Advertisment

ಬೆಂಗಳೂರಲ್ಲಿ ಮತ್ತೊಂದು ಅನಾಹುತ.. ಹೊಸ ಕಾರಿನ ಮೇಲೆ ಮರಬಿದ್ದು ದುರ್ಘಟನೆ

author-image
Ganesh
Updated On
ಬೆಂಗಳೂರಲ್ಲಿ ಮತ್ತೊಂದು ಅನಾಹುತ.. ಹೊಸ ಕಾರಿನ ಮೇಲೆ ಮರಬಿದ್ದು ದುರ್ಘಟನೆ
Advertisment
  • ಬೆಂಗಳೂರಲ್ಲಿ ಹೆಚ್ಚುತ್ತಿವೆ ಮರ ಧರೆಶಾಹಿ ಪ್ರಕರಣಗಳು
  • ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಅನಾಹುತ
  • ಇತ್ತೀಚಿಗಷ್ಟೇ ಬ್ರೂಕ್ ಫಿಲ್ಡ್ ಆಸ್ಪತ್ರೆ ಎಂಡಿ ಕಾರಿನ ಮೇಲೆ ಮರ ಬಿದ್ದಿತ್ತು

ಬೆಂಗಳೂರಿನಲ್ಲಿ ಮರ ಧರೆಶಾಹಿ ಪ್ರಕರಣಗಳು ಮತ್ತೆ ಮುಂದುವರಿದಿದೆ. ನಿಂತಿದ್ದ ಹೋಂಡಾ ಎಲಿವೇಟ್ SUV ಬ್ರಾಂಡ್ ಹೊಸ ಕಾರಿನ ಮೇಲೆ ಬ್ರಹತ್ ಮರವೊಂದು ಬಿದ್ದು ಅನಾಹುತ ಸೃಷ್ಟಿಯಾಗಿದೆ.

Advertisment

ಲಾವೆಲ್ಲೇ ರೋಡ್​ನಲ್ಲಿ ನಿಂತಿದ್ದ ಐಷಾರಾಮಿ ಕಾರಿನ ಮೇಲೆ ಮರ ಉರುಳಿ ಬಿದ್ದಿದೆ. ಕಾರಿನ ಗ್ಲಾಸ್ ಪುಡಿ ಪುಡಿ ಜೊತೆಗೆ ಕಂಪ್ಲೀಟ್ ಜಖಂ ಆಗಿದೆ ಹೊಸ ಕಾರು. ಕಾರಿನಲ್ಲಿ ಯಾರೂ ಇರಲಿಲ್ಲ, ಒಂದು ವೇಳೆ ಯಾರಾದರೂ ಇದ್ದಿದ್ದರೆ ಕತೆ ಏನಾಗುತ್ತಿತ್ತು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಅನಾಹುತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಅಪಾಯಕಾರಿ ಮರಗಳ ಕಡಿಯದ ಹಿನ್ನೆಲೆಯಲ್ಲಿ ಮರಗಳು ರಸ್ತೆ ಮೇಲೆ ಬೀಳುತ್ತಿವೆ. ಹಳೆ ಮರವನ್ನ ಗುರುತಿಸಿ ಪರಿಹಾರ ಕಂಡುಕೊಳ್ಳದೇ ಇರೋದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್​.. ಪ್ಲೇ ಆಫ್ ಕನಸು ಕಾಣ್ತಿರುವ ಆರ್​ಸಿಬಿಗೆ ಇದು ಆತಂಕದ ಸುದ್ದಿ..!

ಮಾನ್ಸೂನ್ ಆರಂಭಕ್ಕೂ ಮುನ್ನವೇ ಹಳೆ ಮರಗಳನ್ನು ಸಮೀಕ್ಷೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇತ್ತೀಚಿಗಷ್ಟೇ ಚಲಿಸುತ್ತಿದ್ದ ಬ್ರೂಕ್ ಫಿಲ್ಡ್ ಆಸ್ಪತ್ರೆ ಎಂಡಿ ಕಾರಿನ ಮೇಲೆ ಮರ ಬಿದ್ದಿತ್ತು.

Advertisment

ಇದನ್ನೂ ಓದಿ:ಇನ್​ಸ್ಟಾದಲ್ಲಿ ಅರಳಿದ ಒಂದು ಪ್ರೀತಿ..! ಯಾಕೆ ಹೀಗೆ ಆಯಿತು.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.. ಏನಂತೀರಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment