newsfirstkannada.com

ಸ್ವಂತ ಮನೆಯಿಲ್ಲ, ಸ್ವಂತ ಕಾರು ಇಲ್ಲ.. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಒಟ್ಟು ಆಸ್ತಿ ಎಷ್ಟು ಗೊತ್ತಾ?

Share :

Published February 16, 2024 at 6:39pm

    ಕಳೆದ 5 ವರ್ಷದ ಅವಧಿಯಲ್ಲಿ ಶೇಕಡ 5.89ರಷ್ಟು ಸಂಪತ್ತು ಏರಿಕೆ

    ಸೋನಿಯಾ ಗಾಂಧಿಗೆ ಭಾರತದಲ್ಲಿ ಮನೆ ಇಲ್ಲ, ವಾಹನವೂ ಇಲ್ಲ

    ದೆಹಲಿಯ ರೋಸ್ ಅವೆನ್ಯೂ ಕೋರ್ಟ್​ನಲ್ಲಿ ಕೇಸ್ ದಾಖಲು!

ನವದೆಹಲಿ: ಕಾಂಗ್ರೆಸ್‌ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಇದೇ ಮೊದಲ ಬಾರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ರಾಜಸ್ಥಾನದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸೋನಿಯಾ ಗಾಂಧಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಜೊತೆಗೆ ಸೋನಿಯಾ ಗಾಂಧಿ ಅವರು ತಮ್ಮ ಒಟ್ಟು ಆಸ್ತಿ ಮೌಲ್ಯ ಎಷ್ಟು ಅನ್ನೋದನ್ನ ಘೋಷಣೆ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ’ನನ್ನ ಉಸಿರು ಇರೋವರ್ಗೂ ನಿನ್ನ ಒಂದ್​​ ಹನಿ ರಕ್ತ ಸೋಕೋಕು ಬಿಡಲ್ಲ’- ಜೈ ಶ್ರೀರಾಮ್​ ಎಂದ ದರ್ಶನ್​​!

2024 ರಾಜ್ಯಸಭಾ ಚುನಾವಣೆಗೂ ಮುನ್ನ ತಮ್ಮ ಅಫಿಡವಿಟ್‌ನಲ್ಲಿ ಸೋನಿಯಾ ಗಾಂಧಿ ಅವರು ಆಸ್ತಿ ಮೌಲ್ಯ 12.53 ಕೋಟಿ ರೂಪಾಯಿ ಎಂದು ಉಲ್ಲೇಖಿಸಲಾಗಿದೆ. ಆದರೆ ಸೋನಿಯಾ ಗಾಂಧಿಗೆ ಭಾರತದಲ್ಲಿ ಒಂದೇ ಒಂದು ಸ್ವಂತ ಮನೆ ಕೂಡ ಇಲ್ಲ. ಇದರ ಜತೆಗೆ ಸ್ವಂತ ವಾಹನವೂ ಇಲ್ಲ. ಭಾರತದಲ್ಲಿ ಸ್ವಂತ ಮನೆ ಇಲ್ಲದ ಸೋನಿಯಾ ಗಾಂಧಿ ಅವರಿಗೆ ಇಟಲಿಯಲ್ಲಿ ವಂಶಪಾರಂಪರ್ಯವಾಗಿ 27 ಲಕ್ಷ ರೂ ಮೌಲ್ಯದ ಮನೆಯ ಮಾಲಕಿಯಾಗಿದ್ದಾರೆ. ಇದರ ಜೊತೆಗೆ 6.38 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಸೋನಿಯಾ ಗಾಂಧಿ ಅವರು 1.07 ಕೋಟಿ ರೂ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. 57 ಲಕ್ಷ ರೂಪಾಯಿ ಮೌಲ್ಯದ 88 ಕೆಜಿ ಬೆಳ್ಳಿ ಹೊಂದಿದ್ದಾರೆ. 49.95 ಲಕ್ಷ ರೂ ಮೌಲ್ಯದ 1,267 ಗ್ರಾಂ ಚಿನ್ನವನ್ನು ಹೊಂದಿದ್ದಾರೆ. ದೆಹಲಿಯ ದೇರಾ ಮಂಡಿ ಗ್ರಾಮದಲ್ಲಿ 2,529 ಚದರ ಮೀಟರ್ 5.88 ಕೋಟಿ ಮೌಲ್ಯದ ಭೂಮಿ ಹೊಂದಿದ್ದಾರೆ. ಕಳೆದ 5 ವರ್ಷದ ಅವಧಿಯಲ್ಲಿ ಸೋನಿಯಾ ಗಾಂಧಿ ಸಂಪತ್ತು 72 ಲಕ್ಷ ರೂ.ಗೆ ಏರಿಕೆಯಾಗಿದೆ. 2014ರಲ್ಲಿ ಸೋನಿಯಾ ಗಾಂಧಿ 9.28 ಕೋಟಿ ರೂ. ಸಂಪತ್ತು ಹೊಂದಿದ್ದರು. 2019ರಲ್ಲಿ 11.82 ಕೋಟಿ ರೂ., 2024ರಲ್ಲಿ 12.53 ಕೋಟಿ ರೂ. ಸಂಪತ್ತು ಹೊಂದಿದ್ದಾರೆ. ಕಳೆದ 5 ವರ್ಷದ ಅವಧಿಯಲ್ಲಿ ಶೇ.5.89 ರಷ್ಟು ಸಂಪತ್ತು ಏರಿಕೆಯಾಗಿದೆ.

ತಮ್ಮ ವಿರುದ್ಧ ದೆಹಲಿಯ ರೋಸ್ ಅವೆನ್ಯೂ ಕೋರ್ಟ್​ನಲ್ಲಿ ಮಾತ್ರ ಕೇಸ್ ದಾಖಲಾಗಿದೆ. ನ್ಯಾಷನಲ್ ಹೆರಾಲ್ಡ್ ಕೇಸ್​ನಲ್ಲಿ ಸೋನಿಯಾ ಗಾಂಧಿ ಆರೋಪಿಯಾಗಿದ್ದಾರೆ. ಆದರೆ ಯಾವುದೇ ಪ್ರಕರಣದಲ್ಲೂ ಶಿಕ್ಷೆಗೊಳಗಾಗಿಲ್ಲ ಎಂದು ಅಫಿಡವಿಟ್ ಉಲ್ಲೇಖಿಸಲಾಗಿದೆ. ರಾಜಸ್ಥಾನದಿಂದ ರಾಜ್ಯಸಭಾ ಅಭರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವ ಸೋನಿಯಾ ಗಾಂಧಿ ನಾಮಪತ್ರದ ಜೊತೆಗೆ ಅಫಿಡವಿಟ್ ಕೂಡ ಸಲ್ಲಿಸಿದ್ದಾರೆ. ರಾಜಸ್ಥಾನದಿಂದ ರಾಜ್ಯಸಭಾ ಚುನಾವಣಾಧಿಕಾರಿಗೆ ಸೋನಿಯಾ ಗಾಂಧಿ ಅವರು ಸಂಪೂರ್ಣ ಆಸ್ತಿ ಹಾಗೂ ಕೇಸ್ ಬಗ್ಗೆ ಅಫಿಡವಿಟ್ ಮಾಹಿತಿ ನೀಡಿದ್ದಾರೆ.

ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದ ವೇಳೆ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹೋಟ್ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಕೂಡ ಉಪಸ್ಥಿತರಿದ್ದರು. ಫೆಬ್ರವರಿ 8ರಿಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಫೆಬ್ರವರಿ 16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ನಾಮಪತ್ರವನ್ನ ಫೆಬ್ರವರಿ 20ರವರೆಗೆ ಹಿಂಪಡೆಯಲು ಸಾಧ್ಯವಾಗುತ್ತದೆ. ಫೆ.27ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5ರಿಂದ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರ ಬೀಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ವಂತ ಮನೆಯಿಲ್ಲ, ಸ್ವಂತ ಕಾರು ಇಲ್ಲ.. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಒಟ್ಟು ಆಸ್ತಿ ಎಷ್ಟು ಗೊತ್ತಾ?

https://newsfirstlive.com/wp-content/uploads/2024/02/soniya-gandi-1.jpg

Load More