newsfirstkannada.com

ಟೆಂಪೋ-ಟ್ರಕ್​ ಅಪಘಾತ; ಅಯೋಧ್ಯೆಯಲ್ಲಿ ಕಲಬುರಗಿ ಮೂಲದ ಮೂವರ ಸಾವು; 11 ಮಂದಿಗೆ ಗಾಯ

Share :

Published May 27, 2024 at 7:17am

    ವಾರಣಾಸಿಗೆ ತೆರಳಿದ್ದ ಕಲಬುರಗಿ ಮೂಲದ ಒಂದೇ ಕುಟುಂಬ

    4 ದಿನಗಳ ಹಿಂದೆ ರೈಲಿನ ಮೂಲಕ ವಾರಣಾಸಿ ಹೊರಟಿದ್ದ ಕುಟುಂಬ

    ಒಂದೇ ಕುಟುಂಬದ 22 ಮಂದಿ ಇದ್ದ ಟೆಂಪೋಗೆ ಟ್ರಕ್ ಡಿಕ್ಕಿ, 3 ಸಾವು

ಕಲಬುರಗಿ: ಅಯೋಧ್ಯೆಯ ಪ್ರಯಾಗ್​​ರಾಜ್​ ಹೆದ್ದಾರಿಯಲ್ಲಿ ಕಲಬುರಗಿಯ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಸಾವನ್ನಪ್ಪಿದವರನ್ನು ಕಲಬುರಗಿಯ ಓಂನಗರದವರು ಎಂದು ಗುರುತಿಸಲಾಗಿದೆ.

ಒಂದೇ ಕುಟುಂಬದ 22 ಮಂದಿ ಟೆಂಪೋ ಮೂಲಕ ಅಯೋಧ್ಯೆಗೆ ತೆರಳುತ್ತಿದ್ದರು. ಈ ವೇಳೆ ಟ್ರಕ್​ ಡಿಕ್ಕಿ ಹೊಡೆದಿದೆ. ಪರಿಣಾಮ ಮೂರುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 11 ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಇಬ್ಬರನ್ನು ಶಿವರಾಜ್​, ತಂಗೆಮ್ಮ ಎಂದು ಗುರುತಿಸಲಾಗಿದೆ. ಮತ್ತೋರ್ವರ ಹೆಸರು ತಿಳಿದುಬಂದಿಲ್ಲ.

ಇದನ್ನೂ ಓದಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣಾರ್ಭಟ.. ಬಾಲಕಿ ಸಾವು, ಸಿಡಿಲು ಬಡಿದು ಮಳೆಯಲ್ಲೂ ಹೊತ್ತಿ ಉರಿದ ತೆಂಗಿನ ಮರ

ಮೃತರ ಸಂಬಂಧಿ ಈ ಬಗ್ಗೆ ಮಾತನಾಡಿದ್ದು, ನಾಲ್ಕು ದಿನಗಳ ಹಿಂದೆ ರೈಲಿನ ಮೂಲಕ ವಾರಣಾಸಿ ತೆರಳಿದ್ದರು. ಅಲ್ಲಿಂದ ಅಯೋಧ್ಯೆಗೆ 30 ಕಿ.ಮೀ ದೂರವಿದ್ದ ಕಾರಣ ಬಾಡಿಗೆ ಟೆಂಪೋ ಬಾಡಿಗೆಗೆ ಪಡೆದರು. ಆದರೆ ತೆರಳುವ ವೇಳೆ ಪ್ರಯಾಗ್​ ರಾಜ್​ ಹೆದ್ದಾರಿಯಲ್ಲಿ ಟ್ರಕ್​ಗೆ ಟೆಂಪೋ ಡಿಕ್ಕಿ ಹೊಡೆದಿದೆ. 3 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೆಂಪೋ-ಟ್ರಕ್​ ಅಪಘಾತ; ಅಯೋಧ್ಯೆಯಲ್ಲಿ ಕಲಬುರಗಿ ಮೂಲದ ಮೂವರ ಸಾವು; 11 ಮಂದಿಗೆ ಗಾಯ

https://newsfirstlive.com/wp-content/uploads/2024/05/Ayyodhya.jpg

Load More