/newsfirstlive-kannada/media/post_attachments/wp-content/uploads/2024/05/MND-TRAIN.jpg)
ಮಂಡ್ಯ: ಬಿರುಗಾಳಿ ಸಹಿತ ಭಾರೀ ಮಳೆಗೆ ಚಲಿಸುತ್ತಿದ್ದ ಟ್ರೈನ್ ಮೇಲೆ ಮರ ಬಿದ್ದ ಘಟನೆ ಮಂಡ್ಯದ ಉಮ್ಮಡಹಳ್ಳಿ ಗೇಟ್ ಬಳಿ ನಡೆದಿದೆ.
ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಿಶ್ವಮಾನವ ಟ್ರೈನ್ ಮೇಲೆ ಮರ ಬಿದ್ದಿದ್ದು, ರೈಲಿನ ಮುಂಭಾಗದ ಗ್ಲಾಸ್ ಪುಡಿ ಪುಡಿಯಾಗಿ, ಲೋಕೋ ಪೈಲೆಟ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯದ ನಡುವೆಯೂ ಟ್ರೈನ್ ಅನ್ನು ಮಂಡ್ಯ ರೈಲ್ವೆ ನಿಲ್ದಾಣದ ವರೆಗೆ ಚಾಲಕ ತಂದಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ವಿಶ್ವಮಾನವ ರೈಲು ತೆರಳುತ್ತಿತ್ತು. ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ಟ್ರೈನ್ ನಿಲ್ಲಿಸಿ ಒಡೆದ ಗ್ಲಾಸ್ ಅನ್ನು ಬದಲಿಸಲಾಗಿದೆ. ಗಾಯಾಳು ಲೋಕೋ ಪೈಲೆಟ್​ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ಗಾಳಿ ಮಳೆಗೆ ಭಾರೀ ಅನಾಹುತ.. ಹೋರ್ಡಿಂಗ್ ಬಿದ್ದು 12 ಜನ ಸಾವು
/newsfirstlive-kannada/media/post_attachments/wp-content/uploads/2024/05/MND_TRAIN.jpg)
ಇನ್ನೂ 5 ದಿನ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಮಳೆ ಅಲರ್ಟ್ ನೀಡಲಾಗಿದೆ. ಹವಾಮಾನ ಇಲಾಖೆ ಬಿರುಗಾಳಿ ಸಹಿತ ಮಳೆಯಾರ್ಭಟದ ಮುನ್ಸೂಚನೆ ನೀಡಿದೆ. ಮಳೆಯಲ್ಲಿ ಸಂಚರಿಸುವಾಗ ಜವಾಬ್ದಾರಿಯುತವಾಗಿ ಚಾಲನೆ ಮಾಡಿ ಅನ್ನೋದೆ ನಮ್ಮ ಕಳಕಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us