/newsfirstlive-kannada/media/post_attachments/wp-content/uploads/2024/07/Spam-Call.jpg)
ಹಲೋ ಮೇಡಮ್, ನಾನು xyz ಫೈನಾನ್ಸ್​ನಿಂದ ಕಾಲ್ ಮಾಡಿರೋದು. ನಿಮ್ಮ ಹೆಸರಲ್ಲಿ 10 ಲಕ್ಷ ರೂಪಾಯಿ ಲೋನ್ ಮಂಜೂರಾಗಿದೆ. ಇದಕ್ಕೆ ಒಂದೇ ಒಂದು ಡಾಕ್ಯುಮೆಂಟ್ ಕೂಡ ನೀವು ಕೊಡೋದು ಬೇಡ. ಜಸ್ಟ್ ಒಂದು ಒಟಿಪಿ ನಂಬರ್ ನಿಮ್ಮ ಮೊಬೈಲ್​ಗೆ ಬರುತ್ತೆ, ಅದನ್ನ ಹೇಳಿ, ನಿಮ್ಮ ಅಕೌಂಟ್ ಡಿಟೇಲ್ಸ್ ಕೊಟ್ರೆ ಸಾಕು. ನಿಮ್ಮ ಅಕೌಂಟ್​ಗೆ ಸೆಕೆಂಡ್​ಗಳಲ್ಲಿ 10 ಲಕ್ಷ ರೂಪಾಯಿ ಬರುತ್ತೆ ಎಂದು ಹೇಳುವ ಕರೆ ನಿಮಗೆ ಎಂದಾದರು ಬಂದಿದೆಯಾ?. ಹಾಗಿದ್ರೆ ಎಚ್ಚರ!.
ಇಂಥಾ ಫೇಕ್ ಕಾಲ್​ಗಳು, ಸ್ಪ್ಯಾಮ್, ಫ್ರಾಡ್ ಕಾಲ್​ಗಳು ಬಹುತೇಕರಿಗೆ ಬಂದಿರುತ್ತೆ. ಮೊಬೈಲ್ ಇದೆ ಅಂದ್ರೆ ಪಕ್ಕಾ ಈ ರೀತಿ ಸೈಬರ್ ಕಳ್ಳರ ಕಾಲ್​ಗಳು ಬಂದೇ ಬರುತ್ತೆ ಬಿಡಿ. ಇದಲ್ಲದೆ, ನಿಜವಾಗಿಯೂ ಬ್ಯಾಂಕ್​ಗಳಿಂದ ಅಥವಾ ಹಣಕಾಸು ಸಂಸ್ಥೆಗಳಿಂದಲೂ ಪ್ರಮೋಷನಲ್ ಕಾಲ್ಸ್ ಕೂಡ ಬಂದಿರುತ್ತೆ. ಆದ್ರೆ ಬ್ಯಾಂಕ್​ಗಳ ಹೆಸರಲ್ಲಿ, ಹಣಕಾಸು ಸಂಸ್ಥೆಗಳ ಹೆಸರಲ್ಲಿ ಆನ್​ಲೈನ್ ಫ್ರಾಡ್​ಗಳು ದಿನೇ ದಿನೆ ಹೆಚ್ಚಾಗ್ತಾನೆ ಇವೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಅಂತಲೇ ಟೆಲಿಕಾಮ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ, ಟ್ರಾಯ್ ಹೊಸ ನಿಯಮವೊಂದನ್ನ ಜಾರಿಗೆ ತಂದಿದೆ.
ಇದನ್ನೂ ಓದಿ: ಪ್ರಭುದೇವ ಅವರ ಅಜ್ಜಿ ನಿಧನ.. ಸಹೋದರನೊಂದಿಗೆ ಮೈಸೂರಿಗೆ ಆಗಮಿಸಿದ ಬಹುಭಾಷಾ ನಟ
ಟ್ರಾಯ್ ಸೂಚನೆಯಂತೆ ಇನ್ಮೇಲೆ ಎಲ್ಲಾ ಹಣಕಾಸು ಸಂಸ್ಥೆಗಳು ತಮ್ಮ ಟ್ರಾನ್ಸಾಕ್ಷನ್ಸ್ ಹಾಗೂ ಸರ್ವೀಸ್ ಕಾಲ್​ಗಳಿಗಾಗಿ 160 ಸಂಖ್ಯೆ ಕಡ್ಡಾಯವಾಗಿ ಇರುತ್ತೆ. ಆಯಾ ಸಂಸ್ಥೆಗಳ ಕರೆ ಮಾಡಿದಾಗ ಮೊದಲಿಗೆ 160 ಸಂಖ್ಯೆ ನಿಮಗೆ DISPLAY ಆಗುತ್ತೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ದಿ ಸೆಕ್ಯೂರಿಟೀಸ್ & ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ ‘ಸೆಬಿ’, ದಿ ಇನ್ಶೂರೆನ್ಸ್ ರೆಗ್ಯುಲೇಟರಿ & ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ ‘IRDAI‘ ಹಾಗೂ ಪೆನ್ಶನ್ ಫಂಡ್ ರೆಗ್ಯುಲೇಟರಿ & ಡೆವಲಪ್ಮೆಂಟ್ ಅಥಾರಿಟಿ ಅಡಿಯಲ್ಲಿ ಬರುವ ಬ್ಯಾಂಕ್​ಗಳು ಸೇರಿದಂತೆ ಎಲ್ಲಾ ಹಣಕಾಸು ಸಂಸ್ಥೆಗಳ ಮೊಬೈಲ್ ಸಂಖ್ಯೆ 160 ಇಂದಲೇ ಶುರುವಾಗುತ್ತೆ. ಈ ಬದಲಾವಣೆ 10 ಡಿಜಿಟ್​ನ ನಂಬರ್​ನಿಂದ ಬರುವ SPAM ಕಾಲ್​ಗಳಿಗೆ ಕಡಿವಾಣ ಹಾಕಲು ಭಾರೀ ಉಪಯುಕ್ತ ಅಂತ ಅಂದಾಜಿಸಲಾಗಿದೆ.
/newsfirstlive-kannada/media/post_attachments/wp-content/uploads/2024/07/call.jpg)
ಇದನ್ನೂ ಓದಿ: ಟ್ರ್ಯಾಕ್ಟರ್ ಸಾಲ, ಬೆಳೆ ಸಾಲ, ಕೈ ಸಾಲ.. ಸಾಲಬಾಧೆಗೆ ಬೇಸತ್ತು ನೇಣು ಹಾಕಿಕೊಂಡ ರೈತ
ಇನ್ನು, ಈ ಹೊಸ 160 ನಂಬರ್​ 160ABCXXX ಮಾದರಿಯಲ್ಲಿ ಇರುತ್ತೆ. ಅಧಿಕೃತ ಹಣಕಾಸು ಸಂಸ್ಥೆಗಳ ಮೊಬೈಲ್ ಸಂಖ್ಯೆ 160ರಿಂದ ಆರಂಭವಾಗುತ್ತದೆ. ಇದ್ರಲ್ಲಿ AB ಅನ್ನೋದು ಯಾವ ಟೆಲಿಕಾನ್ ಸರ್ಕಲ್ ಅನ್ನೋದನ್ನ ತಿಳಿಸುತ್ತೆ. ಉದಾಹರಣೆಗೆ ದೆಹಲಿಗೆ 11 ಹಾಗೂ ಮುಂಬೈಗೆ 22 ಇನ್ನು, C ಅನ್ನೋದು ಟೆಲಿಕಾಮ್ ಆಪರೇಟರ್​ನ ಕೋಡ್ ಆಗಿರುತ್ತೆ.
/newsfirstlive-kannada/media/post_attachments/wp-content/uploads/2024/07/Trai.jpg)
ಇದನ್ನೂ ಓದಿ: ಸಿಕ್ಕಿ ಬಿದ್ದ ಅಂತರ್​ ಜಿಲ್ಲಾ ಕಳ್ಳರು! 244 ಗ್ರಾಂ ಬಂಗಾರ, 2500 ಗ್ರಾಂ ಬೆಳ್ಳಿ ವಶಕ್ಕೆ
ಸೈಬರ್ ಖದೀಮರ ಕಾಟದಿಂದ ಅದೆಷ್ಟೋ ಜನ ಲಕ್ಷಾಂತರ, ಕೋಟ್ಯಂತರ ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ. ಇಂತಹ ಫ್ರಾಡ್​ಗಳಿಗೆ ಕಡಿವಾಣ ಹಾಕೋಕೆ ಈಗ ಟ್ರಾಯ್ ಹೊಸ ಮಾರ್ಗವನ್ನ ಕಂಡುಕೊಂಡಿದೆ. ಇದು ಸಕ್ಸಸ್ ಆದ್ರೆ, ಅಮಾಯಕರ ಜೇಬಿಗೆ ಸ್ವಲ್ಪ ಮಟ್ಟಿಗೆ ಕತ್ತರಿ ಬೀಳೋದು ಕೂಡ ಕಡಿಮೆಯಾಗುತ್ತೆ.
ವಿಶೇಷ ವರದಿ: ನವೀನ್ ಕುಮಾರ್​ ಕೆ​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us