Advertisment

ಮತ್ತೊಂದು ವಿವಾದದಲ್ಲಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ; ಏನಿದು ‘ಪೊಂಜಿ’ ಹಗರಣ?

author-image
Ganesh
Updated On
ಮತ್ತೊಂದು ವಿವಾದದಲ್ಲಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ; ಏನಿದು ‘ಪೊಂಜಿ’ ಹಗರಣ?
Advertisment
  • ಬಾಲಿವುಡ್ ಸ್ಟಾರ್ ದಂಪತಿಗೆ ಮತ್ತೆ ಸಂಕಷ್ಟ
  • ಬರೋಬ್ಬರಿ 97 ಕೋಟಿ ಮೌಲ್ಯದ ಆಸ್ತಿ ಜಪ್ತಿ
  • ಶಿಲ್ಪಾ ಶೆಟ್ಟಿ ಹೆಸರಿನಲ್ಲಿದ್ದ ಫ್ಲಾಟ್​ ಕೂಡ ED ವಶಕ್ಕೆ

ನೀಲಿ ಚಿತ್ರಗಳ ತಯಾರಿ ಆರೋಪದಡಿ ಜೈಲು ಸೇರಿದ್ದ ಉದ್ಯಮಿ ರಾಜ್​ ಕುಂದ್ರಾಗೆ ಇಡಿ ಅಧಿಕಾರಿಗಳು ಶಾಕ್​ ಕೊಟ್ಟಿದ್ದಾರೆ. ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಪತಿಯಾಗಿರುವ ರಾಜ್​ ಕುಂದ್ರಾ ಮತ್ತೊಂದು ಹಗರಣ ಬಯಲಾಗಿದ್ದು, ಜಾರಿ ನಿರ್ದೇಶನಾಲಯ ದಂಪತಿಯ ಆಸ್ತಿಗಳನ್ನು ಸೀಜ್​ ಮಾಡಿದೆ.

Advertisment

ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್​ ಕುಂದ್ರಾ ದಂಪತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2021ರಲ್ಲಿ ನೀಲಿ ಚಿತ್ರಗಳ ತಯಾರಿಕೆ ಹಗರಣದಲ್ಲಿ ಭಾಗಿಯಾಗಿ ಜೈಲು ಪಾಲಗಿದ್ದ ರಾಜ್​ ಕುಂದ್ರಾ, ಈಗ ಮತ್ತೊಂದು ಹಗರಣದಲ್ಲಿ ಭಾಗಿಯಾಗಿರೋದು ಬೆಳಕಿಗೆ ಬಂದಿದೆ.

publive-image

ಬಾಲಿವುಡ್​​ ಸೆಲೆಬ್ರಿಟಿ ದಂಪತಿಗೆ ಮತ್ತೆ ಸಂಕಷ್ಟ
ಬಾಲಿವುಡ್​ನ ಸೆಲೆಬ್ರಿಟಿ ದಂಪತಿ ಸಾಲಿನಲ್ಲಿ ಕಾಣಿಸಿಕೊಳ್ಳುವ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ದಂಪತಿಗಳಿಗೆ ಇಡಿ ಅಧಿಕಾರಿಗಳು ಶಾಕ್​ ಕೊಟ್ಟಿದ್ದಾರೆ.. ಬಿಟ್​ಕಾಯಿನ್​ ಪೊಂಜಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್​ ಕುಂದ್ರಾಗೆ ಸೇರಿದ 97.79 ಕೋಟಿ ರೂಪಾಯಿ ಆಸ್ತಿಯನ್ನು ವಶಕ್ಕೆ ಪಡೆದಿದೆ. ಇದರ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಹೆಸರಿನಲ್ಲಿದ್ದ ಫ್ಲಾಟ್​ವೊಂದನ್ನು ಸಹ ಇಡಿ ವಶಕ್ಕೆ ಪಡೆದಿದೆ..

ಇದನ್ನೂ ಓದಿ:ಇಂದು ಮೊದಲ ಹಂತದ ಮತದಾನ; ಅಣ್ಣಾಮಲೈ ಸೇರಿ ಅಖಾಡದಲ್ಲಿರೋ ಘಟಾನುಘಟಿಗಳು ಯಾಱರು?

Advertisment

ಏನಿದು ‘ಪೊಂಜಿ’ ಹಗರಣ?
ಬಿಟ್‌ಕಾಯಿನ್ ಕೊಡಿಸುವುದಾಗಿ ಜನರಿಗೆ ಆಮಿಷವೊಡ್ಡಿ ಅಮಿತ್​ ಭಾರದ್ವಾಜ್ ಎಂಬ ಉದ್ಯಮಿ ಸುಮಾರು 6,600 ಕೋಟಿ ಹಣ ಸಂಗ್ರಹಿಸಿ ವಂಚಿಸಿದ್ದರು, ಅಮಿತ್​​ ಭಾರದ್ವಾಜ್​​ ಈ ಪೊಂಜಿ ಹಗರಣದ ಮಾಸ್ಟರ್​ ಮೈಂಡ್​​, 2017ರಲ್ಲಿ ಈ ಹಗರಣ ಬೆಳಕಿಗೆ ಬಂದಿದ್ದು, ಇಡಿ ಅಧಿಕಾರಿಗಳು ತನಿಖೆ ಕೈ ಆರಂಭಿಸಿತ್ತು, ಆದ್ರೆ ಹಗರಣದ ಆರೋಪಿ ವಿಜಯ್​ ಅವರಿಂದ ರಾಜ್​ ಕುಂದ್ರಾ 265 ಬಿಟ್​ಕಾಯಿನ್​ ಪಡೆದಿದ್ದಾರೆ ಎಂದು ಇಡಿ ಆರೋಪಿಸಿದೆ. ಈ ಹಿನ್ನೆಲೆ ಅಧಿಕಾರಿಗಳು ರಾಜ್​ ಕುಂದ್ರಾ ಅವರಿಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡಿದೆ.

ಇದನ್ನೂ ಓದಿ:ಮತ್ತೆ ಪೋಷಕರ ನಿದ್ದೆಗೆಡಿಸಿದ ನೆಸ್ಲೆ ಕಂಪನಿ.. ನಿಮ್ಮ ಮಗುವಿಗೆ Cerelac ನೀಡುವ ಮುನ್ನ ಹುಷಾರ್​..!

publive-image

ಆರೋಪ ನಿರಾಕರಿಸಿದ ‘ಸ್ಟಾರ್​​ ದಂಪತಿ​​’
ಇಡಿ ಅಧಿಕಾರಿಗಳು ಆಸ್ತಿಗಳನ್ನು ಸೀಜ್​ ಮಾಡಿದ್ರೂ, ರಾಜ್​ ಕುಂದ್ರಾ ಮತ್ತು ನಟಿ ಶಿಲ್ಪಾ ಶೆಟ್ಟಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ನಾವು ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ ಅಂತ ಆರೋಪ ನಿರಾಕರಿಸಿದ್ದಾರೆ. ಒಟ್ಟಾರೆ, ನೀಲಿ ಚಿತ್ರಗಳ ತಯಾರಿಕೆ ಪ್ರಕರಣದಿಂದ ಸಾಕಷ್ಟು ಅವಮಾನಕ್ಕೆಗೊಳಗಾಗಿದ್ದ ಶಿಲ್ಪಾ ಶೆಟ್ಟಿಗೆ ಗಂಡನಿಂದ ಮತ್ತೆ ಮುಜುಗರಕ್ಕೊಳಗಾಗುವ ಪ್ರಸಂಗ ಎದುರಾಗಿರುವುದಂತು ಸತ್ಯ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment