹವಾಮಾನ ಇಳಾಖೆ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧಾರಾಕಾರ ಮಳೆ.. ಸಿಡಿಲು ಬಡಿದು ಆರು ಜನ ಸಾವು

https://newsfirstlive.com/wp-content/uploads/2024/05/Thunderstrome.jpg

Load More