newsfirstkannada.com

ಉತ್ತರಾಖಂಡದಲ್ಲಿ ದುರಂತ: ಗೂಗಲ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಬೆಂಗಳೂರಿನ ಯುವತಿ ಸಾವು

Share :

Published June 6, 2024 at 2:02pm

    ಉತ್ತರಾಖಂಡಕ್ಕೆ ಟ್ರಕ್ಕಿಂಗ್‌ಗೆ ತೆರಳಿದ್ದ 9 ಮಂದಿ ಕನ್ನಡಿಗರ ಸಾವು

    ಜೂ‌ನ್ 4ರಂದು ತಾಯಿಗೆ ಕೊನೆಯ ಬಾರಿ ಸಂಪರ್ಕ ಮಾಡಿದ್ದ ಯುವತಿ

    ಡೆಹ್ರಾಡೂನ್‌ನಿಂದ ಮೃತರ ಶವಗಳನ್ನು ರಾಜ್ಯಕ್ಕೆ ಏರ್‌ ಲಿಫ್ಟಿಂಗ್

ಶಿರಸಿ: ಉತ್ತರಾಖಂಡಕ್ಕೆ ಟ್ರಕ್ಕಿಂಗ್‌ಗೆ ತೆರಳಿದ್ದ 9 ಮಂದಿ ಕನ್ನಡಿಗರು ದಾರುಣವಾಗಿ ಸಾವನ್ನಪ್ಪಿದ್ದಾರೆ. 9 ಮಂದಿಯ ಶವ ಪತ್ತೆಯಾಗಿದೆ ಎಂದು ಉತ್ತರಾಖಂಡ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಮಾಹಿತಿ ನೀಡಿದೆ. ಡೆಹ್ರಾಡೂನ್‌ನಿಂದ ಮೃತರ ಶವಗಳನ್ನು ಕರ್ನಾಟಕ ರಾಜ್ಯಕ್ಕೆ ಏರ್‌ ಲಿಫ್ಟಿಂಗ್ ಮಾಡಲಾಗುತ್ತಿದೆ.

ಉತ್ತರಾಖಂಡ ಚಾರಣಿಗರು ದುರಂತಕ್ಕೀಡಾದ ಪ್ರಕರಣದಲ್ಲಿ ಶಿರಸಿ ಮೂಲದ ಪದ್ಮಿನಿ ಹೆಗಡೆ ಕೂಡ ಒಬ್ಬರು. 35 ವರ್ಷದ ಪದ್ಮಿನಿ ಅವರು ಶಿರಸಿ ತಾಲೂಕಿನ ಜಾಗನಹಳ್ಳಿಯವರು. ವಿಪತ್ತು ನಿರ್ವಹಣ ಪ್ರಾಧಿಕಾರ ಇಂದು ಪದ್ಮಿನಿ ಹೆಗಡೆ ಅವರು ಚಾರಣದ ವೇಳೆ ಮೃತಪಟ್ಟಿರುವ ಮಾಹಿತಿ ನೀಡಿದ್ದಾರೆ.

ಶಿರಸಿ ಮೂಲದ ಪದ್ಮಿನಿ ಹೆಗಡೆ ಅವರು ಬೆಂಗಳೂರಲ್ಲಿ ಗೂಗಲ್ ಕಂಪನಿಯ ಉದ್ಯೋಗಿ ಆಗಿದ್ದರು. ಕಳೆದ ಮೇ 29ರಿಂದ ಜೂನ್ 7 ರವರೆಗೆ ಉತ್ತರಾಖಂಡದ ಭಟವಾಡಿ, ಮಲ್ಲಾ-ಸಿಲ್ಲಾ, ಕುಶಕಲ್ಯಾಣ, ಸಹಸ್ರ ತಾಲ್‌ಗೆ ಟ್ರಕ್ಕಿಂಗ್ ಮಾಡಲು ಇವರು ಅನುಮತಿ ಪಡೆದಿದ್ದರು.

ಇದನ್ನೂ ಓದಿ: ಉತ್ತರಾಖಂಡ್‌ ದುರಂತದಲ್ಲಿ 9 ಕನ್ನಡಿಗರ ದುರ್ಮರಣ; ಇಂದು ಬೆಳಗ್ಗೆ ಮತ್ತೆ ನಾಲ್ವರ ಮೃತದೇಹ ಪತ್ತೆ 

ಪದ್ಮಿನಿ ಅವರು ಕಳೆದ ಜೂ‌ನ್ 4ರಂದು ಮುಂಬೈನಲ್ಲಿ ಇದ್ದ ತಾಯಿಗೆ ಕೊನೆಯ ಬಾರಿ ಸಂಪರ್ಕ ಮಾಡಿದ್ದರು. ಇದಾದ ಬಳಿಕ ನಾಪತ್ತೆಯಾಗಿದ್ದಾರೆ ಅನ್ನೋ ಮಾಹಿತಿ ಕುಟುಂಬಕ್ಕೆ ಲಭ್ಯವಾಗಿತ್ತು. ಇದೀಗ ಪದ್ಮಿನಿ ಹೆಗಡೆ ಅವರು ಮೃತದೇಹವೂ ಪತ್ತೆಯಾಗಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರಾಖಂಡದಲ್ಲಿ ದುರಂತ: ಗೂಗಲ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಬೆಂಗಳೂರಿನ ಯುವತಿ ಸಾವು

https://newsfirstlive.com/wp-content/uploads/2024/06/Uttarakhand-Rescue-Operation-2.jpg

Load More