/newsfirstlive-kannada/media/post_attachments/wp-content/uploads/2024/05/Tamil-Nadu-Youtubers.jpg)
ಚೆನ್ನೈ: ಹುಟ್ಟುವ ಮಗು ಹೆಣ್ಣೋ.. ಗಂಡೋ.. ಗರ್ಭಿಣಿ ಹೊಟ್ಟೆಯಲ್ಲಿರುವ ಮಗುವಿನ ಲಿಂಗಪತ್ತೆ ಪರೀಕ್ಷೆ ಮಾಡುವುದಕ್ಕೆ ಭಾರತದಲ್ಲಿ ನಿರ್ಬಂಧವಿದೆ. ಹುಟ್ಟುವುದಕ್ಕೆ ಮುಂಚೆ ಲಿಂಗ ಪರೀಕ್ಷೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. Pre-Conception and Pre-Natal Diagnostic Techniques (PC-PNDT) Act ಈ ಕಾನೂನು ಭಾರತದಲ್ಲಿ ಮಾತ್ರ ಅನ್ವಯ. ಆದರೆ ವಿದೇಶದಲ್ಲಿ ಹುಟ್ಟುವ ಮಗು ಹೆಣ್ಣೋ, ಗಂಡೋ ಅಂತ ಪರೀಕ್ಷೆ ಮಾಡಿಸಲು ಅವಕಾಶವಿದೆ.
ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಲಿಂಗ ಪತ್ತೆ ಪರೀಕ್ಷೆ ಮಾಡಲು ಅನುಮತಿ ನೀಡಲಾಗಿದೆ. ಇದರ ಲಾಭ ಪಡೆದುಕೊಂಡ ತಮಿಳುನಾಡಿನ ಯೂಟ್ಯೂಬರ್ ಒಬ್ಬರು ಜೆಂಡರ್ ರಿವೀಲ್ ಪಾರ್ಟಿ ಮಾಡಿದ್ದಾರೆ. ಹುಟ್ಟುವ ಮಗು ಹೆಣ್ಣೋ.. ಗಂಡೋ ಅನ್ನೋದು ಬಹಿರಂಗ ಮಾಡಿಕೊಂಡು ಪಾರ್ಟಿ ಮಾಡಿರೋದು ತೀವ್ರ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ:ಆತ್ಮಹತ್ಯೆ ಅಲ್ಲ ಬರ್ಬರ ಹತ್ಯೆ.. ಪ್ರಬುದ್ಧ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ತಮಿಳುನಾಡು ಯ್ಯೂಟೂಬರ್ ಇರ್ಫಾನ್ ಎಂಬುವವರು ದುಬೈನಲ್ಲಿ ಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಂಡು ಬಂದು ಚೆನ್ನೈನಲ್ಲಿ ಜೆಂಡರ್ ರಿವೀಲ್ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿ ವಿಡಿಯೋ ವೈರಲ್ ಆಗಿದ್ದು, ಯ್ಯೂಟೂಬರ್ ಇರ್ಫಾನ್ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ.
ಇರ್ಫಾನ್ ಅವರು ಮೂಲತಃ ಫುಡ್ ವ್ಲಾಗರ್ ಆಗಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 4 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್ ಇದ್ದಾರೆ. ಈ ಚಾನೆಲ್‌ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಭಾರತದಲ್ಲಿ ಜೆಂಡರ್ ರಿವೀಲ್ ಪಾರ್ಟಿ ಸೆಲೆಬ್ರೇಟ್ ಮಾಡಿರೋದಕ್ಕೆ ಲೀಗಲ್ ನೋಟಿಸ್ ನೀಡಲಾಗಿದೆ.
ಇತ್ತೀಚೆಗೆ ಇರ್ಫಾನ್ ಅವರು ತನ್ನ ಪತ್ನಿಯ ಜೊತೆ ದುಬೈ ಪ್ರವಾಸಕ್ಕೆ ಹೋಗಿದ್ದಾರೆ. ದುಬೈನಲ್ಲೇ ಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದಾರೆ. ಇದಾದ ಬಳಿಕ ಕಳೆದ ಮೇ 2ರಂದು ಭಾರತದಲ್ಲಿ ತನ್ನ ಸ್ನೇಹಿತರು, ಸಂಬಂಧಿಕರ ಜೊತೆ ಜೆಂಡರ್ ರಿವೀಲ್ ಪಾರ್ಟಿ ಮಾಡಿ ಸೆಲೆಬ್ರೇಟ್ ಮಾಡಿದ್ದರು. ಮೇ 18ರಂದು ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೆಂಡರ್ ರಿವೀಲ್ ಪಾರ್ಟಿಯ ವಿಡಿಯೋ ಗಮಿನಿಸಿರುವ ತಮಿಳುನಾಡು ಆರೋಗ್ಯ ಇಲಾಖೆ ಯೂಟ್ಯೂಬರ್‌ಗೆ ನೋಟಿಸ್ ಕೊಟ್ಟಿದೆ. ಮಗು ಹುಟ್ಟುವುದಕ್ಕೂ ಮುಂಚೆ ಲಿಂಗ ಅನೌನ್ಸ್ ಮಾಡಿದ್ದಾರೆ. ಇದಕ್ಕೆ ಕಾರಣ ಕೇಳಿ ನೋಟಿಸ್ ನೀಡಿದ್ದು, ಮುಂದೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ತೀವ್ರ ಹೃದಯಾಘಾತ.. ಅಮ್ಮನ ಎದುರೇ ಕಣ್ಮುಚ್ಚಿದ 1 ವರ್ಷದ ಪುಟ್ಟ ಕಂದಮ್ಮ; ಆಗಿದ್ದೇನು?
ಜೆಂಡರ್ ರಿವೀಲ್ ಪಾರ್ಟಿಯಲ್ಲಿ ಇರ್ಫಾನ್ ಭಾರತದಲ್ಲಿ ಲಿಂಗ ಪತ್ತೆ ಮಾಡಲು ಅವಕಾಶವಿಲ್ಲ. ಆದರೆ ದುಬೈ ಸೇರಿದಂತೆ ಅನೇಕ ದೇಶಗಳಲ್ಲಿ ಇದಕ್ಕೆ ಅನುಮತಿ ಇದೆ ಎಂದು ಹೇಳಿಕೊಂಡಿದ್ದಾರೆ. ಇರ್ಫಾನ್ ಅವರ ಈ ನಡೆ ಭಾರೀ ಚರ್ಚೆಗೆ ಗುರಿಯಾಗಿದ್ದು, ತಮಿಳುನಾಡು ಆರೋಗ್ಯ ಇಲಾಖೆ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ