newsfirstkannada.com

OTP ಥಟ್ ಅಂತ ಬರೋದಿಲ್ಲ.. ನ.1ರಿಂದ ದೇಶಾದ್ಯಂತ ಹೊಸ ನಿಯಮ ಜಾರಿ; ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!

Share :

Published September 1, 2024 at 9:07pm

Update September 1, 2024 at 11:02pm

    ನವೆಂಬರ್ 1ರಿಂದ ಹೊಸ ನಿಯಮ ಜಾರಿಗೆ ಟ್ರಾಯ್ ನಿರ್ಧಾರ

    ಆನ್​ಲೈನ್ ವಂಚನೆ ತಡೆಯಲು ಇದು ಅತ್ಯಂತ ಸಹಕಾರಿಯಾಗಬಹುದು

    ಒಟಿಪಿ ಮೂಲಕ ನಡೆಯುವ SPAM, ಅಕ್ರಮ ಹಣ ವರ್ಗಾವಣೆ ಬ್ರೇಕ್!

ನವದೆಹಲಿ: ಈಗಂತೂ ಸ್ಮಾರ್ಟ್​ಫೋನ್, ಇಂಟರ್ನೆಟ್​ ಬಳಕೆ ದೇಶದ ಮೂಲೆ ಮೂಲೆಗೂ ತಲುಪಿದೆ. ಅದರ ಜೊತೆಗೆ ಆನ್‌ಲೈನ್‌ನಲ್ಲಿ ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಸಮಸ್ಯೆ ಬಗೆಹರಿಸಲು TRAI ಅಂದರೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಮುಂದಾಗಿದೆ. ವೈಟ್​ಲಿಸ್ಟ್​ನಲ್ಲಿ ಇಲ್ಲದ URL, OTT Link, APK ಫೈಲ್​ಗಳು ಮತ್ತು ಕೆಲವು ಸಂಖ್ಯೆಗಳಿಂದ ಬರುವ ಎಸ್​ಎಂಎಸ್​ ಸಂದೇಶ ನಿಯಂತ್ರಣಕ್ಕೆ ನಿರ್ಧರಿಸಿದೆ.

ಇದನ್ನೂ ಓದಿ: RBI ಆಫೀಸರ್​ಗೆ ಮಹಾ ಮೋಸ.. ಲಕ್ಷ ಲಕ್ಷ ಹಣ ಪೀಕಿದ ಸೈಬರ್​ ಖದೀಮರು; ಅಸಲಿಗೆ ಆಗಿದ್ದೇನು? 

ಒಟಿಪಿ ಅಂದರೆ One time Password(OTP). ನಾವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನಿಂದ ಹಣ ವರ್ಗಾವಣೆಗೆ ಅಥವಾ ಅನ್​ಲೈನ್​ನಲ್ಲಿ ಏನಾದರೂ ಖರೀದಿಗೆ ಒಟಿಪಿ ಬಹುಮುಖ್ಯ. ಬ್ಯಾಂಕಿಂಗ್ ವ್ಯವಸ್ಥೆ, ಒಟಿಪಿ ಬಗ್ಗೆ ಅರಿಯದ ಜನರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ. ಜನರ ಮುಗ್ದತೆ ಬಳಸಿಕೊಂಡ ವಂಚಕರು ನಿತ್ಯ ವಂಚಿಸುತ್ತಲೇ ಇದ್ದಾರೆ. ಇನ್ಮುಂದೆ ನೀವು ಮೋಸ ಹೋಗುವುದು ತಪ್ಪಲಿದೆ. ಇದೀಗ ಒಟಿಪಿ ವಿಚಾರಕ್ಕೆ TRAI, ಒಟಿಪಿ ವಿಚಾರಕ್ಕೆ ಹೊಸ ನಿಯಮ ಜಾರಿ ಮಾಡುತ್ತಿದೆ.

ಒಟಿಪಿಯಲ್ಲಿ ಏನು ಬದಲಾವಣೆ?
ಈ ಹಿಂದೆ ನೀವು ಆನ್​ಲೈನ್‌ನಲ್ಲಿ ಏನನ್ನಾದ್ರೂ ಖರೀದಿ ಮಾಡಿದ್ರೆ ಕ್ಷಣಗಳಲ್ಲೇ ನಿಮ್ಮ ಮೊಬೈಲ್​ಗೆ ಒಟಿಪಿ ಬರುತ್ತಿತ್ತು. ಇದೀಗ ಒಟಿಪಿ ಬರುವುದು ಕೊಂಚ ತಡವಾಗಲಿದೆ. ಅಂದರೆ ಅದು ಕೆಲ ನಿಮಿಷಗಳಲ್ಲಿ ನಿಮ್ಮ ಮೊಬೈಲ್​ಗೆ ಬರಲಿದೆ. ಅದು ನವೆಂಬರ್ 1ರಿಂದ ಜಾರಿಗೆ ಟ್ರಾಯ್ ನಿರ್ಧರಿಸಿದೆ. ಒಟಿಪಿ ವಿಳಂಬದಿಂದ ಆನ್​ಲೈನ್ ಶಾಪಿಂಗ್, ಬುಕ್ಕಿಂಗ್​ಗಳಲ್ಲೂ ಸ್ವಲ್ಪ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಸೈಬರ್​ ಖದೀಮರೇ ಎಚ್ಚರ! ಸ್ಕ್ಯಾಮ್​​ ಮಾಡಿ ಸಿಕ್ಕಿಬಿದ್ರೆ ಅಂತಿಂಥಾ ಶಿಕ್ಷೆ ಅಲ್ಲ! ಸೀದಾ ಜೈಲೇ! 

ಒಟಿಪಿ ವಿಳಂಬಕ್ಕೆ ಕಾರಣ ಏನು?
ಗ್ರಾಹಕರ ಸುರಕ್ಷತೆ ದೃಷ್ಟಿಯಿಂದಲೇ ಟ್ರಾಯ್ ಈ ನಿರ್ಧಾರ ಕೈಗೊಂಡಿದೆ. ಇದರಿಂದ ಸ್ವಲ್ಪ ಅಡಚಣೆ ಉಂಟಾಗಬಹುದು. ಆದರೆ ಇತ್ತೀಚೆಗೆ ಹೆಚ್ಚಾಗಿಯೇ ನಡೆಯುತ್ತಿರುವ ಆನ್​ಲೈನ್ ವಂಚನೆ ತಡೆಯಲು ಇದು ಸಹಕಾರಿಯಾಗಬಹುದು. ವಂಚಕರಿಂದ ನಿಮ್ಮನ್ನು ರಕ್ಷಿಸಲು ಟ್ರಾಯ್ ಮುಂದಾಗಿದೆ. ಒಟಿಪಿ ಮೂಲಕ ನಡೆಯುವ SPAM, ಅಕ್ರಮ ಹಣ ವರ್ಗಾವಣೆ ತಪ್ಪಿಸುವುದು ಇದರ ಹಿಂದಿನ ಉದ್ದೇಶ.
ಈ ನಿಯಮವು ಇಂದಿನಿಂದಲೇ ಜಾರಿಯಾಗಿದೆ. ಹೊಸ ನಿಯಮದಿಂದ ಆನ್​ಲೈನ್ ಮೋಸ, ವಂಚನೆ ತುಸು ಕಡಿಮೆಯಾಗಬಹುದು.

ಗೂಗಲ್​ ಮಹತ್ವದ ನಿರ್ಧಾರ
ಡಿಜಿಟಲ್ ಸುರಕ್ಷತೆ ಹೆಚ್ಚಿಸಲು ಗೂಗಲ್ ತನ್ನ ಪ್ಲೇ ಸ್ಟೋರ್​ನಿಂದ ಕಡಿಮೆ ಗುಣಮಟ್ಟದ ಅಪ್ಲಿಕೇಶನ್ ವಿರುದ್ಧ ಕ್ರಮ ಕೈಗೊಂಡಿದೆ. ನಕಲಿ ಅಪ್ಲಿಕೇಶನ್ ತೆಗೆದು ಹಾಕಲು ಗೂಗಲ್ ನಿರ್ಧರಿಸಿದೆ. ಅದು ಕೂಡ ಇಂದಿನಿಂದಲೇ ಜಾರಿಯಾಗಲಿದೆ. ಇದರಿಂದ ಬಳಕೆದಾರರಿಗೆ ಸುರಕ್ಷಿತ ಮತ್ತು ಗೌಪ್ಯತೆ ಖಾತ್ರಿಪಡಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

OTP ಥಟ್ ಅಂತ ಬರೋದಿಲ್ಲ.. ನ.1ರಿಂದ ದೇಶಾದ್ಯಂತ ಹೊಸ ನಿಯಮ ಜಾರಿ; ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/09/Mobile-OTP-Trai.jpg

Load More