newsfirstkannada.com

ಉತ್ತರಾಖಂಡ್‌ ದುರಂತದಲ್ಲಿ 9 ಕನ್ನಡಿಗರ ದುರ್ಮರಣ; ಇಂದು ಬೆಳಗ್ಗೆ ಮತ್ತೆ ನಾಲ್ವರ ಮೃತದೇಹ ಪತ್ತೆ

Share :

Published June 6, 2024 at 11:39am

  ಏರ್ ಲಿಫ್ಟ್ ಮೂಲಕ ರಾಜ್ಯಕ್ಕೆ 9 ಮೃತದೇಹವನ್ನು ತರಲು ಸಿದ್ಧತೆ

  ಕನ್ನಡಿಗರ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಂದ ಮಾಹಿತಿ

  9 ಶವಗಳನ್ನು ಬೆಂಗಳೂರಿಗೆ ಸಾಗಿಸಲು ಚಾರ್ಟರ್ ಫ್ಲೈಟ್ ವ್ಯವಸ್ಥೆ

ಉತ್ತರಾಖಂಡ್‌ ರಾಜ್ಯಕ್ಕೆ ಟ್ರಕ್ಕಿಂಗ್‌ಗೆ ಹೋಗಿದ್ದ ಕನ್ನಡಿಗರು ಅಕ್ಷರಶಃ ಕಂಗಾಲಾಗಿದ್ದಾರೆ. ಈಗಾಗಲೇ ದುರಂತದಲ್ಲಿ 9 ಮಂದಿ ಕನ್ನಡಿಗರು ಸಾವನ್ನಪ್ಪಿರೋದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ದುರಂತದಲ್ಲಿ ಸಾವಿಗೀಡಾದ ಕುಟುಂಬಸ್ಥರು ಸರ್ಕಾರದ ಮೊರೆ ಹೋಗಿದ್ದಾರೆ. ರಾಜ್ಯ ಕಂದಾಯ ಸಚಿವ ಕೃಷ್ಣ ಭೈರೇಗೌಡರು ಉತ್ತರಾಖಂಡ ಸರ್ಕಾರದ ಮುಖ್ಯಕಾರ್ಯದರ್ಶಿ ಅವರ ಜೊತೆ ಮಾತುಕತೆ ನಡೆಸಿದ್ದು, ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮೋದಿ ಮುಂದೆ ನಾಯ್ಡು ಭಾರೀ ಡಿಮ್ಯಾಂಡ್.. ದೊಡ್ಡ ದೊಡ್ಡ ಹುದ್ದೆಗಳ ಮೇಲೆ ಕಣ್ಣು.. ಅವು ಯಾವುದು? 

ಉತ್ತರಾಖಂಡನಲ್ಲಿ ಸಾವನ್ನಪ್ಪಿದ ಕನ್ನಡಿಗರ ಮೃತದೇಹವನ್ನ ರಾಜ್ಯಕ್ಕೆ ಸಾಗಿಸಲು ವಿಮಾನ ವ್ಯವಸ್ಥೆ ‌ಕಲ್ಪಿಸುವಂತೆ ಸಚಿವ ಕೃಷ್ಣಭೈರೇಗೌಡರು ಮನವಿ ಮಾಡಿದ್ದಾರೆ. ರಾಜ್ಯ ಸಚಿವರ ಈ ಮನವಿಗೆ ಉತ್ತರಾಖಂಡ ಸರ್ಕಾರ ಸಮ್ಮತಿ ಸೂಚಿಸಿದೆ. ಇಂದು ಉತ್ತರಾಖಂಡದಿಂದ ರಾಜ್ಯಕ್ಕೆ ಮೃತದೇಹಗಳನ್ನು ತರಲು ಸಚಿವ ಕೃಷ್ಣಭೈರೇಗೌಡ ಅವರು ತಯಾರಿ ನಡೆಸಿದ್ದಾರೆ.

ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ಇಂದು ಮಧ್ಯಾಹ್ನ 12 ಗಂಟೆಯೊಳಗೆ ಮೃತದೇಹ ಶಿಫ್ಟ್ ಆಗುವ ಸಾಧ್ಯತೆ ಇದೆ. ನಂತರ ಡೆಹ್ರಾಡೂನ್‌ ಸ್ಥಳೀಯ ಆಸ್ಪತ್ರೆಯಲ್ಲಿ ಮೃತದೇಹಗಳ ಪರೀಕ್ಷೆ ನಡೆಸಿದ ಬಳಿಕ ಬೆಂಗಳೂರಿಗೆ ಮೃತದೇಹಗಳನ್ನು ತರಲು ಸಿದ್ಧತೆ ನಡೆಸಲಾಗಿದೆ. ಏರ್ ಲಿಫ್ಟ್ ಮೂಲಕ ರಾಜ್ಯಕ್ಕೆ 9 ಮೃತದೇಹವನ್ನು ತರಲು ಸಿದ್ಧತೆ ನಡೆಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡರು ತಿಳಿಸಿದ್ದಾರೆ.

ಉತ್ತರಾಖಂಡ ಟ್ರಕ್ಕಿಂಗ್‌ನಲ್ಲಿ ಮೃತಪಟ್ಟ ಎಲ್ಲಾ 9 ಶವಗಳನ್ನು ಬೆಂಗಳೂರಿಗೆ ಸಾಗಿಸಲು ನಾವು ಈಗಾಗಲೇ ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡಿದ್ದೇವೆ. ನಾನೀಗ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಯವರ ಭೇಟಿಗೆ ಹೊರಟಿದ್ದೇನೆ. ಮುಖ್ಯ ಕಾರ್ಯದರ್ಶಿಯವರೊಂದಿಗಿನ ಸಭೆಯ ನಂತರ ಮೃತದೇಹಗಳ ಸಾಗಣೆಯ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: ಟ್ರಕ್ಕಿಂಗ್​ಗೆ ಹೋದವರ ದುರಂತ ಅಂತ್ಯ.. 9 ಜನರ ಪೈಕಿ 4 ಮೃತದೇಹಗಳಿಗಾಗಿ ಮುಂದುವರೆದ ಶೋಧಕಾರ್ಯ 

ಉತ್ತರಾಖಂಡ್‌ನಲ್ಲಿ ಕನ್ನಡಿಗರ ರಕ್ಷಣೆಗೆ ಕ್ರಮಕೈಗೊಂಡಿರುವ ಮಧ್ಯೆ ಇಂದು ಮುಂಜಾನೆ ಇನ್ನೂ 4 ಶವಗಳನ್ನು ಪತ್ತೆ ಮಾಡಲಾಗಿದೆ. 4 ಮೃತದೇಹಗಳನ್ನು ಉತ್ತರಾಕಾಶಿಗೆ ವಿಮಾನದಲ್ಲಿ ರವಾನಿಸಲಾಗಿದೆ.

ಇಂದು ಪತ್ತೆಯಾದ ಮೃತರ ವಿವರ

 1. ಪದ್ಮನಾಭ ಕೆ.ಪಿ
 2. ವೆಂಕಟೇಶ್ ಪ್ರಸಾದ್ ಕೆ
 3. ಅನಿತಾ ರಂಗಪ್ಪ
 4. ಪದ್ಮಿನಿ ಹೆಗ್ಡೆ

ಇನ್ನು, ಜೂನ್ 05ರಂದೇ 5 ಚಾರಣಿಗರ ಮೃತದೇಹಗಳನ್ನು ಉತ್ತರಕಾಶಿಗೆ ವಿಮಾನದಲ್ಲಿ ರವಾನಿಸಲಾಗಿದೆ.

 1. ಸಿಂಧು ವಕೆಲಂ
 2. ಆಶಾ ಸುಧಾಕರ್
 3. ಸುಜಾತಾ ಮುಂಗುರವಾಡಿ
 4. ವಿನಾಯಕ್‌ ಮುಂಗುರವಾಡಿ
 5. ಚಿತ್ರಾ ಪ್ರಣೀತ್

ಜೂನ್ 06ರಂದು ಬೆಳಗ್ಗೆ 5 ಚಾರಣಿಗರನ್ನು ರಕ್ಷಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ವಿಮಾನದ ಮೂಲಕ ರಕ್ಷಿಸಲ್ಪಟ್ಟವರನ್ನು ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ.

 1. ಎಸ್ ಸುಧಾಕರ್
 2. ವಿನಯ್ ಎಂ.ಕೆ
 3. ವಿವೇಕ್ ಶ್ರೀಧರ್
 4. ನವೀನ್ ಎ
 5. ರಿತಿಕಾ ಜಿಂದಾಲ್

ಜೂನ್ 05ರಂದು 8 ಚಾರಣಿಗರನ್ನು ರಕ್ಷಿಸಿ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ. ಅವರ ವಿವರ ಹೀಗಿದೆ.

 1. ಸೌಮ್ಯಾ ಕೆನಾಲೆ
 2. ಸ್ಮೃತಿ ಡೋಲಾಸ್
 3. ಶೀನಾ ಲಕ್ಷ್ಮಿ
 4. ಎಸ್. ಶಿವ ಜ್ಯೋತಿ
 5. ಅನಿಲ್ ಜಮತಿಗೆ ಅರುಣಾಚಲ ಭಟ್
 6. ಭರತ್ ಬೊಮ್ಮನ ಗೌಡರ್
 7. ಮಧು ಕಿರಣ್ ರೆಡ್ಡಿ
 8. ಜೈ ಪ್ರಕಾಶ್ ಬಿ.ಎಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರಾಖಂಡ್‌ ದುರಂತದಲ್ಲಿ 9 ಕನ್ನಡಿಗರ ದುರ್ಮರಣ; ಇಂದು ಬೆಳಗ್ಗೆ ಮತ್ತೆ ನಾಲ್ವರ ಮೃತದೇಹ ಪತ್ತೆ

https://newsfirstlive.com/wp-content/uploads/2024/06/Uttarakhand-Rescue-Operation.jpg

Load More