Advertisment

ಗಾಳಿ ಇಲ್ಲ, ಮಳೆ ಇಲ್ಲ..! ಬೆಂಗಳೂರಲ್ಲಿ ವೈದ್ಯ ದಂಪತಿ ಬದುಕಿದ್ದೇ ದೊಡ್ಡದು..!

author-image
Ganesh
Updated On
ಗಾಳಿ ಇಲ್ಲ, ಮಳೆ ಇಲ್ಲ..! ಬೆಂಗಳೂರಲ್ಲಿ ವೈದ್ಯ ದಂಪತಿ ಬದುಕಿದ್ದೇ ದೊಡ್ಡದು..!
Advertisment
  • ನಿನ್ನೆ ಸಂಜೆ 4 ಗಂಟೆ ಹೊತ್ತಿಗೆ ಜೀವನ್ ಭೀಮಾ ನಗರದಲ್ಲಿ ಅನಾಹುತ
  • ಗಾಳಿ, ಮಳೆ ಇಲ್ಲ ಅಂದರೂ ಮರಗಳು ಬೀಳುತ್ತವೆ, ಹುಷಾರ್!
  • ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಜನಾಕ್ರೋಶ

ಬೆಂಗಳೂರು: ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಮತ್ತೊಂದು ಯಡವಟ್ಟು ನಡೆದಿದ್ದು, ವೈದ್ಯರೊಬ್ಬರು ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

Advertisment

ಅಪಾಯಕಾರಿ ಮರಗಳನ್ನು ಕಡಿಯದ ಹಾಗೆಯೇ ಬಿಟ್ಟದ ಪರಿಣಾಮ ಕಾರಿನ ಮೇಲೆ ಬಿದ್ದ ಹೆಮ್ಮರ ಒಂದು ಬಿದ್ದಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ನಿನ್ನೆ ಸಂಜೆ 4 ಗಂಟೆ ಹೊತ್ತಿಗೆ ಜೀವನ್ ಭೀಮಾ ನಗರದಲ್ಲಿ ಅನಾಹುತ ನಡೆದಿದೆ.

ಇದನ್ನೂ ಓದಿ:7 ಸಿಕ್ಸರ್, 9 ಬೌಂಡರಿ..! ಜೈಸ್ವಾಲ್ ಸ್ಫೋಟಕ ಶತಕ.. ಹಳಿಗೆ ಮರಳಿದ ಯಂಗ್​ಗನ್..!

publive-image

ಬ್ರೂಕ್ ಫೀಲ್ಡ್ ಆಸ್ಪತ್ರೆಯ ಎಂಡಿ ಡಾಕ್ಟರ್ ಪ್ರದೀಪ್ ದಂಪತಿ ಕಾರಿನ ಮೇಲೆ ಬಿದ್ದ ಹೆಮ್ಮರ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ವೈದ್ಯ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರಿಗೂ ಗಾಯಗಳಾಗಿದ್ದು ಕಾಲಿಗೆ ಬಲವಾದ ಹೊಡೆತ ಬಿದ್ದಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕಾರು ಸಂಪೂರ್ಣ ಜಖಂ ಆಗಿದೆ.

Advertisment

ಇದನ್ನೂ ಓದಿ:ಸರ್ಕಾರಿ ಕಚೇರಿಯಲ್ಲಿ ಬಟ್ಟೆಬಿಚ್ಚಿ ಕೂತ ನೌಕರ.. ತಹಶೀಲ್ದಾರ್ ಕಚೇರಿಯಲ್ಲೇ ಅಸಭ್ಯ ವರ್ತನೆ..!

publive-image

ಬೆಂಗಳೂರಿನಲ್ಲಿ ಗಾಳಿ ಮಳೆ ಇಲ್ಲ ಅಂದರೂ ಮರಗಳು ಬೀಳುತ್ತವೆ. ಅದಕ್ಕೆ ಕಾರಣ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ. ಹಳೆ ಮರಗಳನ್ನು ಗುರುತಿಸಿ ಅಪಾಯಕಾರಿ ರೆಂಬೆ, ಕೊಂಬೆಗಳನ್ನು ಕಡಿಯದ ಪರಿಣಾಮ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:11 ಸಾವಿರ ಕೆಜಿ ಚಿನ್ನ.. 18,817 ಸಾವಿರ ಕೋಟಿ ಮೀಸಲು ನಗದು.. ಇದು ವಿಶ್ವದ ಶ್ರೀಮಂತ ದೇವಾಲಯ

Advertisment

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment