newsfirstkannada.com

ಮಗನ ಪಿಂಡ ಬಿಟ್ಟು ಬರುವ ವೇಳೆ ಅಪಘಾತ.. ಬಸ್​ಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು

Share :

Published June 9, 2024 at 11:04am

  ನಿಂತಿದ್ದ ಬಸ್​ಗೆ ಡಿಕ್ಕಿ ಹೊಡೆದ ಕಾರು.. ಇಬ್ಬರು ಸ್ಥಳದಲ್ಲೇ ಸಾವು

  ಪಂಚರ್​ ಆಗಿದ್ದ ಟೈರ್​ ಬದಲಾಯಿಸುವ ವೇಳೆ ಬಸ್​-ಕಾರು ಅಪಘಾತ

  ಬಸ್​ಗೆ ಗುದ್ದಿದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜುಗೊಂಡ ಕಾರು

ಕಾರೊಂದು ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಮೀರತ್​ನ ದೆಹಲಿ-ಡೆಹ್ರಾಡೂನ್​ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ.

ಹರಿದ್ವಾರದಿಂದ ಬರುತ್ತಿದ್ದ ಕಾರೊಂದು ವಲೀದ್​​​ಪುರ ಗ್ರಾಮದ ಮುಂಭಾಗದ ರಸ್ತೆ ಬದಿ ನಿಂತಿದ್ದ ಬಸ್​ಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪಂಚರ್​ ಆಗಿದ್ದ ಬಸ್​ ಟೈರ್​ ಬದಲಿಸುವ ವೇಳೆ ಅಪಘಾತ ಸಂಭವಿಸಿದೆ. ಪರಿಣಾಮ ಕಾರು ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ರೈತರಿಗೆ ಸಂತಸದ ಸುದ್ದಿ.. ಬ್ಯಾಂಕ್​ ಖಾತೆಗೆ 101.61 ಕೋಟಿ ರೂಪಾಯಿ ಬೆಳೆ ವಿಮೆ ಹಣ ಜಮಾ

ಸಾವನ್ನಪ್ಪಿದ್ದ ಮಗನ ಚಿತಾಭಸ್ಮವನ್ನು ಹರಿದ್ವಾರದಲ್ಲಿ ಬಿಟ್ಟು ಕಾರಿನಲ್ಲಿ ಹಿಂತಿರುಗುತ್ತಿದ್ದರು. ರಾತ್ರಿ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: VIDEO: ಪಿಜ್ಜಾ ತಿನ್ನುವುದರಲ್ಲೇ ಮಗ್ನಳಾಗಿದ್ದ ಮಹಿಳೆ.. ಸರ​ ಕಸಿದು ಪರಾರಿಯಾದ ಖತರ್ನಾಕ್​ ಕಳ್ಳ

ಕಾರಿನಲ್ಲಿದ್ದವರು ದೆಹಲಿ ಮೂಲಕ ವಿಜಯ್​ ಪಾರ್ಕ್​ನ ಮೌಜ್​ಪುರದವರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. 6 ತಿಂಗಳ ಬಾಲಕಿಯೊಬ್ಬಳು ಯಾವುದೇ ಪ್ರಾಣಪಾಯದಿಂದ ಬಚಾವ್​ ಆಗಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗನ ಪಿಂಡ ಬಿಟ್ಟು ಬರುವ ವೇಳೆ ಅಪಘಾತ.. ಬಸ್​ಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು

https://newsfirstlive.com/wp-content/uploads/2024/06/Meerut-1.jpg

Load More