/newsfirstlive-kannada/media/post_attachments/wp-content/uploads/2024/06/NARENDRA-MODI-2.jpg)
ಇಡೀ ದೇಶದ ಜನತೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಬಹುನಿರೀಕ್ಷಿತ 2024ರ ಲೋಕಸಭೆ ಚುನಾವಣಾ ಫಲಿತಾಂಶ ಹೊರಬಿದಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ, ಪ್ರಧಾನಿ ನರೇಂದ್ರ ಮೋದಿ ಅವರ ಲೆಕ್ಕಾಚಾರಗಳು ಹಾಗೂ ಮತದಾನೋತ್ತರ ಸಮೀಕ್ಷೆಗಳ ಭವಿಷ್ಯವನ್ನು ಮತದಾರ ಪ್ರಭು ತಲೆಕೆಳಗೆ ಮಾಡಿದ್ದಾನೆ.
ಐತಿಹಾಸಿಕ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವಷ್ಟು ಸರಳ ಬಹುಮತವನ್ನು ಎನ್‌ಡಿಎ ಪಡೆದಿದೆ. 400 ಕ್ಷೇತ್ರಗಳನ್ನು ಗೆಲ್ಲುವ ಪ್ರಧಾನಿ ಮೋದಿಯ ಕನಸು ಭಗ್ನವಾಗಿದೆ. 543 ಸಂಖ್ಯಾಬಲದ ಲೋಕಸಭೆಯಲ್ಲಿ ಅಧಿಕಾರ ಹಿಡಿಯಲು 272 ಸ್ಥಾನಗಳ ಬೇಕು. ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಸ್ಪಷ್ಟ ಬಹುಮತ ಪಡೆದಿಲ್ಲ. ಆದರೆ ಎನ್‌ಡಿಎಗೆ ಸರಳ ಬಹುಮತ ಸಿಕ್ಕಿದೆ. ಎನ್‌ಡಿಎ 293, ಇಂಡಿಯಾ ಒಕ್ಕೂಟ 233 ಹಾಗೂ ಇತರೆ 17 ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿದೆ.
ಇದನ್ನೂ ಓದಿ:4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್ ಬೇರೆಯದ್ದೇ ಕತೆ ಹೇಳ್ತಿದೆ..!
ಎನ್‌ಡಿಎಗೆ ಶಕ್ತಿ ತುಂಬಿದ ಕೈಗಳಿಗೆ ‘ನಮೋ’ ಧನ್ಯವಾದ
2014.. 2019ರಲ್ಲಿ ಪ್ರಚಂಡ ಜಯಗಳಿಸಿದ್ದ ಕೇಸರಿ ಪಡೆ 2024ರ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ದೊಡ್ಡಮಟ್ಟದ ಗೆಲುವು ಸಿಕ್ಕಿಲ್ಲ. ಕಳೆದ 2 ಬಾರಿ ಕೊಟ್ಟಷ್ಟು ಖುಷಿಯನ್ನು ಮತದಾರ ಕೊಡದೇ ಇದ್ರೂ. ಸರ್ಕಾರ ರಚಿಸುವಷ್ಟು ಶಕ್ತಿಯನ್ನ ಮೋದಿ ಕೈಗೆ ದೇಶವಾಸಿಗಳು ನೀಡಿದ್ದಾರೆ. ಬಿಜೆಪಿ ಏಕಾಂಗಿಯಾಗಿ 241 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕ ಕದನದಲ್ಲಿ ಭರ್ಜರಿ ಗೆಲುವು ಹಿನ್ನೆಲೆ ನವ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಜೋರಾಗಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದ್ರು. ಪ್ರಧಾನಿ ಮೋದಿ ಬಿಜೆಪಿ ಕಚೇರಿಗೆ ಆಗಮಿಸಿದಾಗ ಕಾರ್ಯಕರ್ತರ ಹರ್ಘೋದ್ಘಾರ ಮುಗಿಲುಮುಟ್ಟಿತ್ತು.
ಸಂಭ್ರಮಾಚರಣೆ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಮತ್ತೊಮ್ಮೆ ದೇಶದ ಚುಕ್ಕಾಣಿ ನೀಡಿದ ದೇಶವಾಸಿಗಳಿಗೆ ನಮೋ ಧನ್ಯವಾದ ತಿಳಿಸಿದ್ರು.. ಲೋಕಸಭೆ ಚುನಾವಣಾ ಫಲಿತಾಂಶವು ದೇಶದ ಜನರು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ನಂಬಿಕೆಯ ಗೆಲುವು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ರು.
ಇದನ್ನೂ ಓದಿ:ಕರುಳ ಕುಡಿಯ ಒಂದು ಮಾಡಿದ ಪಾಠಶಾಲಾ.. 20 ವರ್ಷದ ನಂತರ ಪ್ರತ್ಯಕ್ಷನಾದ ಮಗನ ತಬ್ಬಿ ಕಣ್ಣೀರಿಟ್ಟ ಅವ್ವ..
ಈ ಶುಭ ದಿನ ಎನ್‌ಡಿಎ ಮೂರನೇ ಬಾರಿ ಸರ್ಕಾರ ರಚನೆಗೆ ತಯಾರಾಗಿದೆ. ನಾವೆಲ್ಲರೂ ಜನರಿಗೆ ಅಭಾರಿಯಾಗಿದ್ದೇವೆ. ದೇಶದ ಜನರು ಬಿಜೆಪಿ ಮತ್ತು ಎನ್‌ಡಿಎ ಮೇಲೆ ಪೂರ್ಣ ಪ್ರಮಾಣದ ಆತ್ಮವಿಶ್ವಾಸವನ್ನು ತೋರಿಸಿದ್ದಾರೆ. 1962ರ ಬಳಿಕ ಇದೇ ಮೊದಲ ಬಾರಿಗೆ ಒಂದು ಸರ್ಕಾರಕ್ಕೆ ಕೇಂದ್ರದಲ್ಲಿ 3ನೇ ಬಾರಿಗೆ ಬಹುಮತ ದೊರೆತಿದೆ -ನರೇಂದ್ರ ಮೋದಿ, ಪ್ರಧಾನ ಮಂತ್ರಿ
ಮೋದಿಯ ಕೈ ಹಿಡಿದಿದ್ದೇ ಒಡಿಶಾ, ಆಂಧ್ರ, ತೆಲಂಗಾಣ
2019ರಲ್ಲಿ ಮೋದಿ ಅಲೆಯಲ್ಲಿ ಬಿಜೆಪಿ ಏಕಾಂಗಿಯಾಗಿಯೇ 303 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಚುನಾವಣೆಯಲ್ಲೂ ಗೆಲುವಿನ ಅತ್ಯುತ್ಸಾಹದಲ್ಲೇ ಪ್ರಧಾನಿ ನರೇಂದ್ರ ಮೋದಿ 400ರ ಗಡಿದಾಟುವ ಮಹಾಘೋಷಣೆ ಮೊಳಗಿಸಿದ್ದರು.. ಆದ್ರೆ ಮೋದಿ ಲೆಕ್ಕಾಚಾರವೆನ್ನೆಲ್ಲ ಮತದಾರ ಉಲ್ಟಾ ಮಾಡಿದ್ದಾನೆ. ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಈ ಭಾರೀ ಬಿಜೆಪಿಗೆ ದೊಡ್ಡ ಪೆಟ್ಟು ಬಿದ್ದಿದೆ. ಇದರ ಪರಿಣಾಮವೇ ಕಳೆದ ಬಾರಿಗಿಂತ ಈ ಬಾರಿ 63 ಸ್ಥಾನಗಳನ್ನು ಕಳೆದುಕೊಂಡಿದೆ. ಒಂದ್ವೇಳೆ ಒಡಿಶಾ, ಆಂಧ್ರ, ತೆಲಂಗಾಣದಲ್ಲಿ ಮತದಾರರು ಬಿಜೆಪಿಯ ಕೈಯನ್ನು ಹಿಡಿದಿದ್ರೆ ಕಮಲ ಪಾಳಯದ ಪರಿಸ್ಥಿತಿ ಮತ್ತಷ್ಟು ಶೋಚನಿಯವಾಗಿರುತ್ತಿತ್ತು. ಆದ್ರೆ, ಈ ಮೂರು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಹೆಚ್ಚಿನ ಸ್ಥಾನ ಸಿಕ್ಕ ಫಲವೇ.. ಪ್ರಧಾನಿ ಮೋದಿ ಸತತ ಮೂರನೇ ಬಾರಿ ಪ್ರಧಾನಿಯಾಗಲು ಕಾರಣ ಅಂದ್ರೂ ತಪ್ಪಾಗೋದಿಲ್ಲ.
ಇದನ್ನೂ ಓದಿ:ಚಹಾ ಹೀರುವ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ ಅಲ್ಲ.. ಯಾವ ದೇಶದಲ್ಲಿ ಹೆಚ್ಚು ಫೇಮಸ್ ಗೊತ್ತಾ..?
ಒಟ್ಟಾರೆ, ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡ್ತಿದ್ದ ಭಾರತ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಮಿತ್ರಪಕ್ಷಗಳ ಜೊರೆ ಸೇರಿ ಬಿಜೆಪಿ 3ನೇ ಬಾರಿ ಅಧಿಕಾರಕ್ಕೇರಲು ಸರ್ವ ಸನ್ನದ್ಧವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ