Advertisment

ಘಟಪ್ರಭಾ ನದಿ ದಾಟುವ ವೇಳೆ ಅವಘಡ.. 13 ಜನರನ್ನು ಹೊತ್ತು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿ

author-image
AS Harshith
Updated On
ಘಟಪ್ರಭಾ ನದಿ ದಾಟುವ ವೇಳೆ ಅವಘಡ.. 13 ಜನರನ್ನು ಹೊತ್ತು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿ
Advertisment
  • ಕೂಲಿಗಾಗಿ ಟ್ರ್ಯಾಕ್ಟರ್​ ಏರಿ ಹೊರಟಿದ್ದ 13 ಜನರು
  • ನದಿ ದಾಟುವ ವೇಳೆ ಮಗುಚಿ ಬಿದ್ದ ಟ್ರ್ಯಾಕ್ಟರ್​ ಮತ್ತು ಟ್ರೈಲರ್​
  • ಸ್ಥಳದಲ್ಲಿ ಸೂತಕದ ಛಾಯೆ.. ಮುಂದುವರೆದ ಶೋಧಕಾರ್ಯ

ಬೆಳಗಾವಿ: ನದಿ ದಾಟುವ ವೇಳೆ 13 ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಮಗುಚಿಬಿದ್ದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

Advertisment

ಬಾಗಲಕೋಟೆ ಜಿಲ್ಲೆಯ ನಂದಗಾಂವ್ ಗ್ರಾಮದ ಮಧ್ಯೆ ಇರುವ ಬ್ರಿಡ್ಜ್ ಕಮ್ ಬ್ಯಾರೇಜ್​ನಲ್ಲಿ ಅವಘಡ ಸಂಭವಿಸಿದೆ. ಘಟಪ್ರಭಾ ನದಿ ದಾಟುವ ವೇಳೆ ಆಯತಪ್ಪಿ ನದಿಗೆ ಟ್ರ್ಯಾಕ್ಟರ್​ ಉರುಳಿ ಬಿದ್ದಿದೆ. ಟ್ರ್ಯಾಕ್ಟರ್​​ನಲ್ಲಿ 13 ಜನರಿದ್ದರು. ಅದರಲ್ಲಿ 12 ಜನರು ಈಜಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಓರ್ವ ಕಣ್ಮರೆಯಾಗಿದ್ದಾರೆ.

ಇದನ್ನೂ ಓದಿ: ನಿಯಂತ್ರಣ ತಪ್ಪಿ ಖಾಸಗಿ ಬಸ್​ ಪಲ್ಟಿ.. 20ಕ್ಕೂ ಅಧಿಕ ಪ್ರಯಾಣಿಕರಿಗೆ ತೀವ್ರ ಗಾಯ

ಕೂಲಿಗಾಗಿ ಹೊರಟಿದ್ದರು

13 ಜನರು ಅವರಾದಿಯಿಂದ ನಂದಗಾಂವ್ ಗೆ ಟ್ರ್ಯಾಕ್ಟರ್​ ಮೇಲೆ ಕುಳಿತುಕೊಂಡು ಕೂಲಿ ಕೆಲಸಕ್ಕೆಂದು‌ ತೆರಳುತ್ತಿದ್ದರು. ಘಟಪ್ರಭಾ ನದಿ ದಾಟಿಕೊಂಡು ಕೂಲಿ ಕೆಲಸಕ್ಕೆ ಹೋಗಬೇಕಿತ್ತು. ಆದರೆ ಈ ವೇಳೆ ಟ್ರೈಲರ್ ಸಮೇತ ಟ್ರ್ಯಾಕ್ಟರ್ ನೀರಿಗೆ ಮಗುಚಿ ಬಿದ್ದಿದೆ.

Advertisment

publive-image

ಇದನ್ನೂ ಓದಿ: ಮಗನ ಪಿಂಡ ಬಿಟ್ಟು ಬರುವ ವೇಳೆ ಅಪಘಾತ.. ಬಸ್​ಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು

ಸೂತಕದ ವಾತಾವರಣ

ಸದ್ಯ ಘಟನೆಯ ಸ್ಥಳದಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ. ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  ನೀರಲ್ಲಿ ಕಣ್ಮರೆಯಾಗಿರುವ ಓರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment